ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ವೆಬ್‌ದುನಿಯಾ: ಉಪಸಂಪಾದಕರು/ಅನುವಾದಕರು ಬೇಕು (Online Journalism | Kannada | Translation | Wanted | Kannada Jobs)
Bookmark and Share Feedback Print
 
ಆನ್‌ಲೈನ್ ಪತ್ರಿಕೋದ್ಯಮದಲ್ಲಿ ಹಾಗೂ ತಾಂತ್ರಿಕ ಭಾಷಾಂತರವನ್ನೇ ತಮ್ಮ ವೃತ್ತಿಯನ್ನಾಗಿಸಿಕೊಳ್ಳಲು ಕನಸು ಕಾಣುತ್ತಿರುವವರಿಗಾಗಿ ಇದೋ ಒಂದು ಅವಕಾಶ. ಅಂತರ್ಜಾಲ ಜಗತ್ತಿನಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಹೊಸ ಸುಳಿಗಾಳಿ, 9 ಭಾರತೀಯ ಭಾಷೆಗಳಲ್ಲಿ ಲಭ್ಯವಿರುವ "ವೆಬ್‌ದುನಿಯಾ"ದ ಕನ್ನಡ ಅಂತರಜಾಲ ತಾಣ ವಿಭಾಗದಲ್ಲಿ ಕೆಲಸ ಮಾಡಲು ಉಪಸಂಪಾದಕರು ಹಾಗೂ ಸಂಸ್ಥೆಯ ತಾಂತ್ರಿಕ ಭಾಷಾಂತರ ವಿಭಾಗದಲ್ಲಿ ಕೆಲಸ ಮಾಡಲು ಅನುವಾದಕರು ಬೇಕಾಗಿದ್ದಾರೆ. ಕೆಲಸ ಮಾಡಬೇಕಿರುವುದು ಚೆನ್ನೈಯಲ್ಲಿ ಎಂಬುದನ್ನು ಮೊದಲೇ ಹೇಳಿಬಿಡುತ್ತೇವೆ.

ನಮಗ್ಯಾರು ಬೇಕು?
ಕನ್ನಡ ಭಾಷೆಯ ಮೇಲೆ ಹಿಡಿತ ಬೇಕೇ ಬೇಕು ಎಂಬುದು ನಿರ್ವಿವಾದ. ಜತೆಗೆ, ಇಂಗ್ಲಿಷ್ ಮಾತನಾಡಲು ಬಾರದಿದ್ದರೂ, ಸರಿಯಾಗಿ ಅರ್ಥೈಸಿಕೊಳ್ಳುವುದು ಕೂಡ ಅಷ್ಟೇ ಕಡ್ಡಾಯ. ಇಂಗ್ಲಿಷಿನಿಂದ ಕನ್ನಡಕ್ಕೆ ಸುದ್ದಿಗಳನ್ನು, ಮಾಹಿತಿಗಳನ್ನು ಸುಲಲಿತವಾಗಿ ತರ್ಜುಮೆ ಮಾಡಬಲ್ಲವರನ್ನೇ ನಾವು ಹುಡುಕುತ್ತಿರುವುದು. ಕನಿಷ್ಠ ಒಂದು-ಎರಡು ವರ್ಷ ಅನುಭವವಿದ್ದವರಾದರೆ ಅತ್ಯುತ್ತಮ ಮತ್ತು "ಖಂಡಿತವಾಗಿ ನಾನಿದನ್ನು ಮಾಡಬಲ್ಲೆ" ಎಂಬ ಆತ್ಮವಿಶ್ವಾಸವಿರುವ ಹೊಸಬರು ಕೂಡ ಅರ್ಜಿ ಗುಜರಾಯಿಸಬಹುದು.

ಹೇಗಿರಬೇಕು?
ಕಂಪ್ಯೂಟರ್ ಏನೂಂತ ಗೊತ್ತಿದ್ದರಾಯಿತು, ಉಳಿದ ವಿಷಯಗಳನ್ನು ಕಲಿಸುವುದು ನಮ್ಮ ಜವಾಬ್ದಾರಿ. ಹೊಸ ಮಾಧ್ಯಮ [New Media] ಎಂದೇ ಕರೆಯಲಾಗುವ ಇಂಟರ್ನೆಟ್ ಜರ್ನಲಿಸಂನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಯಸುವವರಿಗೆ ಅತ್ಯುತ್ತಮ ವೇದಿಕೆಯಿದು.

ನಿಮ್ಮ ಹುಟ್ಟಿದ ದಿನಾಂಕ, ವಿಳಾಸ, ಅನುಭವ (ಇದ್ದರೆ) ವಿವರ, ವಿದ್ಯಾಭ್ಯಾಸ ವಿವರ, ಹವ್ಯಾಸ, ಇ-ಮೇಲ್ ವಿಳಾಸ ಸಹಿತ ಅರ್ಜಿಯನ್ನು ಕೆಳಗೆ ನೀಡಲಾದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಅದರ ಜತೆಗೇ, ನಿಮ್ಮ ಸಂಪರ್ಕ ದೂರವಾಣಿ ಸಂಖ್ಯೆ ಇರುವುದು ಅತ್ಯಗತ್ಯ.

ಇ-ಮೇಲ್ ಸಬ್ಜೆಕ್ಟ್ ಲೈನ್‌ನಲ್ಲಿ, "Application for Kannada Post" ಅಂತ ನಮೂದಿಸಬೇಕು.

ಇ-ಮೇಲ್ ಮಾಡಬೇಕಾದ ವಿಳಾಸ:
[email protected]

ಅಂಚೆ ಮೂಲಕವೂ ಅರ್ಜಿ ಕಳುಹಿಸಬಹುದು. ವಿಳಾಸ:
Editor, Kannada
Webdunia.Com (India) Pvt Ltd
# 3, 4th Lane, Mc.Nichols Road.
Chetpet, Chennai [TN] - 600 031
Telephone: +91-44-2836 4770
ಸಂಬಂಧಿತ ಮಾಹಿತಿ ಹುಡುಕಿ