|
ಸಮವಸ್ತ್ರ ತ್ಯಜಿಸಲಿರುವ ಮುಷರ್ರಫ್:ಭುಟ್ಟೊ
|
|
ಲಂಡನ್, ಬುಧವಾರ, 29 ಆಗಸ್ಟ್ 2007( 15:08 IST )
|
|
|
|
|
|
|
|
ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರು ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಜತೆ ಮಾಡಿಕೊಂಡ ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ತಮ್ಮ ಸಮವಸ್ತ್ರವನ್ನು ತ್ಯಜಿಸಲು ನಿರ್ಧರಿಸಿದ್ದಾರೆಂದು ಬ್ರಿಟೀಷ್ ದಿನಪತ್ರಿಕೆ ವರದಿ ಮಾಡಿದೆ.
ಬೇನಜೀರ್ ಭುಟ್ಟೊ ಡೈಲಿ ಡೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ "ನಾವು ಒಪ್ಪಂದಕ್ಕೆ ಸಮೀಪದಲ್ಲಿದ್ದು, ಸಮವಸ್ತ್ರ ವಿಷಯ ಇತ್ಯರ್ಥವಾಗಿದೆ. ಸೇನಾ ಮುಖ್ಯಸ್ಥರ ಹುದ್ದೆಗೆ ರಾಜೀನಾಮೆ ನೀಡಲು ಮುಷರ್ರಫ್ ಒಪ್ಪಿಗೆ ಸೂಚಿಸಿದ್ದಾರೆ "ಎಂದು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಮಾತುಕತೆಯ ಸುತ್ತುಗಳಲ್ಲಿ ಸಮವಸ್ತ್ರ ವಿಷಯ ಮುಖ್ಯವಾಗಿ ಚರ್ಚಿತವಾಯಿತು ಎಂದು ತಮ್ಮ ಪಕ್ಷ ಮತ್ತು ಮುಷರ್ರಫ್ ಸಂಧಾನಕಾರರ ನಡುವೆ ಮಾತುಕತೆಯನ್ನು ಉಲ್ಲೇಖಿಸಿ ಮಾಜಿ ಪ್ರಧಾನಿ ನುಡಿದರು.
ಯುಎಇನಲ್ಲಿ ಭುಟ್ಟೊ ಅವರು ಮುಷರ್ರಫ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಚರ್ಚಿಸಿದ್ದರು. ಮುಷರ್ರಫ್ ಸೇನಾ ಮುಖ್ಯಸ್ಥರ ಹುದ್ದೆ ತ್ಯಜಿಸದೇ ಒಪ್ಪಂದ ಸಾಧ್ಯವಿಲ್ಲ ಎಂದು ಭುಟ್ಟೊ ಮನದಟ್ಟು ಮಾಡಿದರೆಂದು ಹೇಳಲಾಗಿದೆ.
ಆದಾಗ್ಯೂ, ಪ್ರಸಕ್ತ ಬ್ರಿಟನ್‌ನಲ್ಲಿರುವ ಮುಷರ್ರಫ್ ಪ್ರತಿನಿಧಿಗಳು ಈ ಬಗ್ಗೆ ಅಧಿಕೃತ ದೃಢೀಕರಣ ನೀಡಿಲ್ಲ. ಸಾರ್ವತ್ರಿಕ ಚುನಾವಣೆ ಬಳಿಕ ಮುಂದಿನ ಐದು ವರ್ಷಗಳಿಗೆ ಅಧ್ಯಕ್ಷರನ್ನಾಗಿ ತಮ್ಮನ್ನು ಎಲ್ಲ ರಾಜಕೀಯ ಪಕ್ಷಗಳು ಪುನರಾಯ್ಕೆ ಮಾಡಿದರೆ ಸೇನಾ ಮುಖ್ಯಸ್ಥರ ಹುದ್ದೆ ತ್ಯಜಿಸುವುದಾಗಿ ಮುಷರ್ರಫ್ ಪ್ರಸ್ತಾಪ ಮಾಡಿದ್ದಾರೆಂದು ಪಾಕಿಸ್ತಾನದ ದಿನಪತ್ರಿಕೆಯೊಂದು ಮಂಗಳವಾರ ವರದಿ ಮಾಡಿದೆ.
|
|
|
|
|
|
|
|