ಕಳೆದ ನವೆಂಬರ್ 26ರಂದು ಮುಂಬೈದಾಳಿವೇಳೆಗೆ ಭದ್ರತಾ ಸಿಬ್ಬಂದಿಗಳ ಗುಂಡೇಟಿಗೀಡಾಗಿರುವ ಉಗ್ರನ ರಕ್ತದ ಮಾದರಿಯು ಆತ ದಾಳಿಯ ಮೇಳೆ ಮದ್ಯಪಾನ ಸೇವಿಸಿದ್ದ ಎಂಬ ಅಂಶವನ್ನು ಹೊರಗೆಡಹಿದೆ.
ಉಗ್ರರರಲ್ಲೊಬ್ಬ ಮದ್ಯಪಾನ ಮಾಡಿದ್ದ ಎಂಬುದನ್ನು ಸಲ್ಲಿಸಲಾಗಿರುವ ವರದಿಯು ಹೇಳುತ್ತದೆ ಎಂಬುದಾಗಿ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಹೇಳಿದ್ದಾರೆ.
ಹೋಟೇಲ್ ತಾಜ್ನಲ್ಲಿ ಎನ್ಎಸ್ಜಿ ಕಮಾಂಡೋಗಳ ಗುಂಡೇಟಿಗೆ ಬಲಿಯಾಗಿರುವ ಜಾವೇದ್ ಅಲಿಯಾಸ್ ಅಬುಅಲಿ ಎಂಬಾತನ ರಕ್ತದ ಮಾದರಿಯು ಆತ ಕುಡಿದಿದ್ದ ಎಂಬ ಅಂಶವನ್ನು ತಿಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಜಾವೇದ್ ಹಾಗೂ ಇತರ ಇಬ್ಬರು ತಾಜ್ ಹೋಟೇಲ್ ಮೇಲೆ ದಾಳಿ ನಡೆಸಿದ್ದರು.
|