|
ಭಾರತದ ಹೇಳಿಕೆ ನಿರಾಧಾರ:ಪಾಕ್
|
|
ಇಸ್ಲಾಮಾಬಾದ್, ಗುರುವಾರ, 30 ಆಗಸ್ಟ್ 2007( 20:05 IST )
|
|
|
|
|
|
|
|
ವಿವಿಧ ರಾಷ್ಟ್ರಗಳಿಗೆ ಪಾಕಿಸ್ತಾನದ ರಾಯಭಾರ ಯಾತ್ರೆಗಳಲ್ಲಿ ಭಾರತದ ವಿರುದ್ಧ ಪ್ರಚಾರ, ಭಯೋತ್ಪಾದಕರಿಗೆ ಉತ್ತೇಜನ ನೀಡುತ್ತಿದೆಯೆಂಬ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಹೇಳಿಕೆಯನ್ನು "ನಿರಾಧಾರ" ಎಂದು ಪಾಕಿಸ್ತಾನ ತಳ್ಳಿಹಾಕಿದೆ.
ಕಟ್ಟುನಿಟ್ಟಾದ ರಾಜತಾಂತ್ರಿಕ ನಿಯಮಾವಳಿಗಳ ಅನುಸಾರ ಪಾಕಿಸ್ತಾನ ರಾಯಭಾರ ಯಾತ್ರೆ ಕೈಗೊಳ್ಳುತ್ತದೆ. ಮೂರನೇ ರಾಷ್ಟ್ರದ ವಿರುದ್ಧ ಅಪಪ್ರಚಾರ ಮಾಡಬಾರದೆಂಬ ನಿಯಮಗಳನ್ನು ಗೌರವಿಸುತ್ತದೆಂದು ಪಾಕಿಸ್ತಾನ ವಿದೇಶಾಂಗ ಕಚೇರಿಯ ಹೇಳಿಕೆ ತಿಳಿಸಿದೆ.
ಭಯೋತ್ಪಾದಕರಿಗೆ ಉತ್ತೇಜಿಸುವ ಆರೋಪಗಳ ಬಗ್ಗೆ ಉತ್ತರಿಸುತ್ತಾ, ಪಾಕಿಸ್ತಾನ ಸ್ವತಃ ಭಯೋತ್ಪಾದನೆಗೆ ಬಲಿಪಶುವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಭಾರತದ ಯಾತ್ರೆಗಳಲ್ಲಿ ಪಾಕಿಸ್ತಾನದ ಹೆಸರು ಕೆಡಿಸುತ್ತಿರುವುದಕ್ಕೆ ಸಾಕ್ಷ್ಯಾಧಾರವಿದೆ ಎಂದು ಅದು ಹೇಳಿದೆ.
ಪಾಕಿಸ್ತಾನದ ಹಿತಾಸಕ್ತಿಗೆ ವಿರುದ್ಧವಾದ ಶಕ್ತಿಗಳ ಜತೆ ಭಾರತ ಸಂಪರ್ಕವಿರಿಸಿಕೊಂಡಿದೆ ಎಂದೂ ಅದು ಹೇಳಿದೆ.
|
|
|
|
|
|
|
|