ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕನ್ನಡಿಗರಿಗೆ ಸಂತಸದ ಸುದ್ದಿ;ಕನ್ನಡ ವಿಕಿಪೀಡಿಯಾ ಪೋರ್ಟ್‌ಲ್ (Kannada Wikipedia | Mukhyamantri Chandru | website | Yeddyurappa)
ಕನ್ನಡಿಗರಿಗೆ ಸಂತಸದ ಸುದ್ದಿಯೊಂದು ಬಂದಿದೆ. ಸಮಗ್ರ ಮಾಹಿತಿಯುಳ್ಳ ಕನ್ನಡ ಪೋರ್ಟ್‌ಲ್‌ವೊಂದನ್ನು ಭಾರತೀಯ ಮಾಹಿತಿ ತಂತ್ರಜ್ಞಾನ (ಐಐಟಿ) ಸಂಸ್ಥೆಯ ನೆರವಿನೊಂದಿಗೆ ಲಭಿಸುವಂತೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದೆ.
ಒಂದು ವೇಳೆ ಇದು ಸಾಧ್ಯವಾದರೆ ದೇಶದ ಪ್ರಾದೇಶಿಕ ಭಾಷೆಗಳಲ್ಲಿ ಇಂತಹ ಸಾಧನೆ ಮಾಡಿದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದಾಗಲಿದೆ. ಹಾಲಿ ಇರುವ ಇಂಗ್ಲಿಷ್ ವಿಕಿಪೀಡಿಯಾದಂತೆ ವಿಶ್ವದ ಪ್ರತಿಯೊಂದು ಸಂಗತಿಯ ಮಾಹಿತಿ ಕ್ಷಣ ಮಾತ್ರದಲ್ಲಿ ಮಾಹಿತಿ ನೀಡುವ ಅಂತರ್ಜಾಲ ಜ್ಞಾನಕೋಶ ಇದಾಗಲಿದೆ.
2ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಪ್ರೊ.ಎಸ್.ಶಡಗೋಪನ್ ಹಾಗೂ ಜ್ಞಾನ ಆಯೋಗದ ಕಾರ್ಯದರ್ಶಿ ಎಂ.ಕೆ.ಶ್ರೀಧರ್ ಅವರ ನೇತೃತ್ವದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕಾರ್ಯಕ್ಕೆ ಮುಂದಾಗಿದೆ.
ಕನ್ನಡ ವಿಕಿಪೀಡಿಯಾ ಕುರಿತು ಬುಧವಾರ ನಡೆದ ಪೂರ್ವಸಿದ್ಧತಾ ಸಭೆಯ ನಂತರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು, ಹಾಲಿ ಇಂಗ್ಲಿಷ್ ವಿಕಿಪೀಡಿಯಾದಲ್ಲಿ ಲಭ್ಯವಿರುವ ಎಲ್ಲಾ ಮಾಹಿತಿಯ ಜತೆಗೆ ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಳವಡಿಸಿ ಕನ್ನಡ ವಿಕಿಪೀಡಿಯಾವನ್ನು ಕನ್ನಡ ರಾಜ್ಯೋತ್ಸವ(ನ.1) ವೇಳೆಗೆ ಸಿದ್ದಪಡಿಸುವ ಭರವಸೆ ನೀಡಿದರು.
ಈ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಿಗೆ ನೀಡಿದ್ದು, ಬಜೆಟ್‌ನಲ್ಲಿ 2ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಕನ್ನಡಿಗರಿಗೆ ಇರುವ ಮಾಹಿತಿ ಕೊರತೆಯನ್ನು ನೀಗಿಸಲು ಹಾಗೂ ಭಾಷೆಯ ಉಳಿವಿಗೆ ಈ ವಿಕಿಪೀಡಿಯಾ ಮಹತ್ವದ ಕೊಡುಗೆ ನೀಡಲಿದೆ ಎಂದರು.
ಕನ್ನಡ ವಿಕಿಪೀಡಿಯಾ ನಿರ್ಮಾಣಕ್ಕೆ ಅಗತ್ಯವಾದ ನೂನತ ಕನ್ನಡ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುವುದು. ಹಾಲಿ ಇರುವ ಎಲ್ಲಾ ಕನ್ನಡ ತಂತ್ರಾಂಶಗಳ ಉತ್ತಮ ಅಂಶಗಳನ್ನು ಸೇರಿಸಿ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಲಾಗುವುದು. ಇದಲ್ಲದೆ, ಕನ್ನಡ ಕೀಬೋರ್ಡ್ ಸಹ ಅಭಿವೃದ್ಧಿಪಡಿಸುವ ಕುರಿತು ಐಬಿಎಂ, ಮೈಕ್ರೋಸಾಫ್ಟ್‌ನಂತಹ ಸಂಸ್ಥೆಗಳ 50ತಜ್ಞರೊಂದಿಗೆ ನಡೆದ ಸಭೆಯಲ್ಲಿ ಚರ್ಚೆ ನಡೆಯಿತು.