ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಬದಲಾವಣೆಯೊಂದಿಗೆ ನಿಮ್ಮೊಂದಿಗೆ ವೆಬ್‌ದುನಿಯಾ (Webdunia Kannada in New Layout)
Old Webdunia Layout
WD
ಆತ್ಮೀಯ ಓದುಗರೇ,
ಪರಿವರ್ತನೆಯೇ ಜಗದ ನಿಯಮ. ಜಗತ್ತಿನಲ್ಲಿ ಯಾವತ್ತೂ ಗಟ್ಟಿಯಾಗಿ ನಿಲ್ಲುವ ಅಂಶವೆಂದರೆ ಬದಲಾವಣೆಯೊಂದೇ! ಅದು ಪ್ರಗತಿಗೆ ಪೂರಕವೂ ಹೌದು ಮತ್ತು ಅಂತರಜಾಲವೆಂಬ ಮಾಹಿತಿ ತಂತ್ರಜ್ಞಾನ ಸ್ಫೋಟದಿಂದಾಗಿ ಕಿರಿದಾಗಿರುವ ಜಗತ್ತಿನಲ್ಲಿ ಸಂಬಂಧಗಳ ಬಲವರ್ಧನೆಗೆ ಪ್ರೇರಕವೂ ಹೌದು. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಅದೆಷ್ಟು ತ್ವರಿತವಾಗಿ ಸ್ಥಿತ್ಯಂತರಗಳು ಸಂಭವಿಸುತ್ತವೆ ಎಂಬುದು ಊಹೆಗೆ ನಿಲುಕದಷ್ಟು ಮಟ್ಟಕ್ಕೇರಿದೆ. ಈ ಬದಲಾವಣೆಗೆ ನಾವೂ ಹೊಂದಿಕೊಂಡು ಹೋಗಬೇಕಾದುದು ಯುಗಧರ್ಮ. ಹೀಗಾಗಿ ಬದಲಾವಣೆಗಳೊಂದಿಗೆ ಹೆಜ್ಜೆ ಹಾಕಿದ ಹೊಸ ವಿನ್ಯಾಸದ ವೆಬ್‌ದುನಿಯಾ ತಾಣವು ಇದೋ ನಿಮ್ಮ ಮುಂದಿದೆ.

2007ರ ಜೂನ್ ತಿಂಗಳ ಆದಿಭಾಗದಲ್ಲಿ ನಿಮ್ಮ ಮುಂದೆ ಧುತ್ತನೇ ಬಂದು ನಿಂತ ವೆಬ್‌ದುನಿಯಾ ಕನ್ನಡ ತಾಣಕ್ಕೀಗ 4ನೇ ಹರೆಯ ಪೂರೈಸುತ್ತಿರುವ ಶೈಶವ ಕಾಲ. ಅಂದಿನಿಂದ 9 ಭಾರತೀಯ ಭಾಷೆಗಳಲ್ಲಿ ವೆಬ್‌ದುನಿಯಾ ಕಾರ್ಯಾಚರಿಸುತ್ತಿದೆಯಾದರೂ, ಅದಕ್ಕೂ ಮೊದಲು ಇದ್ದದ್ದು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ತಾಣಗಳು ಮಾತ್ರ. ನಾಲ್ಕು ವರ್ಷಗಳ ಹಿಂದೆ ಇತರ ಭಾಷೆಗಳೊಂದಿಗೆ ಸೇರಿಕೊಂಡು ಕನ್ನಡ ತಾಣವೂ ಆರಂಭವಾಗಿತ್ತು. ಆರಂಭದಲ್ಲಿದ್ದ ಮುಖಪುಟ ವಿನ್ಯಾಸವನ್ನು ಕೂಡ ಈ ಹಿಂದೆ ನಾವು ಬದಲಾಯಿಸಿದ್ದು ಆತ್ಮೀಯ ಓದುಗರಿಂದ ಕಾಲಕಾಲಕ್ಕೆ ಬರುತ್ತಿದ್ದ ಸಲಹೆ ಸೂಚನೆಗಳನ್ನು ಆಧರಿಸಿಯೇ.

