ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ನದಿ ಮಾಲಿನ್ಯದಿಂದ ಅಳಿವಿನ ಅಂಚಿನಲ್ಲಿ ಡಾಲ್ಪಿನ್‌ಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನದಿ ಮಾಲಿನ್ಯದಿಂದ ಅಳಿವಿನ ಅಂಚಿನಲ್ಲಿ ಡಾಲ್ಪಿನ್‌ಗಳು
ಮೆಕಾಂಗ್ ನದಿಯಲ್ಲಿ ಜಲಮಾಲಿನ್ಯದಿಂದ ಕಾಂಬೋಡಿಯ ಮತ್ತು ಲಾವೋಸ್‌ನಲ್ಲಿರುವ ಡಾಲ್ಫಿನ್ ಸಂತತಿ ಅಳಿವಿನ ಅಂಚಿಗೆ ತಲುಪಿದೆಯೆಂದು ಡಾಲ್ಫಿನ್ ಸಂರಕ್ಷಣೆ ಗುಂಪು ಡಬ್ಲ್ಯುಡಬ್ಲುಎಫ್ ತಿಳಿಸಿದೆ. ಮೆಕಾಂಗ್ ನದಿಯ ಇರಾವಾಡಿ ಡಾಲ್ಫಿನ್‌ಗಳು ಕಾಂಬೋಡಿಯ ಮತ್ತು ಲಾವೊ ನಡುವೆ 190 ಕಿಮೀ ಜಲಪ್ರದೇಶದ ವ್ಯಾಪ್ತಿಯಲ್ಲಿ ಹರಡಿವೆ.

2003ರಿಂದೀಚೆಗೆ ಡಾಲ್ಪಿನ್ ಸಂಖ್ಯೆ ಕ್ಷೀಣಿಸುತ್ತಾ ಬಂದಿದ್ದು, ಸುಮಾರು 88 ಡಾಲ್ಫಿನ್‌ಗಳು ಜಲಮಾಲಿನ್ಯದಿಂದ ಅಸುನೀಗಿವೆ. ಸತ್ತಿರುವ ಡಾಲ್ಫಿನ್‌ಗಳಲ್ಲಿ ಶೇ. 60 ರಷ್ಟು ಡಾಲ್ಫಿನ್ ಮರಿಗಳಾಗಿವೆ. ಮೆಕಾನ್ ನದಿಯಲ್ಲಿ ಈಗ ಉಳಿದಿರುವುದು 64ರಿಂದ 76 ಡಾಲ್ಫಿನ್‌ಗಳೆಂದು ಹೇಳಲಾಗಿದೆ. ಮರಿಗಳ ಸಾವಿಗೆ ಬ್ಯಾಕ್ಟೀರಿಯ ಕಾಯಿಲೆ ಕಾರಣವೆಂದು ನೆಕ್ರೋಪ್ಸಿ ವಿಶ್ಲೇಷಣೆಯಲ್ಲಿ ಗುರುತಿಸಲಾಗಿದೆ.

ಪರಿಸರ ಮಾಲಿನ್ಯಕಾರಿ ವಸ್ತುಗಳಿಂದ ಡಾಲ್ಫಿನ್ ರೋಗನಿರೋಧಕ ಶಕ್ತಿ ಕುಂದಿರದಿದ್ದರೆ ಈ ಕಾಯಿಲೆಯು ಮಾರಣಾಂತಿಕವಲ್ಲವೆಂದು ಹೇಳಲಾಗಿದೆ. ಸತ್ತಿರುವ ಡಾಲ್ಫಿನ್ ಮರಿಗಳ ವಿಶ್ಲೇಷಣೆಯಲ್ಲಿ ಸಂಶೋಧಕರು ಡಿಡಿಟಿಯಂತ ಕೀಟನಾಶಕದ ವಿಷಕಾರಿ ವಸ್ತುಗಳು ಮತ್ತು ಪಿಸಿಬಿ ಮುಂತಾದ ಪರಿಸರ ಮಾಲಿನ್ಯಕಾರಕಗಳನ್ನು ಪತ್ತೆಹಚ್ಚಿದ್ದಾರೆ.

ಈ ಮಾಲಿನ್ಯಕಾರಕಗಳು ಡಾಲ್ಫಿನ್‌ಗಳು ಸೇವಿಸುವ ಮೀನು ಮತ್ತು ನೀರನ್ನು ಬಳಸುವ ಮೆಕಾಂಗ್ ನದಿ ದಂಡೆಯ ಮೇಲೆ ಮಾನವ ಜನಾಂಗಕ್ಕೆ ಆರೋಗ್ಯದ ಅಪಾಯಗಳನ್ನು ಉಂಟುಮಾಡಬಹುದೆಂದು ತಂಡ ಆತಂಕ ವ್ಯಕ್ತಪಡಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕ್ರಿಕೆಟ್ ತಂಡದ ಮೇಲೆ ದಾಳಿ ನಡೆಸಿದ ಉಗ್ರನ ಬಂಧನ
ಉತ್ತರ ಕೊರಿಯ ವಿಮಾನವನ್ನು ತಡೆದ ಭಾರತ
ಅಮೆರಿಕದ ಡ್ರೋನ್ ದಾಳಿಗೆ ಐವರು ಉಗ್ರರು ಹತ
ಲೈಸೆಸ್ಟರ್‌ನಲ್ಲಿ ಉರುಗೋಲು ಹಿಡಿದ ಗಾಂಧಿ ಪ್ರತಿಮೆ
ಸಿಂಗ್ ಹೇಳಿಕೆಗೆ ಕಿಡಿಕಾರಿದ ಪಾಕಿಸ್ತಾನ
ಜಾರಿಬಿದ್ದ ಹಿಲರಿ ಕ್ಲಿಂಟನ್ ಮೊಣಕೈಗೆ ಪೆಟ್ಟು