| ಮುಸ್ಲಿಂ ಜಗತ್ತಿಗೆ ಇಂದು ಒಬಾಮಾ ಭಾಷಣ | | | ರಿಯಾದ್:, ಗುರುವಾರ, 4 ಜೂನ್ 2009( 12:24 IST ) | | | |
| | |
| ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಈಜಿಪ್ಟ್‌ನಲ್ಲಿ ಗುರುವಾರ ಮುಸ್ಲಿಂ ಜಗತ್ತಿಗೆ ಅತ್ಯಂತ ನಿರೀಕ್ಷೆಯ ಭಾಷಣ ಮಾಡುವರೆಂದು ಹೇಳಲಾಗಿದೆ. ಆ ಭಾಷಣಕ್ಕಾಗಿ ಕೈರೊದಲ್ಲಿ ಪ್ರಮುಖ ಸಿದ್ಧತೆಗಳು ನಡೆಯುತ್ತಿದ್ದು, ಮುಸ್ಲಿಂ ಜಗತ್ತಿನ ಜತೆ ಮತ್ತೆ ತೊಡಗಿಸಿಕೊಳ್ಳುವ ಪ್ರಯತ್ನವೆಂದು ಭಾವಿಸಲಾಗಿದೆ.ಭಾಷಣದಲ್ಲಿ ಯಾವುದೇ ನಿರ್ದಿಷ್ಟ ಪ್ರಸ್ತಾವನೆಗಳನ್ನು ತಪ್ಪಿಸಲಾಗುವುದು ಮತ್ತು ಅಮೆರಿಕ-ಮಧ್ಯಪೂರ್ವ ಸಂಬಂಧಗಳ ಸುಧಾರಣೆಗೆ ಗಮನಹರಿಸಲಾಗುವುದು. ಕೈರೊ ವಿವಿಯಲ್ಲಿ ಮಾಡುವ ಭಾಷಣವು ಜಗತ್ತಿನ ಲಕ್ಷಾಂತರ ವೀಕ್ಷಕರಿಗೆ ಪ್ರಸಾರವಾಗಲಿದ್ದು ಇದೊಂದು ಸತ್ಯ ಹೇಳುವ ಪ್ರಕ್ರಿಯೆಯೆಂದು ತಿಳಿಯಲಾಗಿದೆ.ಅಮೆರಿಕ ಅಧ್ಯಕ್ಷರಾದ ಬಳಿಕ ಮುಸ್ಲಿಂ ಜಗತ್ತನ್ನು ಉದ್ದೇಶಿಸಿ ಮಾತನಾಡುವುದಾಗಿ ಒಬಾಮಾ ಭರವಸೆ ನೀಡಿದ್ದು, ಅಮೆರಿಕ ಮತ್ತು ಮಧ್ಯಪೂರ್ವ ರಾಷ್ಟ್ರಗಳ ನಡುವೆ ಬಾಂಧವ್ಯ ಸುಧಾರಣೆಗೆ ಇದು ಮುಖ್ಯವಾಗಿದೆ. ಏತನ್ಮಧ್ಯೆ, ಕೈರೊ ಭೇಟಿಗೆ ಮುನ್ನ, ಒಬಾಮಾ ಸೌದಿ ಅರೇಬಿಯಕ್ಕೆ ಭೇಟಿ ನೀಡಿದ್ದು ರಾಜ ಅಬ್ದುಲ್ಲಾ ಅವರ ಜತೆ ಚರ್ಚಿಸಲಿದ್ದಾರೆ. |
| |
| | |
| | | |
|
| | | | | |
|
|
| |
|  | |