| ಭಾರತದೊಂದಿಗೆ ಮತ್ತೆ ಯುದ್ಧ ಬೇಕಾಗಿಲ್ಲ: ಪಾಕ್ | | | ಇಸ್ಲಾಮಾಬಾದ್, ಬುಧವಾರ, 10 ಜೂನ್ 2009( 20:38 IST ) | | | |
| | |
| ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೊಮ್ಮೆ ಯುದ್ಧ ಬೇಕಾಗಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅಭಿಪ್ರಾಯ ವ್ಯಕ್ತಪಡಿಸಿ, ಭಾರತದೊಂದಿಗೆ ಸ್ನೇಹಹಸ್ತ ಚಾಚುವುದಾಗಿ ತಿಳಿಸಿದ್ದಾರೆ.ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆಗೆ ಪಾಕಿಸ್ತಾನ ಸಿದ್ಧವಿರುವುದಾಗಿ ಗಿಲಾನಿ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದ್ದಾರೆ. ಮುಂಬೈ ಸ್ಫೋಟ ಪ್ರಕರಣದ ಕುರಿತಂತೆ ಪಾಕಿಸ್ತಾನ ಸೂಕ್ತ ರೀತಿಯಲ್ಲಿ ಸ್ಪಂದಿಸುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.ಇತ್ತೀಚೆಗಷ್ಟೇ ಜೆಯುಡಿಯ ವರಿಷ್ಠ ಹಫೀಜ್‌ನನ್ನು ಲಾಹೋರ್ ಹೈಕೋರ್ಟ್ ಬಿಡುಗಡೆ ಮಾಡಿದ ನಂತರ, ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೇ ಪಾಕಿಸ್ತಾನ ಮುಂಬೈ ಸ್ಫೋಟಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳದೇ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಖಾರವಾಗಿ ಪ್ರತಿಕ್ರಿಯಿಸಿದ್ದರು. ಭಾರತ ತಿರುಗೇಟು: ಭಾರತದೊಂದಿಗೆ ಮತ್ತೊಂದು ಯುದ್ಧ ಬೇಕಾಗಿಲ್ಲ, ನಾವು ಮಾತುಕತೆಗೆ ಸಿದ್ಧ ಎಂಬ ಗಿಲಾನಿ ಹೇಳಿಕೆಗೆ ಕೂಡಲೇ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ನಮಗೂ ಪಾಕ್ ಜತೆ ಮಾತುಕತೆ ನಡೆಸುವ ಆಸಕ್ತಿ ಇದೆ. ಆದರೆ ಅದಕ್ಕೂ ಮೊದಲು ನೀವು ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ. ಮಾತುಕತೆ ನಂತರ ಎಂದು ತಿರುಗೇಟು ನೀಡಿದ್ದಾರೆ. |
| |
| | |
| | | |
|
| | |
|
|
| | |
|
|
| |
|  | |