ಹೀಗಾಗಿ ಮತ್ತೆ ನಿಮ್ಮದೇ ಸಲಹೆ ಸೂಚನೆಗಳೊಂದಿಗೆ, ಸಾಧ್ಯಾಸಾಧ್ಯತೆಗಳನ್ನು ಅಳೆದು-ತೂಗಿ ಮಾಡಿದ ಬದಲಾವಣೆಗಳೊಂದಿಗೆ ಹೊಸದಾದ ಮುಖಪುಟವು ನಿಮ್ಮ ಮುಂದಿದೆ. ಇದು ನಿಮಗೆ ಇಷ್ಟವಾಗಬಹುದು ಅಂತ ಅಂದುಕೊಳ್ಳುತ್ತಿದ್ದೇವೆ. ಇನ್ನೂ ಒಂದಿಷ್ಟು ಸಣ್ಣಪುಟ್ಟ ಬದಲಾವಣೆಗಳು ನಡೆಯುತ್ತಿವೆ. ಅದರೊಂದಿಗೆ ಸಮಗ್ರ ಪೋರ್ಟಲ್ ಒಂದು ನಿಮ್ಮ ಕಣ್ಣೆದುರಿಗಿದೆ.

ಸದಾ ಕಾಲ ನಿಮ್ಮ ಆತ್ಮೀಯ ಸಲಹೆಗಳು, ಸೂಚನೆಗಳು, ದೂರು-ದುಮ್ಮಾನಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತಿರಿ. ಟ್ವಿಟರ್ ತಾಣದಲ್ಲಿ (Twitter.com/WebduniaKannada) ಮತ್ತು ಫೇಸ್‌ಬುಕ್ ಸಮುದಾಯ ತಾಣಗಳಲ್ಲಿಯೂ (Facebook.com/webdunia) ನಮ್ಮನ್ನು ನೀವು ಭೇಟಿಯಾಗಬಹುದು, ಸಲಹೆ ಸೂಚನೆಗಳನ್ನು ನೀಡುತ್ತಿರಬಹುದು.

ನಾಳೆಯಿಂದ ವಿಶ್ವಕಪ್ 2011ರ ಕ್ರಿಕೆಟ್ ಹಬ್ಬದ ಸಡಗರದ ಸಂದರ್ಭದಲ್ಲಿ ನಾವೂ ಬದಲಾಗುತ್ತಿದ್ದೇವೆ. ಇದರೊಂದಿಗೆ ಬದಲಾದ ವಿನ್ಯಾಸ ಮಾತ್ರವೇ ಅಲ್ಲ, ನಿಮ್ಮ ಮನಸ್ಸಿಗೆ ಮುಟ್ಟುವಂತೆ, ತಟ್ಟುವಂತೆ, ನಿಮ್ಮಲ್ಲಿಯೇ ಚರ್ಚೆಗೆ ಕಾರಣವಾಗಬಲ್ಲಂತೆ ನಮ್ಮ ಸಂಪಾದಕೀಯ ಬಳಗ ಹೊರತರುತ್ತಿರುವ ಸುದ್ದಿಗಳ ಹೂರಣವೂ ಬದಲಾಗಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಅದೇ ರೀತಿ ನಿಮ್ಮಲ್ಲಿ ಕೆಲವರಲ್ಲಿಯೂ ನಾವು ಬದಲಾವಣೆಗಳನ್ನು ಬಯಸುತ್ತಿದ್ದೇವೆ. ಅದು ಬೇರೇನೂ ಅಲ್ಲ, ನೀವು ಇಲ್ಲಿ ನೀಡಲಾಗಿರುವ ಚರ್ಚಾ ವೇದಿಕೆಗಳಲ್ಲಿ ಸಭ್ಯವಾದ, ಸಂಸ್ಕಾರಯುತ ಮತ್ತು ಆರೋಗ್ಯಕರ ಪದಗಳ ಬಳಕೆ ಮತ್ತು ಚರ್ಚೆ.

ಎಲ್ಲರಿಗೂ ಶುಭವಾಗಲಿ, ವೆಬ್‌ದುನಿಯಾ ಜತೆಗಿನ ನಿಮ್ಮ ಬಾಂಧವ್ಯ ನಿರಂತರವಾಗಿರಲಿ.

- ಸಂಪಾದಕ

ಇವನ್ನೂ ಓದಿ