ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮರಾಠಿ ಭಾಷಿಗರ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಲಿ: ಬಿಜೆಪಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮರಾಠಿ ಭಾಷಿಗರ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಲಿ: ಬಿಜೆಪಿ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಉಲ್ಬಣಗೊಳ್ಳುತ್ತಿರುವಂತೆಯೇ, ತನ್ನ ಮರಾಠಿ ಮಿತ್ರಪಕ್ಷಕ್ಕೆ ಬೆಂಬಲ ನೀಡಿರುವ ಮಹಾರಾಷ್ಟ್ರ ಬಿಜೆಪಿ, ಕರ್ನಾಟಕದ ಮರಾಠೀ-ಭಾಷಿಗರ ಪ್ರದೇಶಗಳನ್ನು ಮಹಾರಾಷ್ಟ್ರ ಜೊತೆ ವಿಲೀನಗೊಳಿಸಬೇಕು ಎಂದು ಹೇಳಿ, ಕರ್ನಾಟಕದ ಆಡಳಿತಾರೂಢ ಪಕ್ಷಕ್ಕೆ ಇರಿಸುಮುರಿಸುಂಟು ಮಾಡಿದೆ.

ಗಡಿಯ ಮರಾಠೀ ಭಾಷಿಗ ಪ್ರದೇಶಗಳು ಮಹಾರಾಷ್ಟ್ರದೊಂದಿಗೆ ಸೇರ್ಪಡೆಯಾಗಬೇಕು ಎಂಬುದು ರಾಜ್ಯ ಬಿಜೆಪಿಯ ಸ್ಪಷ್ಟ ನಿಲುವು ಎಂದು ಮಂಗಳವಾರ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಂಡ ನಿರ್ಣಯದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಭಾಷೆಯ ಹೆಸರಲ್ಲಿ ದ್ವೇಷದ ಬೀಜ ಬಿತ್ತುವ ಎಂಇಎಸ್

ಮಹಾರಾಷ್ಟ್ರ ರಚನೆಯಾಗಿ 50 ವರ್ಷಗಳಾಗಿವೆ. ಆದರೆ ಗಡಿ ವಿವಾದವಿನ್ನೂ ಪರಿಹಾರವಾಗಿಲ್ಲ. ರಾಜ್ಯ ಮತ್ತು ಕೇಂದ್ರಗಳಲ್ಲಿ ಹೆಚ್ಚಿನ ಅವಧಿಗೆ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದರೂ, ಈ ವಿವಾದಕ್ಕೆ ಪರಿಹಾರ ಕಂಡು ಹುಡುಕಲಾಗಲೇ ಇಲ್ಲ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಗಡಿಭಾಗದ ಮರಾಠೀ ಭಾಷಿಗರ ಬೇಡಿಕೆಯನ್ನು ಬಿಜೆಪಿಯು ಸಕ್ರಿಯವಾಗಿ ಬೆಂಬಲಿಸುತ್ತದೆ ಎಂದು ನಿರ್ಣಯ ಹೇಳಿದೆ. ಈ ಹೇಳಿಕೆಗೆ ಕರ್ನಾಟಕದ ಆಡಳಿತಾರೂಢ ಬಿಜೆಪಿ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂದು ಕಾದು ನೋಡಬೇಕಾಗಿದೆ.

ಜನವರಿ 16ರಂದು ಬೆಳಗಾವಿಯಲ್ಲಿ ಪ್ರಾರಂಭವಾಗಿರುವ ಒಂಬತ್ತು ದಿನಗಳ ಕರ್ನಾಟಕ ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯು ಗದ್ದಲವೆಬ್ಬಿಸಿ, ಗಡಿ ವಿವಾದದ ಬೆಂಕಿಗೆ ತುಪ್ಪ ಸುರಿದಿತ್ತು. ಕಳೆದ ವಾರದಿಂದೀಚೆಗೆ ಈ ವಿವಾದವು ಹಿಂಸಾರೂಪಕ್ಕೆ ತಿರುಗಿದ್ದು, ಉಭಯ ರಾಜ್ಯಗಳ ವಾಹನಗಳು ಬೆಂಕಿಗೆ ತುತ್ತಾಗುತ್ತಿವೆ ಮತ್ತು ಎರಡೂ ರಾಜ್ಯಗಳ ನಡುವೆ ಸರಕಾರಿ ಬಸ್ಸುಗಳ ಓಡಾಟವೂ ಸ್ಥಗಿತಗೊಂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿಗೆ ಡೈವೋರ್ಸ್ ನೋಟೀಸ್ ಕೊಟ್ಟ ಕಲ್ಯಾಣ್ ಸಿಂಗ್
ಮುಂಬೈದಾಳಿಗೆ ಅಮೆರಿಕದ ನೀತಿ ಕಾರಣ?
ಗಡಿವಿವಾದ: ಪ್ರಧಾನಿ, ರಾಷ್ಟ್ರಪತಿ ಬಳಿ ಸೇನಾ ನಿಯೋಗ
ದಿಕ್ಕುತಪ್ಪಿಸುವ ಸರ್ಕಸ್ ಬೇಡ: ಪಾಕ್‌ಗೆ ಭಾರತ
ಯುಪಿ: ರೈಲಿನಿಂದ ಉರುಳಿ ಬಿದ್ದು 3 ಸಾವು
ಒಂಬಳೆ, ಸಂದೀಪ್, ಗಜೇಂದ್ರಗೆ ಅಶೋಕ್ ಚಕ್ರ?