ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ತಾಲಿಬಾನ್ ಉಗ್ರರೊಂದಿಗಿನ ಮಾತುಕತೆ ವಿಫಲ
ಕೊರಿಯಾದ 19 ಮಂದಿ ಚರ್ಚ್ ಸ್ವಯಂ ಸೇವಕ ಒತ್ತೆಯಾಳು ಬಿಡುಗಡೆ ಸಂಬಂಧ ಅಘ್ಫಾನಿಸ್ತಾನದಲ್ಲಿ ಶನಿವಾರ ತಾಲಿಬಾನ್ ಉಗ್ರಗಾಮಿಗಳೊಂದಿಗೆ ನಡೆದ ಮಾತುಕತೆಯು ವಿಫಲಗೊಂಡಿದ್ದು, ಈ ಒತ್ತೆಯಾಳುಗಳ ಭವಿಷ್ಯವನ್ನು ಉಗ್ರಗಾಮಿ ನಾಯಕರು ನಿರ್ಧರಿಸಲಿದ್ದಾರೆ ಎಂದು ತಾಲಿಬಾನ್ ವಕ್ತಾರರೊಬ್ಬರು ಹೇಳಿದ್ದಾರೆ.

'ನಮ್ಮ ಬೇಡಿಕೆಯನ್ನು ಅವರು ಒಪ್ಪಿಕೊಳ್ಳಲಿಲ್ಲವಾದ್ದರಿಂದ, ಯಾವುದೇ ಫಲಿತಾಂಶ ಕಾಣದೆ ಮಾತುಕತೆಯು ಮುಕ್ತಾಯಗೊಂಡಿದೆ' ಎಂದು ಖಾರಿ ಮೊಹಮ್ಮದ್ ಯುಸುಫ್ ಅವರು ಸುದ್ದಿ ಸಂಸ್ಥೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

'ಇನ್ನೂ ಹೆಚ್ಚಿನ ಮಾತುಕತೆ ನಡೆಯುತ್ತದೆ ಎಂಬುವುದರ ಬಗ್ಗೆ ನನಗೆ ತಿಳಿದುಬಂದಿಲ್ಲ. ಯಾವುದಕ್ಕೂ ಉಗ್ರಗಾಮಿ ನಾಯಕರ ಬಣದಿಂದ ನಿರ್ಧಾರ ಬರುವವರೆಗೂ ನಾನು ಕಾಯುತ್ತೇನೆ' ಎಂದು ಅವರು ಹೇಳಿದ್ದಾರೆ.

ಕಳೆದ ಗುರುವಾರದಂದು ತಾಲಿಬಾನ್ ಉಗ್ರರು ಹಾಗೂ ದಕ್ಷಿಣ ಕೊರಿಯ ಅಧಿಕಾರಿಗಳೊಂದಿಗೆ ನಡೆದ ಮಾತುಕತೆಯು ಸಂಪೂರ್ಣ ವಿಫಲವಾಗಿದೆ ಎಂದು ಯುಸುಫ್ ಹೇಳಿದ್ದಾನೆ.

ಕಳೆದ ತಿಂಗಳು ರಾಜಧಾನಿ ಕಾಬೂಲ್‌ನ ದಕ್ಷಿಣದಲ್ಲಿರುವ ಘಜ್ನಿ ಪ್ರಾಂತ್ಯದಲ್ಲಿನ ಬಸ್ಸೊಂದರಿಂದ ಸುಮಾರು 23 ಮಂದಿ ಕೊರಿಯನ್ನರನ್ನು ಉಗ್ರರು ಅಪಹರಿಸಿದ್ದರು. ಇದಾದ ನಂತರ ಅವರು ಈ ಸೋಮವಾರವಷ್ಟೆ ಇಬ್ಬರು ಮಹಿಳೆಯರನ್ನು ಬಿಡುಗಡೆಗೊಳಿಸಿದ್ದರು. ಮತ್ತೆ ಇಬ್ಬರನ್ನು ಹತ್ಯೆ ಮಾಡಿದ್ದರು.

ಅಘ್ಫಾನಿಸ್ತಾನದ ಜೈಲಿನಲ್ಲಿರುವ ತಮ್ಮ ಉಗ್ರರನ್ನು ಬಿಡುಗಡೆ ಮಾಡದೇ ಹೋದಲ್ಲಿ, ಉಳಿದ ಒತ್ತೆಯಾಳುಗಳನ್ನು ಹತ್ಯೆ ಮಾಡುವುದಾಗಿ ಉಗ್ರರು ಬೆದರಿಕೆ ಹಾಕಿದ್ದಾರೆ.
ಮತ್ತಷ್ಟು
ಭಾರತೀಯ ಅಧಿಕಾರಿಗಳಿಗೆ ವಿಶ್ವಸಂಸ್ಥೆ ಶ್ಲಾಘನೆ
ಪಾಕ್‌ಗೆ ಮರಳಿದಲ್ಲಿ ಕ್ಷಮೆ ಹಿಂತೆಗೆತ- ಮುಷರಫ್
ಉತ್ತರಪ್ರದೇಶದಲ್ಲಿ ಜಪಾನೀಸ್ ಎನ್ಸಿಫಲೈಟಸ್
ನವಾಜ್ ಮರುವಿಚಾರಣೆಗೆ ಕೋರ್ಟ್ ಅನುಮತಿ
ಡೀನ್ ಅಬ್ಬರ:ಮೂವರ ಸಾವು
ಟರ್ಕಿ ವಿಮಾನ ಅಪಹರಣ
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com