ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಆಹಾರ ಬಡಿಸಿದ ರಾಖಿ ಸಾವಂತ್
ಸುದ್ದಿ/ಗಾಸಿಪ್
Feedback Print Bookmark and Share
 
IFM
10ನೆ ವರ್ಷದಿಂದಲೇ ರಾಖಿ ಸಾವಂತ್ ಟೀನಾ ಅಂಬಾನಿ ವಿವಾಹದಲ್ಲಿ ಆಹಾರವನ್ನು ಬಡಿಸಿದ್ದಳು. ಈಗ ಮುಂಬೈನ ಸಬರ್ಬ್‌ನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಮಾಲಕಿ. ನನ್ನ ಕಥೆ ಕೇಳುವುದಕ್ಕೆ ಮುಂಚೆ ನಿಮ್ಮ ಕರವಸ್ತ್ರವನ್ನು ಸಿದ್ಧವಾಗಿಡಿ ಎನ್ನುತ್ತಾ ರಾಖಿ ಸಾವಂತ್ ಸಂದರ್ಶನದಲ್ಲಿ ಹೇಳುತ್ತಾಳೆ.

ನಾನು ಬಾಲಕಿಯಾಗಿದ್ದಾಗ ಪುರುಷರು ದುರುಗುಟ್ಟಿಕೊಂಡು ನೋಡಿ ಹೆದರಿಸುತ್ತಿದ್ದರು. ಬಾಲ್ಕನಿಗಳಲ್ಲಿ ನಿಂತುಕೊಳ್ಳುವ ಹಾಗಿಲ್ಲ. ಬ್ಯೂಟಿ ಪಾರ್ಲರ್‌ಗಳಿಗೆ ಹೋಗುವಂತಿಲ್ಲ. ನವರಾತ್ರಿ ಸಮಯದಲ್ಲಿ ನೃತ್ಯ ಮಾಡುವಂತಿಲ್ಲ. ಇದರಿಂದ ಬಂಡಾಯ ಪ್ರವೃತ್ತಿ ಬೆಳೆಸಿಕೊಂಡು ಎಲ್ಲ ನಿಯಮಗಳನ್ನು ಮುರಿಯಲು ನಿರ್ಧರಿಸಿದೆ.

11 ವರ್ಷವಾಗಿದ್ದಾಗ ದಂಡಿಯಾದಲ್ಲಿ ನಟಿಸಲು ನನ್ನ ಮನಸ್ಸು ಹಾತೊರೆಯಿತು. ಅವರು ಕೊಂದರೂ ಪರವಾಗಿಲ್ಲ. ದಂಡಿಯಾಗೆ ಹೋಗಿಯೇ ತೀರುವುದಾಗಿ ನಿರ್ಧರಿಸಿದೆ. ನನ್ನ ದೇಹ ಸಂಗೀತ ಮತ್ತು ಲಯವನ್ನು ಗುರುತಿಸಲು ಆರಂಭಿಸಿತ್ತು.

ಮನೆಗೆ ವಾಪಸು ಬಂದಾಗ ತಾಯಿ ಮತ್ತು ಮಾಮಾ ನನಗೆ ಪಾಠ ಕಲಿಸಲು ನಿರ್ಧರಿಸಿ ಉದ್ದದ ಕೂದಲನ್ನು ಕತ್ತರಿಸಿ ಸಣ್ಣ ಕ್ರಾಪ್‌ಗೆ ಬದಲಾಯಿಸಿದರು. ಕನ್ನಡಿಯನ್ನು ನೋಡಿಕೊಂಡ ರಾತ್ರಿಯಿಡ್ಡೀ ಗಳಗಳನೇ ಅತ್ತೆ. ಮಾಮಾ ಕೈಗೆ ಬಲವಾಗಿ ಹೊಡೆದಾಗ ಹೊಲಿಗೆ ಹಾಕಿದ ಗುರುತು ಇನ್ನೂ ಉಳಿದಿದೆ.

ಆ ದಿನವೇ ನಿರ್ಧರಿಸಿದೆ. ಇಡೀ ಜಗತ್ತೇ ನನ್ನ ವಿರುದ್ಧ ತಿರುಗಿಬಿದ್ದರೂ ತಾನು ಏನು ಮಾಡಬೇಕೊ ಅದನ್ನೇ ಮಾಡುವೆ.ನನ್ನ ತಾಯಿಯ ಜೀವನದ ಒಂದೇ ಗುರಿ ನಾನು ಹಣ ಸಂಪಾದಿಸಬೇಕೆನ್ನುವುದು. ಇದರಿಂದ ಕುಟುಂಬಕ್ಕಾಗುವ ಅವಮಾನವನ್ನು ಅವರು ಮರೆತಿದ್ದರು. 10 ವರ್ಷದ ಬಾಲಕಿಯಾಗಿದ್ದಾಗ 50 ರೂ. ದಿನಗೂಲಿಗೆ ಉಪಾಹಾರ ಗೃಹದಲ್ಲಿ ದುಡಿದೆ. ಟೀನಾ ಅಂಬಾನಿಯ ವಿವಾಹ ಸಮಾರಂಭದಲ್ಲಿ ಆಹಾರವನ್ನು ಬಡಿಸಿದ್ದೆ.

ನೀವು ವಜ್ರಗಳನ್ನು ಕೊಡುತ್ತೇನೆಂದರೂ ಬಾಲ್ಯದ ದಿನಗಳಿಗೆ ಹಿಂತಿರುಗಲು ಇಷ್ಟವಿಲ್ಲ. ನನ್ನ ಬಾಲ್ಯವನ್ನು ಪಾಪ್‌ಕಾರ್ನ್ ತಿನ್ನುತ್ತಾ, ಚಿತ್ರಗಳನ್ನು ವೀಕ್ಷಿಸುತ್ತಾ ಕಳೆಯಲು ಇಷ್ಟಪಟ್ಟಿದ್ದೆ.

ಈಗ ನಾನು ವೃತ್ತಿಜೀವನದ ಉತ್ತುಂಗದಲ್ಲಿದ್ದು ಬ್ರಾಂಡ್ ಆಗಿದ್ದೇನೆ,ಈಗ ನಾನು ನಟಿ, ನೃತ್ಯಗಾತಿ ಎಲ್ಲವೂ ಆಗಿದ್ದೇನೆ ಎಂದು ರಾಖಿ ಸಾವಂತ್ ಕತೆ ಮುಗಿಸುವೆಷ್ಟರಲ್ಲಿ ನಿಮ್ಮ ಕರವಸ್ಟ್ರ ಒದ್ದೆಯಾಗಿರಬಹುದು.