ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಇತರೆಲ್ಲೆಡೆಗಿಂತ ಭಾರತ ಹೆಚ್ಚು ಸುರಕ್ಷಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇತರೆಲ್ಲೆಡೆಗಿಂತ ಭಾರತ ಹೆಚ್ಚು ಸುರಕ್ಷಿತ
PTI
ಭಾರತಕ್ಕೆ ಪ್ರಯಾಣಿಸಬೇಡಿ ಎಂಬುದಾಗಿ ಅಮೆರಿಕ ತನ್ನ ಪ್ರಜೆಗಳಿಗೆ ಸಲಹೆ ನೀಡಿರುವುದರಿಂದ ಭಾರತ ಅಸಮಾಧಾನಗೊಂಡಿದ್ದು, ಇದು ಸಮರ್ಥನೀಯವಲ್ಲದ ಕಾರಣ ಈ ಸಲಹೆಯನ್ನು ಹಿಂತೆಗೆಯುವಂತೆ ಸರ್ಕಾರವು ಅಮೆರಿಕವನ್ನು ಕೋರುವುದಾಗಿ ಗೃಹ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

ಅಮೆರಿಕದ ಎಂಬೆಸಿ ವೆಬ್‌ಸೈಟಿನಲ್ಲಿ ತುರ್ತು ರಕ್ಷಕ ಸಂದೇಶ ನೀಡಿರುವ ಅಮೆರಿಕ, ತನ್ನ ಪ್ರಜೆಗಳಿಗೆ ಭಾರತದ ವಿರುದ್ಧ ಎಚ್ಚರಿಕೆ ನೀಡಿದೆ. "ಭಾರತದಾದ್ಯಂತ ಭಯೋತ್ಪಾದನೆಯ ಬೆದರಿಕೆ ಇದೆ" ಎಂಬುದಾಗಿ ಅಮೆರಿಕದ ಪ್ರಜೆಗಳಿಗೆ ತುರ್ತಾಗಿ ನೆನಪಿಸಲು ಭಾರತದಲ್ಲಿರುವ ಅಮೆರಿಕದ ಮಿಶನ್ ಬಯಸುತ್ತದೆ" ಎಂಬುದಾಗಿ ಸಂದೇಶದಲ್ಲಿ ಹೇಳಲಾಗಿದೆ.

ಭಾರತದಾದ್ಯಂತ ಭಯೋತ್ಪಾದನೆಯ ಹೆಚ್ಚಿನ ಭೀತಿ ಇರುವ ಕಾರಣ ಅಮೆರಿಕ ಪ್ರಜೆಗಳು ಎಲ್ಲಾ ಕಾಲದಲ್ಲೂ ಎಚ್ಚರ ವಹಿಸಬೇಕು. ಸ್ಥಳೀಯ ಸುದ್ದಿಗಳನ್ನು ಗಮನಿಸುತ್ತಲೇ ಇರಬೇಕು. ತಮ್ಮ ದೈನಂದಿನ ಚಟುವಟಿಕೆ ನಡೆಸುವ ವೇಳೆ ತಮ್ಮ ಮಾರ್ಗ ಹಾಗೂ ಸಮಯವನ್ನು ಬದಲಿಸುತ್ತಿರಬೇಕು" ಎಂದು ಸಂದೇಶದಲ್ಲಿ ಹೇಳಲಾಗಿದೆ.

ಇದಲ್ಲದೆ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ವೇಳೆ, ತಮ್ಮ ಹೋಟೇಲುಗಳು, ಮನೋರಂಜನಾ ತಾಣಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವ ವೇಳೆಗೆ ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಪರಿಗಣಿಸಬೇಕು ಎಂದು ಅಮೆರಿಕದ ಪ್ರಜೆಗಳಿಗೆ ಎಚ್ಚರಿಸಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಫೀಜ್ ಬಿಡುಗಡೆ: ಮತ್ತಷ್ಟು ದಾಳಿ?
ಸೇನಾಧಿಕಾರಿಗಳಿಗೆ ರಾಜಕೀಯಪಕ್ಷದ ಲಂಚ: ಚು.ಆ
ರಾಷ್ಟ್ರಪತಿಗಳಿಂದ ಜಂಟಿ ಸದನ ಉದ್ದೇಶಿಸಿ ಭಾಷಣ
ಸಿಖ್‌ಗುರು ಸಂತ ರಮಾನಂದರ ದೇಹ ಭಾರತಕ್ಕೆ
ಅನುರಾಧಾ ಬಾಲಿ ಜತೆ ಎಲ್ಲಾ ಸಂಬಂಧಕ್ಕೆ ಎಳ್ಳುನೀರು
ಭಾರತದ ಅಧಿಕಾರಿವರ್ಗ ಅತ್ಯಂತ ಅದಕ್ಷವಂತೆ!