| ಸಿದ್ದರಾಮಯ್ಯ ನಾಯಕ ಪಟ್ಟ ಹಾದಿ ಸುಗಮ | | | ಬೆಂಗಳೂರು, ಶುಕ್ರವಾರ, 5 ಜೂನ್ 2009( 12:36 IST ) | | | |
| | |
| ಕಾಂಗ್ರೆಸ್ ಸೇರಿದಾಗಿನಿಂದಲೂ ಅಸಮಾಧಾನದ ಕಿಡಿಕಾರುತ್ತಿದ್ದ ಸಿದ್ದರಾಮಯ್ಯನವರ ಹಾದಿ ಇದೀಗ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸಚಿವರಾಗಿ ಆಯ್ಕೆಯಾದ ಮೇಲೆ ಸುಗಮಗೊಂಡಂತಾಗಿದೆ.ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಸಿದ್ದರಾಮಯ್ಯನವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ. ಈ ಸಂಬಂಧ ಜೂನ್ 7ರಂದು ನಡೆಯುವ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಅಂತಿಮವಾಗಿ ನಿರ್ಧಾರ ಹೊರಬೀಳಲಿದೆ.ಈ ಬಗ್ಗೆ ಮಾಹಿತಿ ನೀಡಿರುವ ಕೆಪಿಸಿಸಿ ಅಧ್ಯಕ್ಷ ಆರ್. ವಿ. ದೇಶಪಾಂಡೆ, ಮಲ್ಲಿಕಾರ್ಜುನ ಖರ್ಗೆ ಅವರ ರಾಜೀನಾಮೆಯಿಂದ ತೆರವಾಗಿರುವ ಈ ಸ್ಥಾನ ತುಂಬಲು ಶಾಸಕಾಂಗ ಪಕ್ಷದ ಸಭೆ ನಡೆಸುವಂತೆ ರಾಜ್ಯ ಉಸ್ತುವಾರಿ ವಹಿಸಿರುವ ಗುಲಾಂ ನಬಿ ಅಜಾದ್ ಅವರು ಸೂಚನೆ ನೀಡಿದ್ದಾರೆ ಎಂದು ಹೇಳಿದರು. |
| |
| | |
| | | |
|
| | | | | |
|
|
| |
|  | |