ಹೈಕಮಾಂಡ್ ಸೂಚಿದರೆ ಚುನಾವಣೆಗೆ ಸ್ಪರ್ಧೆ: ಕೃಷ್ಣ
|
|
|
ಬೆಂಗಳೂರು, ಮಂಗಳವಾರ, 1 ಏಪ್ರಿಲ್ 2008( 19:21 IST )
|
|
|
|
|
|
|
|
ಹೈಕಮಾಂಡ್ ಸೂಚನೆ ನೀಡಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದ. ಇಲ್ಲವಾದರೆ ಪಕ್ಷದ ಗೆಲುವಿಗಾಗಿ ಶ್ರಮಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿ ಬರುವುದಿಲ್ಲ. ಚುನಾವಣೆ ಏನಿದ್ದರೂ, ಬಿಜೆಪಿ-ಕಾಂಗ್ರೆಸ್ ನಡುವೆಯಾಗಿದೆ. ಏನಿದ್ದರೂ, ಕೆಲವು ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್, ಕಾಂಗ್ರೆಸ್ ಜೊತೆ ಪೈಪೋಟಿ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿದರು.
ರಾಹುಲ್ ರಾಜ್ಯ ಪ್ರವಾಸದಿಂದಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ಹುಮ್ಮಸ್ಸು ಹಾಗೂ ಯುವಕರಲ್ಲಿ ಶಕ್ತಿ ಮೂಡಿಸಿವೆ. ಆದರೆ ಪ್ರವಾಸ ವಿಫಲ ಎಂದು ವಿರೋಧ ಪಕ್ಷಗಳು ಹೇಳಿಕೆ ನೀಡುತ್ತಿವೆ. ರಾಹುಲ್ ಪ್ರವಾಸ ಲಾಭ ತಂದಿರುವುದು ಕಾಂಗ್ರೆಸ್ಸಿಗರಿಗಷ್ಟೇ ವಿನಃ ವಿರೋಧ ಪಕ್ಷಗಳಿಗಲ್ಲ ಎಂದು ಕೃಷ್ಣ ಗೇಲಿ ಮಾಡಿದರು.
ಪಕ್ಷದಲ್ಲಿ ಭಿನ್ನಾಭಿಪ್ರಾಯಗಳ ಕುರಿತು ಮಾತನಾಡಿದ ಅವರು, ಪಕ್ಷಕ್ಕೆ ಸೇರ್ಪಡೆಗೊಂಡ ಮೇಲೆ ಮೂಲ ಮತ್ತು ವಲಸಿಗ ಎಂಬ ಪ್ರಶ್ನೆಯೇ ಬರುವುದಿಲ್ಲ. ಎಲ್ಲರೂ ಕಾಂಗ್ರೆಸ್ ದೊಡ್ಡ ಸಂಸಾರಕ್ಕೆ ಸೇರಿದವರು. ವೈಮನಸ್ಸುಗಳೇನಿದ್ದರೂ ಪಕ್ಷದೊಳಗೆಯೇ ಬಗೆಹರಿಸಲಾಗುವುದು ಎಂದು ತಿಳಿಸಿದರು.
|
|
|
|