ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರಧಾನಿ ಅಭ್ಯರ್ಥಿ: ಅಂತಿಮ ನಿಲುವೇನೆಂದು ಕೇಳಿದ ಕಾಂಗ್ರೆಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿ ಅಭ್ಯರ್ಥಿ: ಅಂತಿಮ ನಿಲುವೇನೆಂದು ಕೇಳಿದ ಕಾಂಗ್ರೆಸ್
ಕಾಂಗ್ರೆಸ್‌ನ ಮಿತ್ರಪಕ್ಷವಾಗಿರುವ ಎನ್‌ಸಿಪಿ ಮುಖಂಡ ಶರದ್ ಪವರ್ ಅವರು ಪ್ರಧಾನ ಮಂತ್ರಿಯಾಗುವ ತನ್ನ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸಿರುವ ಬಳಿಕ, ಪ್ರಧಾನಿ ಅಭ್ಯರ್ಥಿ ಕುರಿತು ಅವರ ಅಂತಿಮ ನಿಲುವೇನು ಎಂಬುದಾಗಿ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಹೇಳಿದೆ.

"ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿಸಬೇಕು ಎಂದು ಕೇಳಿದವರಲ್ಲಿ ನಾನೆ ಮೊದಲಿಗ. ಅದರೆ ಕಾಂಗ್ರೆಸ್ ನನ್ನ ಪ್ರಸ್ತಾಪವನ್ನು ಸ್ವೀಕರಿಸಿರಲಿಲ್ಲ. ಅವರು ಪ್ರತೀ ರಾಜ್ಯದ ವಿಚಾರವನ್ನು ಪ್ರತ್ಯೇಕವಾಗಿ ಪರಿಗಣಿಸಲು ನಿರ್ಧರಿಸಿದ್ದರು. ಹೀಗಿರುವಾಗ ಅವರು ಏಕ ವ್ಯಕ್ತಿಯನ್ನು ಹೇಗೆ ಬಿಂಬಿಸುತ್ತಾರೆ. ಇಂತಹ ಪರಿಸ್ಥಿತಿಗಳಲ್ಲಿ ಎಲ್ಲಾ ಪಕ್ಷಗಳು ಅವರದ್ದೇ ಆದ ಅಭ್ಯರ್ಥಿಗಳನ್ನು ಹೊಂದಿರುತ್ತಾರೆ" ಎಂದು ಮನಮೋಹನ್ ಸಿಂಗ್ ಅವರನ್ನು ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಎಂಬುದಾಗಿ ಬಿಂಬಿಸಿದ ಬಳಿಕ ಪವಾರ್ ಹೇಳಿದ್ದರು.

ಈ ವಿಚಾರವನ್ನು ಅಂತಿಮ ಗೊಳಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌವ್ಹಾಣ್ ಅವರು ಪ್ರಫುಲ್ ಪಟೇಲ್‍‌ ಅವರೊಂದಿಗೆ ಗುರುವಾರ ಈ ಕುರಿತು ಮಾತುಕತೆ ನಡೆಸಲಿದ್ದಾರೆ.

ಶರದ್ ಪವಾರ್ ಅವರ ಪ್ರಧಾನಿ ಆಗೋ ಬಯಕೆಯು ಯುಪಿಎ ಮಿತ್ರರೊಳಗೆ ಗೊಂದಲ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸಿದೆ. ಈ ಮಧ್ಯೆ ವಿರೋಧಿ ಕೂಟ ಎನ್‌ಡಿಎ ಈ ವಿಚಾರವನ್ನು ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಲೇವಡಿ ಮಾಡುತ್ತಾ ಮತ್ತಷ್ಟು ಇರಿಸುಮುರಿಸು ಉಂಟುಮಾಡುತ್ತಿದೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಡ್ವಾಣಿ ವಿರುದ್ಧ ಸ್ಫರ್ಧೆಗೆ ಮಲ್ಲಿಕಾ ಸಾರಾಭಾಯಿ
ಪಶ್ಚಿಮ ಬಂಗಾಲ: ಸೈಕಲ್‌ಬಾಂಬ್‌ ಸ್ಫೋಟಕ್ಕೆ ಎರಡು ಬಲಿ
ವರುಣ್ ಹೇಳಕೆ: ಬಿಜೆಪಿಯೊಳಗೆ ಎರಡು ಧ್ವನಿ
ಆರ್‌ಜೆಡಿಗೆ ಕಾಂಗ್ರೆಸ್ ತಿರುಗೇಟು: ಹೊಂದಾಣಿಕೆ ಸಾಧ್ಯವಿಲ್ಲ
ಕೋರ್ಟ್ ದಯೆಯಿಂದ ಅರ್ಜಿ ಹಾಕಿದ 16 ವರ್ಷದ ಬಳಿಕ ಉದ್ಯೋಗ
ಪ್ರತಿಭಟನಾ ಕರೆನೀಡಿದವರು ನಷ್ಟಭರ್ತಿಮಾಡಲಿ: ಸು.ಕೋ