ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇನ್ಫೋಸಿಸ್ ತ್ರೈಮಾಸಿಕ ವರದಿ: ಶೇ.17ರ ಪ್ರಗತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ಫೋಸಿಸ್ ತ್ರೈಮಾಸಿಕ ವರದಿ: ಶೇ.17ರ ಪ್ರಗತಿ
ಸಾಫ್ಟ್‌ವೇರ್ ದೈತ್ಯ ಇನ್ಫೋಸಿಸ್ ಟೆಕ್ನಾಲಜೀಸ್ 2009, ಜೂನ್ 30ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 17.28ರ ಪ್ರಗತಿ ದಾಖಲಿಸಿದ್ದು, 1,527 ಕೋಟಿ ರೂಪಾಯಿಗಳ ಲಾಭ ಗಳಿಸಿದೆ.

ಈ ಹಿಂದಿನ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಸಂಸ್ಥೆಯು 1,302 ಕೋಟಿ ರೂಪಾಯಿಗಳ ಆದಾಯ ಗಳಿಸಿತ್ತು ಎಂದು ಮುಂಬೈ ಶೇರು ಮಾರುಕಟ್ಟೆಗೆ ಸಲ್ಲಿಸಿರುವ ವರದಿಯಲ್ಲಿ ಇನ್ಫೋಸಿಸ್ ತಿಳಿಸಿದೆ.

ಕಂಪನಿಯು ಸಾಫ್ಟ್‌ವೇರ್ ಸೇವೆಗಳು, ಉತ್ಪಾದನೆಗಳು ಮತ್ತು ವ್ಯವಹಾರಿಕ ಕಾರ್ಯವಿಧಾನ ಆಡಳಿತದಿಂದ ಜೂನ್ 30ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕ ಅವಧಿಯಲ್ಲಿ 5,472 ಕೋಟಿ ರೂಪಾಯಿಗಳನ್ನು ಸಂಪಾದಿಸಿದೆ. ವರ್ಷಗಳ ಹಿಂದಿನ ಇದೇ ಅವಧಿಯಲ್ಲಿ 4,854 ಕೋಟಿ ರೂಪಾಯಿಗಳಷ್ಟಿದ್ದ ಮೊತ್ತವು ಶೇಕಡಾ 12.73ರ ಏರಿಕೆ ಕಂಡಿದೆ.

ಈ ಹಿಂದಿನ ತ್ರೈಮಾಸಿಕ ಅವಧಿಗೆ ಹೋಲಿಸಿದಾಗ ಇನ್ಫೋಸಿಸ್ ಒಟ್ಟು ಲಾಭವು ಶೇಕಡಾ 5.33ರ ಕುಸಿತ ಕಂಡಿದೆ. 2009ರ ಜನವರಿಯಿಂದ ಮಾರ್ಚ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಕಂಪನಿಯು 1,613 ಕೋಟಿ ರೂಪಾಯಿಗಳ ಲಾಭ ಗಳಿಸಿದ್ದರೆ, ಈ ಬಾರಿ ಅದು 1,527 ಕೋಟಿ ರೂಪಾಯಿಗಳಿಗೆ ಕುಸಿದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ ಹಗರಣ: ಮಂಪರು ಪರೀಕ್ಷೆಗೆ ನ್ಯಾಯಾಲಯ ಸಮ್ಮತಿ
ರೈಲ್ವೇ ನೇಮಕಾತಿಗೆ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ?
ಕಚ್ಚಾ ತೈಲ ಬೆಲೆ ಇಳಿದಲ್ಲಿ ಭಾರತದಲ್ಲೂ ಇಳಿಕೆ
ಗೊಂದಲದಲ್ಲಿ ಬಿಎಂಡಬ್ಲ್ಯೂ
ಬಜಾಜ್ ಡಿಸ್ಕವರ್ ಮಾರುಕಟ್ಟೆಗೆ
ಚಿನ್ನ, ಬೆಳ್ಳಿ ದರ ಕುಸಿತ