ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಲೇಶ್ಯಾ: ಮುಸ್ಲಿಮೇತರರು 'ಅಲ್ಲಾ' ಪದ ಬಳಸುವಂತಿಲ್ಲ (Malaysia | Bibles | seized | Allah)
Feedback Print Bookmark and Share
 
ಬೈಬಲ್‌ಗಳಲ್ಲಿ ದೇವರನ್ನು ಅಲ್ಲಾ ಎಂಬ ಪದ ಬಳಸಿ ಸಂಬೋಧಿಸಿರುವ ಕಾರಣ, ಮಲೇಶ್ಯವು ಇಂಡೋನೇಶ್ಯದಿಂದ ಆಮದು ಮಾಡಲಾಗಿರುವ 15 ಸಾವಿರ ಬೈಬಲ್‌ಗನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲಾ ಎಂಬುದು ಮುಸ್ಲಿಂ ಶಬ್ದವಾಗಿದ್ದು, ಇದನ್ನು ಮುಸ್ಲಿಮೇತರರು ಬಳಸುವುದು ಮುಸ್ಲಿಮರನ್ನು ಅಸಂತುಷ್ಟಿಗೊಳಿಸುತ್ತದೆ ಎಂಬುದು ಇದರ ಹಿಂದಿರುವ ಕಾರಣ ಎಂದು ಹೇಳಲಾಗಿದೆ.

ಮುಸ್ಲಿಮರ ಓಲೈಕೆಗಾಗಿ ಸರ್ಕಾರವು ಬೈಬಲ್‌ಗಳ ಮುಟ್ಟುಗೋಲು ಪ್ರಕರಣಕ್ಕೆ ಮುಂದಾಗಿದೆ ಎಂದು ಹೇಳಿರುವ ಅಲ್ಪಸಂಖ್ಯಾತ ಕ್ರೈಸ್ತರು, ತಮ್ಮ ಧಾರ್ಮಿಕ ಆಚರಣೆಯ ಹಕ್ಕಿಗೆ ಬೆದರಿಕೆ ಎದುರಾಗಿದೆ ಎಂಬ ಭೀತಿಯನ್ನು ವ್ಯಕ್ತಪಡಿಸಿದ್ದಾರೆ.

ಮಲೇಶ್ಯಾವು ಬಹುಜನಾಂಗೀಯ ಸೌಹಾರ್ದ ರಾಷ್ಟ್ರವಾಗಿದ್ದು ಇಲ್ಲಿ ಮಂದಗತಿಯ ಇಸ್ಲಾಂ ಆಚರಣೆ ಜಾರಿಯಲ್ಲಿದ್ದು, ಇದೀಗ ಅಲ್ಪಸಂಖ್ಯಾತರ ಕುರಿತು ಪಕ್ಷಪಾತವು ಹೆಚ್ಚುತ್ತಿದ್ದು ಇದು ಮಲೇಶ್ಯಾದ ಪ್ರತಿಷ್ಠೆಗೆ ಧಕ್ಕೆಯುಂಟುಮಾಡುತ್ತಿದೆ ಎಂದು ಬಣ್ಣಿಸಲಾಗಿದೆ.

ಇಂಡೋನೇಶ್ಯ ಭಾಷೆಯ ಬೈಬಲ್‌ಗಳಲ್ಲಿ 'ಅಲ್ಲಾ' ಎಂಬ ಶಬ್ದವಿರುವ ಕಾರಣ ಜಕಾರ್ತದಿಂದ ಕಳುಹಿಸಲಾಗಿರುವ 10 ಸಾವಿರ ಬೈಬಲ್ ಪ್ರತಿಗಳನ್ನು ಮಲೇಶ್ಯ ಪ್ರಾಧಿಕಾರವು ಸೆಪ್ಟೆಂಬರ್ 11ರಂದು ಮುಟ್ಟುಗೋಲು ಹಾಕಿಕೊಂಡಿದೆ ಎಂಬುದಾಗಿ ಮಲೇಶ್ಯ ಚರ್ಚ್‌ಗಳ ಮಂಡಳಿಯ ಪ್ರಧಾನ ಕಾರ್ಯದರ್ಶಿ ರೆವರೆಂಡ್ ಹರ್ಮನ್ ಶಾಸ್ತ್ರಿ ಹೇಳಿದ್ದಾರೆ.

