|
ರೈಲು ಅಪಘಾತ: 8 ಜನರ ಸಾವು
|
|
ರಿಯೊ ಡಿ ಜನೈರೊ, ಶುಕ್ರವಾರ, 31 ಆಗಸ್ಟ್ 2007( 12:39 IST )
|
|
|
|
|
|
|
|
ರಿಯೊ ನಗರದ ಹೊರವಲಯದಲ್ಲಿ ಶುಕ್ರವಾರ ತಮ್ಮ ಮನೆಗಳಿಗೆ ಹೋಗುವ ಧಾವಂತದಲ್ಲಿದ್ದ ಜನರಿಂದ ತುಂಬಿದ್ದ ರೈಲೊಂದು ಇನ್ನೊಂದು ರೈಲಿಗೆ ಅಪ್ಪಳಿಸಿ ಕನಿಷ್ಠ 8 ಮಂದಿ ಸತ್ತಿದ್ದಾರೆ.
ಗಂಭೀರ ಸ್ಥಿತಿಯಲ್ಲಿರುವ 15 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹಾನಿಗೊಂಡ ಬೋಗಿಗಳನ್ನು ತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಇನ್ನೂ ಹೋರಾಡುತ್ತಿದ್ದಾರೆ. ರೈಲು ಹಳಿ ಬದಲಾಯಿಸುವಾಗ ಇನ್ನೊಂದು ರೈಲು ಅದರ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಮೊದಲನೇ ರೈಲಿನಲ್ಲಿ ಸುಮಾರು 800 ಮಂದಿ ಪ್ರಯಾಣಿಸುತ್ತಿದ್ದರು.ಆದರೆ ಎರಡನೇ ರೈಲಿನಲ್ಲಿ ಸಿಬ್ಬಂದಿ ಹೊರತುಪಡಿಸಿದರೆ ಖಾಲಿಯಾಗಿತ್ತು ಎಂದು ತಿಳಿದುಬಂದಿದೆ.
|
|
|
|
|
|
|
|