ಮುಖಂಡರ ಸೇರ್ಪಡೆಯಿಂದ ಪಕ್ಷದ ಬಲವರ್ಧನೆ: ಖರ್ಗೆ
|
|
|
ಬೆಂಗಳೂರು, ಬುಧವಾರ, 2 ಏಪ್ರಿಲ್ 2008( 11:27 IST )
|
|
|
|
|
|
|
|
ಮಾಜಿ ಕೇಂದ್ರ ಸಚಿವೆ ಹಾಗೂ ಮಾಜಿ ಕಾಂಗ್ರೆಸ್ಸಿಗರಾಗಿದ್ದ ಡಿ.ಕೆ.ತಾರಾದೇವಿ ಸಿದ್ದಾರ್ಥರವರು ತಮ್ಮ ಮಾತೃಪಕ್ಷಕ್ಕೆ ಮರಳುವ ನಿರ್ಧಾರವನ್ನು ಪ್ರಕಟಿಸಿರುವುದು ರಾಜಕೀಯ ವಲಯಗಳಲ್ಲಿ ಕುತೂಹಲ ಮೂಡಿಸಿದೆ.
ಮಾಜಿ ಶಾಸಕ ಜಯಪ್ರಕಾಶ್ ಹೆಗಡೆ ಹಾಗೂ ಮಾಜಿ ಸಂಸದ ಎಸ್.ಬಿ.ಸಿದ್ನಾಳ್‌ರವರು ಕಾಂಗ್ರೆಸ್ ಪಕ್ಷವನ್ನು ಸೇರುವ ನಿರ್ಧಾರ ನಿರೀಕ್ಷಿತವಾಗಿತ್ತು. ಆದರೆ ತಾರಾದೇವಿಯವರೂ ಕಾಂಗ್ರೆಸ್ ಸೇರುವ ನಿರ್ಧಾರವನ್ನು ಪ್ರಕಟಿಸಿರುವುದು ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ.
ಈ ಮೂವರ ಪಕ್ಷ ಸೇರ್ಪಡೆಗೆ ಸೋನಿಯಾಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪೃಥ್ವಿರಾಜ್ ಚೌಹಾಣ್‌ರವರಿಂದ ಈಗಾಗಲೇ ಹಸಿರು ನಿಶಾನೆ ಸಿಕ್ಕಿದೆ. ಈ ವಾರದೊಳಗಾಗಿ ಅಧಿಕೃತ ಸೇರ್ಪಡೆ ನೆರವೇರಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದೇ ಸಂದರ್ಭದಲ್ಲಿ ಬಿಎಸ್ಪಿಯ ಮಾಜಿ ರಾಜ್ಯಾಧ್ಯಕ್ಷ ಬಿ.ಗೋಪಾಲ್‌ರವರೂ ಸದ್ಯದಲ್ಲಿಯೇ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳಿಗೂ ಚಾಲನೆ ಸಿಕ್ಕಿದೆ. ಬಿಎಸ್ಪಿಯಲ್ಲಿ ಗೋಪಾಲ್‌ರವರು ಕಡೆಗಣಿಸಲ್ಪಟ್ಟಾಗಿನಿಂದ ಅವರೊಂದಿಗೆ ಖರ್ಗೆಯವರು ಸಂಪರ್ಕದಲ್ಲಿದ್ದು ಅವರ ಸೇರ್ಪಡೆಯ ಸುದ್ದಿಯೂ ಸದ್ಯದಲ್ಲಿಯೇ ಹೊರಬೀಳಲಿದೆ ಎಂದು ತಿಳಿದುಬಂದಿದೆ.
|
|
|
|