ಇಂಡೋನೇಶ್ಯ ಹಾಗೂ ಮಲೇಶ್ಯಾ ಭಾಷೆಗಳು ಒಂದೇ ತೆರನಾಗಿದ್ದು, ಎರಡೂ ಭಾಷೆಗಳಲ್ಲೂ ದೇವರಿಗೆ 'ಅಲ್ಲಾ' ಎಂಬ ಪದವನ್ನು ಬಳಸಲಾಗುತ್ತದೆ.

ಈಮಧ್ಯೆ, 5,100 ಬೈಬಲ್‌ಗಳನ್ನು ಇದೇ ಕಾರಣಕ್ಕಾಗಿ ಮಾರ್ಚ್ ತಿಂಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂಬುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಸ್ಲಿಮೇತರರು ಅಲ್ಲಾ ಎಂಬ ಶಬ್ದವನ್ನು ಬಳಸುವುದನ್ನು ಮಲೇಶ್ಯಾ ನಿಷೇಧಿಸಿದೆ. ಇದು ಇಸ್ಲಾಮ್ ಶಬ್ದವಾಗಿದ್ದು, ಇದನ್ನು ಇತರರು ಬಳಸುವುದರಿಂದ ಮುಸ್ಲಿಮರು ಅಸಂತುಷ್ಟಿಗೊಳ್ಳುತ್ತಾರೆ ಎಂಬುದು ಇದಕ್ಕೆ ಕಾರಣ. ರಾಷ್ಟ್ರದ ಸುಮಾರು 60 ಶೇಕಡಾದಷ್ಟು ಮಂದಿ ಮಲಯ ಮುಸ್ಲಿಮರಾಗಿದ್ದಾರೆ. ಶೇ.25ರಷ್ಟು ಮಂದಿ ಚೀನ ಜನಾಂಗವಾಗಿದ್ದರೆ, ಶೇ.8ರಷ್ಟು ಮಂದಿ ಭಾರತೀಯರಾಗಿದ್ದಾರೆ. ಚೀನ ಹಾಗೂ ಭಾರತೀಯರಲ್ಲಿ ಬಹುತೇಕರು ಕ್ರಿಶ್ಚಿಯನ್ನರಾಗಿದ್ದಾರೆ.

ಅಲ್ಲಾ ಶಬ್ದವನ್ನು ಮುಸ್ಲಿಮೇತರರಿಗೆ ನಿಷೇಧಿಸಿರುವುದನ್ನು ಪ್ರಶ್ನಿಸಿ ರೋಮನ್ ಕ್ಯಾಥೊಲಿಕ್ ಚರ್ಚ್ ಕೋರ್ಟಿಗೆ ತೆರಳಿದ್ದು, ಇದು ಅಸಾಂವಿಧಾನಿಕವಾಗಿದ್ದು, ಮಲಯಾ ಭಾಷೆಯಲ್ಲಿ ಆರಾಧನೆ ಮಾಡುವವರ ವಿರುದ್ಧ ಎಸಗಲಾಗಿರುವ ತಾರತಮ್ಯವಾಗಿದೆ ಎಂದು ವಾದಿಸುತ್ತಿದೆ. ಈ ಪ್ರಕರಣವು ಪ್ರಾಥಮಿಕ ವಿಚಾರಣೆಯಲ್ಲೇ ಕಳೆದೆರಡು ವರ್ಷಗಳಿಂದ ಸಿಲುಕಿಕೊಂಡಿದೆ.

ನಾವು ಅಲ್ಲಾ ಎಂಬ ಶಬ್ದವನ್ನು ಹಲವಾರು ಕಾಲದಿಂದಲೇ ಬಳಸುತ್ತಿದ್ದು, ಇದೀಗ ಇದರ ನಿಷೇಧವು ತಮ್ಮ ಪೂಜಾ ಹಕ್ಕನ್ನು ಕಸಿದುಕೊಂಡಿದೆ ಎಂದು ಹೇಳಿರುವ ಶಾಸ್ತ್ರಿ, ಸರ್ಕಾರದ ಈ ಕ್ರಮವು ಬೈಬಲ್ ಬಳಕೆಯನ್ನು ನಿರಾಕರಿಸುತ್ತಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