ಆನ್‌ಲೈನ್ ಜಗತ್ತಿನಲ್ಲಿ ಹೊಸ ಅಲೆ ಎಬ್ಬಿಸಿರುವ, 9 ಭಾರತೀಯ ಭಾಷೆಗಳಲ್ಲಿ ಲಭ್ಯವಿರುವ ದೇಶದ ಮೊದಲ ಪೋರ್ಟಲ್ ವೆಬ್‌ದುನಿಯಾಕ್ಕೆ ಜಾಗತಿಕ ಮನ್ನಣೆ ಲಭಿಸಿದೆ.
WD
ಜಗತ್ತಿನ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆ ಫೋಕ್ಸ್‌ವ್ಯಾಗನ್ (Volkswagen - ಜರ್ಮನ್ ಭಾಷೆಯಲ್ಲಿ ಉಚ್ಚರಿಸುವುದು ಹೀಗೆ) ಆಹ್ವಾನದ ಮೇರೆಗೆ ವೆಬ್‌ದುನಿಯಾ ಬಳಗದ ಅಂತರಜಾಲ ಕನ್ನಡ ತಾಣದ (Kannada.Webdunia.Com) ಸಂಪಾದಕ ಅವಿನಾಶ್ ಬಿ. ಅವರು ಜರ್ಮನಿಗೆ ತೆರಳುತ್ತಿದ್ದಾರೆ.
ಪಿಟಿಐ, ಯುಎನ್ಐ, ಟೈಮ್ಸ್ ಆಫ್ ಇಂಡಿಯಾ, ಟೈಮ್ಸ್ ನೌ, ಸಿಎನ್‌ಬಿಸಿ, ಎನ್‌ಡಿಟಿವಿ, ಝೀ, ಬೂಮರಾಂಗ್, ಡಿಎನ್ಎ, ದಿ ಹಿಂದು ಮುಂತಾದ ರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ 20 ಪತ್ರಕರ್ತರ ತಂಡದಲ್ಲಿ, ಏಕೈಕ ಕನ್ನಡಿಗ ಪ್ರತಿನಿಧಿ ಅವಿನಾಶ್ ಅವರು ವೆಬ್‌ದುನಿಯಾವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಜರ್ಮನಿ ಪ್ರವಾಸದ ಕುರಿತು ವೆಬ್‌ದುನಿಯಾ ಓದುಗರೊಂದಿಗೆ ಮಾಹಿತಿ/ಅನುಭವವನ್ನು ಹಂಚಿಕೊಳ್ಳಲಿದ್ದಾರೆ.
ಭಾರತೀಯ ಪತ್ರಿಕಾ ರಂಗದ ಜೊತೆಗೆ, ಕನ್ನಡ ಮಾಧ್ಯಮ ರಂಗಕ್ಕೆ ಈ ಅಪರೂಪದ ಅವಕಾಶ ಲಭ್ಯವಾಗಿದ್ದು, ವೆಬ್‌ದುನಿಯಾಕ್ಕೆ ಇದೊಂದು ಹೆಮ್ಮೆಯ ಸಂಗತಿ.
ಈಗಾಗಲೇ 9 ಭಾರತೀಯ ಭಾಷೆಗಳಲ್ಲಿ ಪೋರ್ಟಲ್ ಹೊಂದಿರುವ ವೆಬ್‌ದುನಿಯಾ, ಹಿಂದಿಯ ಮೊದಲ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ದಕ್ಷಿಣ ಭಾರತದ ನಾಲ್ಕು ದ್ರಾವಿಡ ಭಾಷೆಗಳ ಅಂತರಜಾಲ ತಾಣಗಳು ಆಯಾ ಭಾಷಾಭಿಮಾನಿಗಳ ಜನಮನ್ನಣೆ ಗಳಿಸಿವೆ. ದೇಶ ವಿದೇಶದ ಆನ್‌ಲೈನ್ ಓದುಗರ ಜನಮೆಚ್ಚುಗೆ ಗಳಿಸಿರುವ ವೆಬ್‌ದುನಿಯಾ, ವಿಭಿನ್ನ ಪ್ರದೇಶ, ಸಂಸ್ಕೃತಿ ಮತ್ತು ವಯೋಮಾನದ ವ್ಯಕ್ತಿಗಳಿಗೆ ಸಮೃದ್ಧ ವಿಷಯವನ್ನು ಒದಗಿಸುತ್ತಿದೆ.
ಭಾರತೀಯ ಭಾಷೆಗಳಲ್ಲಿ ಇ-ಮೇಲ್, ಬ್ಲಾಗ್, ಕ್ವೆಸ್ಟ್, ಕ್ಲಾಸಿಫೈಡ್, ಗೇಮ್ಸ್, ಕ್ವಿಜ್, ಶುಭಾಶಯ ಪತ್ರಗಳು, ಜ್ಯೋತಿಷ್ಯ ಮುಂತಾದ ವೈವಿಧ್ಯಮಯ ಸೇವೆಗಳನ್ನು ಓದುಗರಿಗೆ ವೆಬ್‌ದುನಿಯಾ ಉಚಿತವಾಗಿ ಒದಗಿಸುತ್ತಿದೆ. ಇಲ್ಲಿ ರಾಜಕೀಯ, ಕ್ರೀಡೆ ಮತ್ತು ಮಾನವಾಸಕ್ತಿ ಕಥನಗಳು, ಸಿನಿಮಾ, ಪ್ರಾದೇಶಿಕ, ಜ್ಯೋತಿಷ್ಯಶಾಸ್ತ್ರ, ಸಾಹಿತ್ಯ ಮುಂತಾದ ಚಾನೆಲ್‌ಗಳಿವೆ. ಲೈವ್ ಸ್ಕೋರ್ ಕಾರ್ಡ್, ಚರ್ಚೆ, ಜನಮತ ವಿಭಾಗ, ಫೋಟೋ ಗ್ಯಾಲರಿಗಳು ಗಮನ ಸೆಳೆಯುತ್ತವೆ.
2007 ಮಧ್ಯಭಾಗದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ವೆಬ್‌ದುನಿಯಾ ಕನ್ನಡ ತಾಣವು, ಅಲ್ಪಾವಧಿಯಲ್ಲೇ ಅಪಾರ ಓದುಗ ಬಳಗವನ್ನು ಹೊಂದಿರುವುದು, ನವ-ಮಾಧ್ಯಮ ಎಂದೇ ಕರೆಯಲಾಗುವ ಅಂತರಜಾಲ ಕ್ಷೇತ್ರದಲ್ಲಿ ಒಂದು ಹೆಗ್ಗಳಿಕೆ.