ಗೋಕರ್ಣ ವಿವಾದ ಹೈಕೋರ್ಟ್‌ಗೆ
|
|
|
|
ಬೆಂಗಳೂರು, ಮಂಗಳವಾರ, 2 ಸೆಪ್ಟೆಂಬರ್ 2008( 11:27 IST )
|
|
|
|
|
|
|
|
ಐತಿಹಾಸಿಕ ಗೋಕರ್ಣ ದೇವಾಲಯವನ್ನು ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿರುವ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ.
ಉತ್ತರ ಕನ್ನಡದಾದ್ಯಂತ ಸಾಕಷ್ಟು ಪ್ರತಿಭಟನೆಗೆ ಕಾರಣವಾದ ಗೋಕರ್ಣ ದೇವಾಲಯ ಹಸ್ತಾಂತರ ವಿವಾದಕ್ಕೆ ಸಂಬಂಧಿಸಿದಂತೆ, ಆಗಸ್ಟ್ 12ರಂದು ಸರ್ಕಾರ ಹೊರಡಿಸಿರುವ ಆದೇಶದ ರದ್ದತಿಗೆ ಕೋರಿ ಅರ್ಚಕ ವಿಶ್ವನಾಥ ಫಣಿರಾಜ್ ಭಟ್ ಗೋಪಿ ಎನ್ನುವವರು ಮನವಿ ಸಲ್ಲಿಸಿದ್ದಾರೆ.
ರಾಮಚಂದ್ರಾಪುರ ಮಠಕ್ಕೆ ದೇವಾಲಯವನ್ನು ಹಸ್ತಾಂತರಿಸಿರುವ ಹಿಂದೆ ಮುಖ್ಯಮಂತ್ರಿಗಳ ರಾಜಕೀಯ ಲಾಭವೇ ಎದ್ದು ಕಾಣುತ್ತಿದೆ. ಸಚಿವ ಸಂಪುಟದ ಅನುಮೋದನೆಯನ್ನೂ ಪಡೆಯದೇ ಏಕಾಏಕಿ ಕಾನೂನು ಬಾಹಿರವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.
ಗೋಕರ್ಣ ದೇವಾಲಯ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಕಾಯ್ದೆ 1997ಕ್ಕೆ ಒಳಪಡುತ್ತದೆ. ಈ ಹಿನ್ನೆಲೆಯಲ್ಲಿ ಅದನ್ನು ಹಸ್ತಾಂತರ ಮಾಡಿರುವುದು ಸರಿಯಲ್ಲ. ಆದರೆ ಮಹಾಬಲೇಶ್ವರ ದೇವಾಲಯದ ಉಪಾಧಿವಂತ ಮಂಡಲದ ಅಧ್ಯಕ್ಷರು ಕಳೆದ ಫೆಬ್ರುವರಿಯಲ್ಲಿ ಸರ್ಕಾರಕ್ಕೆ ಪತ್ರ ಬರೆದು ಅದನ್ನು ಮಠಕ್ಕೆ ಸೇರಿಸುವಂತೆ ಕೋರಿದ್ದಾರೆ. ಈ ರೀತಿ ಸೇರಿಸುವುದರಿಂದ ಸರ್ವತೋಮುಖ ಅಭಿವೃದ್ಧಿ ಆಗುವುದಾಗಿ ಅವರು ತಿಳಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಗೋಕರ್ಣ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವ ಆದೇಶವನ್ನು ಹಿಂಪಡೆದು,ದೇವಾಲಯದ ಉಸ್ತುವಾರಿಗೆ ವಹಿಸುವಂತೆ ಮತ್ತು ವಿವಾದಕ್ಕೆ ಸಂಬಂಧಿ ಸಿದ ಸಾಕ್ಷ್ಯಾಧಾರಗಳನ್ನು ಹಾಜರುಪಡಿಸುವಂತೆ ಸರ್ಕಾರಕ್ಕೆ ಆದೇಶಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
|
|
|
|