| ಸೂಚ್ಯಂಕ 438 ಪಾಯಿಂಟ್ ತೀವ್ರ ಕುಸಿತ | | | ಮುಂಬೈ, ಸೋಮವಾರ, 8 ಜೂನ್ 2009( 17:17 IST ) | | | |
| | |
| ಮುಂಬೈ ಷೇರುಪೇಟೆಯ ಬೆಂಚ್‌ಮಾರ್ಕ್ ಸೂಚ್ಯಂಕ ಸೋಮವಾರ ವರ್ಷದಲ್ಲೇ ಮೂರನೇ ಅತ್ಯಂತ ದೊಡ್ಡ ಕುಸಿತ ಅನುಭವಿಸಿ ದಿನದ ಅಂತ್ಯದ ವಹಿವಾಟಿನಲ್ಲಿ 438 ಪಾಯಿಂಟ್ ಕಳೆದುಕೊಂಡಿತು. ಏಷ್ಯಾ ಮತ್ತು ಐರೋಪ್ಯ ಷೇರು ಪ್ರವೃತ್ತಿ ದುರ್ಬಲವಾಗಿದ್ದರಿಂದ ಹೂಡಿಕೆದಾರರು ಲಾಭ ಗಳಿಸಲು ಷೇರುಗಳ ಮಾರಾಟ ಮಾಡಿದ್ದರಿಂದ ಈ ಬೆಳವಣಿಗೆ ಉಂಟಾಗಿದೆ. ಲೋಹ, ಬ್ಯಾಂಕಿಂಗ್ ಮತ್ತು ಸ್ಥಿರಾಸ್ತಿ ಷೇರುಗಳು ತೀವ್ರ ನಷ್ಟ ಅನುಭವಿಸಿದ್ದರಿಂದ ಸತತವಾಗಿ 13 ವಾರ ಲಾಭ ಗಳಿಸಿದ್ದ ಸೂಚ್ಯಂಕ 437.63 ಅಂಶ ಕಳೆದುಕೊಂಡು 14,665.92ಕ್ಕೆ ಮುಟ್ಟಿದೆ.ಸೂಚ್ಯಂಕದ ಕುಸಿತವು ಜನವರಿ 7 ಮತ್ತು ಮಾರ್ಚ್ 30ರ ಕುಸಿತದ ಬಳಿಕ ಮೂರನೇ ಅತ್ಯಧಿಕ ಕುಸಿತವಾಗಿದೆ.ಇದೇ ರೀತಿ ರಾಷ್ಟ್ರೀಯ ಷೇರುಸೂಚ್ಯಂಕದ ನಿಫ್ಟಿ 157 ಪಾಯಿಂಟ್ ನಷ್ಟ ಅನುಭವಿಸಿ 4429.90ಕ್ಕೆ ಮುಟ್ಟಿದೆ. ಡಾಲರ್ ದೃಢಪಡುವಿಕೆಯಿಂದ ಮಾಹಿತಿ ತಂತ್ರಜ್ಞಾನ ಷೇರುಗಳು ಸಕಾರಾತ್ಮಕ ಮಾರ್ಗದಲ್ಲಿದ್ದು ಉತ್ತಮ ಆದಾಯದ ನಿರೀಕ್ಷೆ ಮೂಡಿಸಿದ್ದವು. |
| |
| | |
| | | |
|
| | | | | |
|
|
| |
|  | |