ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಶ್ಮೀರಕ್ಕೆ ಸ್ವಾತಂತ್ರ್ಯ: ಅರುಂಧತಿ ಹೇಳಿಕೆ ಎಬ್ಬಿಸಿದ ವಿವಾದ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಶ್ಮೀರಕ್ಕೆ ಸ್ವಾತಂತ್ರ್ಯ: ಅರುಂಧತಿ ಹೇಳಿಕೆ ಎಬ್ಬಿಸಿದ ವಿವಾದ
ಕಾಶ್ಮೀರದ ಜನತೆ ಭಾರತದಿಂದ ಸ್ವಾತಂತ್ರ್ಯ ಬಯಸಿದ್ದಾರೆ ಎಂದು ಲೇಖಕಿ, ಹೋರಾಟಗಾರ್ತಿ ಅರುಂಧತಿ ರಾಯ್ ಅವರು ನೀಡಿದ ವಿವಾದಾತ್ಮಕ ಹೇಳಿಕೆಗೆ ಎಲ್ಲೆಡೆಯಿಂದ ಖಂಡನೆ ವ್ಯಕ್ತವಾಗಿದ್ದು, ಇದು ಹೊಣೆಗೇಡಿತನದ ಅರಚಾಟ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಬಣ್ಣಿಸಿವೆ.

ಅರುಂಧತಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆಡಳಿತಾರೂಢ ಪಕ್ಷ ಕಾಂಗ್ರೆಸ್, ಆಕೆ 'ಕಡಿವಾಣವಿಲ್ಲದ ತುಪಾಕಿ' ಎಂದು ಬಣ್ಣಿಸಿದ್ದರೆ, ಆಕೆಯ ಹೇಳಿಕೆ ರಾಜದ್ರೋಹಕ್ಕಿಂತ ಕಡಿಮೆಯಲ್ಲ ಎಂದು ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಪ್ರತಿಕ್ರಿಯಿಸಿ, ಭಾರತದ ಔದಾರ್ಯವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡಿರುವ 'ಹಿಡಿತವಿಲ್ಲದ ತುಪಾಕಿ' ಎಂದು ಅರುಂಧತಿಯನ್ನು ಬಣ್ಣಿಸಿದ್ದಾರೆ.

ಭಾರತವು ಕಾಶ್ಮೀರದಲ್ಲಿ ಕದನವಿರಾಮ ಘೋಷಿಸಬೇಕು ಎಂದು ಬಹಿರಂಗವಾಗಿ ಕರೆಕೊಡುವವರನ್ನು ಲಾಕಪ್‌ಗೆ ತಳ್ಳಿ, ಬೀಗದ ಕೀಲಿಗಳನ್ನು ಎಲ್ಲೋ ಎಸೆಯದಿರುವುದು ಭಾರತೀಯ ಮೌಲ್ಯಗಳ ಸಹಿಷ್ಣುತೆಗೆ ನೀಡಿದ ಮಹಾನ್ ಕೊಡುಗೆ ಎಂದು ನನ್ನ ಭಾವನೆ ಎಂದು ತಿವಾರಿ ತೀಕ್ಷ್ಣವಾಗಿ ಹೇಳಿದ್ದಾರೆ.

ಇದೇ ಭಾವನೆಯನ್ನು ವ್ಯಕ್ತಪಡಿಸಿದ ಬಿಜೆಪಿ ವಕ್ತಾರ ಪ್ರಕಾಶ್ ಜಾವ್ಡೇಕರ್, ಇದು ವಿಶ್ವಾಸಘಾತುಕತನ. ಇದು ರಾಷ್ಟ್ರೀಯತೆಗೇ ಅವಮಾನ. ಆಕೆ ದೇಶದ ಸಾರ್ವಭೌಮತೆಯ ಮೇಲೆ ದಾಳಿ ಮಾಡಿದ್ದಾರೆ. ಆಕೆಯ ವರ್ತನೆ ರಾಜದ್ರೋಹಕ್ಕಿಂತ ಕಮ್ಮಿಯೇನಲ್ಲ ಎಂದವರು ನುಡಿದಿದ್ದಾರೆ.

ಅರುಂಧತಿ ಹೇಳಿಕೆಗೆ ಆಕ್ರೋಶದಿಂದ ಪ್ರತಿಕ್ರಿಯಿಸಿರುವ ಬಿಜೆಪಿಯ ಮತ್ತೊಬ್ಬ ವಕ್ತಾರ ಅರುಣ್ ಜೇಟ್ಲಿ, ದೇಶವನ್ನು ಬರಹಗಾರರೇನೂ ಆಳುತ್ತಿಲ್ಲ. ವ್ಯವಸ್ಥೆಯನ್ನು ಮುನ್ನಡೆಸುವುದರಲ್ಲಿ ಯಾವುದೇ ಹೊಣೆ ಇಲ್ಲದವರು ಈ ಪ್ರಜಾಪ್ರಭುತ್ವ ಸಮಾಜದಲ್ಲಿ ತಮಗೆ ಅನಿಸಿದ್ದನ್ನು ಹೇಳುವ ಸ್ವಾತಂತ್ರ್ಯವಿದೆ. ಆದರೆ ಅವರು ಹೇಳಿದ್ದೆಲ್ಲಾ ಈ ದೇಶಕ್ಕೆ ಸ್ವೀಕಾರಾರ್ಹವಾಗುವುದಿಲ್ಲ ಎಂದು ಹೇಳಿದ್ದಾರೆ.

ಮಂಗಳವಾರ ಕಾಶ್ಮೀರದಲ್ಲಿ ನಡೆದ ರ‌್ಯಾಲಿಯಲ್ಲಿ ಮಾತನಾಡಿದ್ದ ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್, 'ಕಾಶ್ಮೀರಿ ಜನತೆಯನ್ನು ಯಾರು ಪ್ರತಿನಿಧಿಸಬೇಕೆಂಬುದರ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಆದರೆ, ನನ್ನ ಪ್ರಕಾರ ಇಂದು ಜನತೆಯೇ ತಮ್ಮನ್ನು ಪ್ರತಿನಿಧಿಸಿಕೊಂಡಿದ್ದಾರೆ. ಭಾರತವು ಕಾಶ್ಮೀರದಿಂದ 'ಆಜಾದಿ' ಬಯಸುತ್ತಿದೆ ಮತ್ತು ಅದೇ ಪ್ರಕಾರ ಕಾಶ್ಮೀರವೂ ಭಾರತದಿಂದ ಸ್ವಾತಂತ್ರ್ಯ ಬಯಸುತ್ತದೆ' ಎಂದಿದ್ದರು.
ಮತ್ತಷ್ಟು
ರಾಷ್ಟ್ರಪತಿ ಆಡಳಿತವೇ ಪರ್ಯಾಯ: ಲಾಲು
ಸಿಮಿ ನಿಷೇಧ ತೆರವು ಮೇಲಿನ ತಡೆ ವಿಸ್ತರಣೆಗೆ ಆಗ್ರಹ
ಏಮ್ಸ್ ಮಕ್ಕಳ ಸಾವು: ತನಿಖೆಗೆ ವಿಶೇಷ ಸಮಿತಿ
ಇಂದು ನಾರಾಯಣನ್ ಜಮ್ಮು ಕಾಶ್ಮೀರ ಭೇಟಿ
138ರ ಹರೆಯದ ದೇಶದ ಹಿರಿಯಜ್ಜ ವಿಧಿವಶ
ಹೇವುಡ್ ಪರಾರಿ: ವರದಿಗೆ ಗೃಹ ಸಚಿವಾಲಯ ಸೂಚನೆ