ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೆಲ್ಸವೇ ಮಾಡದೆ 5 ವರ್ಷ ಸಂಬ್ಳ ಪಡೆದ ಭೂಪ! (New Jersey | Avaya Inc | Worng pay | Illinois)
Feedback Print Bookmark and Share
 
ತಾನು ಎಂದೂ ಕೆಲಸವೇ ಮಾಡದಿದ್ದ ಕಂಪೆನಿಯಿಂದ ನಿರಂತರ ಐದು ವರ್ಷಗಳ ಕಾಲ 470,000 ಡಾಲರ್ ಮೊತ್ತವನ್ನು ವೇತನವಾಗಿ ಪಡೆದಿರುವ ಕುರಿತು ಇಲಿನಾಯಿಸ್ ವ್ಯಕ್ತಿಯೊಬ್ಬ ತಪ್ಪೊಪ್ಪಿಕೊಂಡಿದ್ದಾನೆ.

ಪೆಲಟೈನ್ ಎಂಬಲ್ಲಿನ 35ರ ಹರೆಯದ ಆಂಟನಿ ಅರ್ಮತಿಸ್ ಎಂಬ ವ್ಯಕ್ತಿ ನ್ಯೂಜೆರ್ಸಿ ಸುಪೀರಿಯರ್ ಕೋರ್ಟಿನಲ್ಲಿ ಈ ಕುರಿತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

2002ರಲ್ಲಿ ಆಂಟನಿ ನ್ಯೂಜೆರ್ಸಿ ಮೂಲದ ದೂರಸಂಪರ್ಕ ಕಂಪೆನಿ ಅವಯಾ ಇಂಕ್‌ನ ಉದ್ಯೋಗ ಆಹ್ವಾನವನ್ನು ಒಪ್ಪಿಕೊಂಡಿದ್ದ. ಆದರೆ ಬಳಿಕ ಮನಸ್ಸು ಬದಲಿಸಿ ಕೆಲಸಕ್ಕೆ ಸೇರ್ಪಡೆಯಾಗಿರಲಿಲ್ಲ. ಆದರೆ ಕಂಪೆನಿಯ ಕಂಪ್ಯೂಟರ್‌ನಲ್ಲಿ ದಾಖಲಾಗಿರುವ ಪೇ ರೋಲ್‌ನಿಂದ ಮಾತ್ರ ಈತನ ಹೆಸರನ್ನು ತೆಗೆದು ಹಾಕಿರಲಿಲ್ಲ. ಹಾಗಾಗಿ ಪ್ರತಿ ತಿಂಗಳೂ ಈತನ ಖಾತೆಗೆ ವೇತನ ಜಮೆಯಾಗುತ್ತಿತ್ತು.

ಇದು ಸರಾಗವಾಗಿ ನಡೆಯುತ್ತಲೇ ಬಂದಿತ್ತು. ಆದರೆ, 2007ರ ಫೆಬ್ರವರಿಯಲ್ಲಿ ಅವಯ ಕಂಪೆನಿಯ ಆಡಿಟರ್‌ಗಳು ಈ ತಪ್ಪನ್ನು ಕಂಡು ಹಿಡಿದಿದ್ದರು.

ಇದೀಗ ಆಂಟನಿ, ಐದು ವರ್ಷಗಳ ಕಾಲ ಸುಮ್ಮನೆ ತಿಂದ ಸಂಬಳವನ್ನು ಕಕ್ಕುವುದಲ್ಲದೆ, ಆರು ವರ್ಷಗಳ ಜೈಲು ವಾಸ ಅನುಭವಿಸಬೇಕಾಗಿದೆ. ಈತನ ಶಿಕ್ಷೆ ಮುಂಬರುವ ಜನವರಿ 8ರಿಂದ ಆರಂಭವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