ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಸಲಾಗಿರುವ ಹಲ್ಲೆಯ ಕುರಿತು ಭಾರತದ ಕಳವಳವನ್ನು ವ್ಯಕ್ತಪಡಿಸಲು ಮತ್ತು ಪರಿಸ್ಥಿತಿಯ ಸಮಾಲೋಚನೆಗಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆಸ್ಟ್ರೇಲಿಯಾ ಹೈಕಮಿಶನರ್ ಜಾನ್ ಮಕಾರ್ತಿ ಅವರನ್ನು ಕರೆಸಿಕೊಂಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವಲಾಯದ ಕಾರ್ಯದರ್ಶಿ(ಪೂರ್ವ) ಎನ್. ರವಿ ಅವರು, ಭಾರತೀಯ ವಿದ್ಯಾರ್ಥಿಗಳ ಮೇಲೆ ಪದೇಪದೇ ನಡೆದಿರುವ ಹಲ್ಲೆಯ ಕುರಿತು ಭಾರತದ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
"ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಸಲಾಗಿರುವ ಹಲ್ಲೆಯ ಕುರಿತು ಚರ್ಚಿಸಲು ತನ್ನನ್ನು ಬರಹೇಳಲಾಗಿದೆ. ರವಿ ಅವರು ಭಾರತದ ಕಾಳಜಿಯನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಅಲ್ಲದೆ ಇಂತಹ ಘಟನೆಗಳು ಮರುಕಳಿಸಂತೆ ಮುಂಜಾಗರೂಕತೆ ವಹಿಸುವಂತೆಯೂ ಅವರು ವಿನಂತಿಸಿದ್ದಾರೆ" ಎಂದು ಹೈ ಕಮಿಷನರ್ ಸಭೆಯ ಬಳಿಕ ತಿಳಿಸಿದ್ದಾರೆ. |