ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚಿದಂಬರಂಗೆ ಹೊಸ ಫೋರ್ಡ್ ಫಿಯೆಸ್ಟಾ ಕಾರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿದಂಬರಂಗೆ ಹೊಸ ಫೋರ್ಡ್ ಫಿಯೆಸ್ಟಾ ಕಾರು
ಕೇಂದ್ರ ಸರ್ಕಾರವು ತನ್ನ ಹಿರಿಯ ಅಧಿಕಾರಿಗಳು ಮತ್ತು ಸಚಿವರಿಗೆ ಹೊಸ ಮಾದರಿಯ ಕಾರುಗಳನ್ನು ಒದಗಿಸಲು ನಿರ್ಧರಿಸಿದ್ದು, ಇದರಿಂದ ಹಳೆಯ ಬಿಳಿ ಅಂಬಾಸಿಡರ್ ಕಾರುಗಳು ತೆರೆಮರೆಗೆ ಸರಿಯಲಿವೆ.

ಗೃಹ ಸಚಿವ ಪಿ.ಚಿದಂಬರಂ ಅವರು ಹೊಸ ಫೋರ್ಡ್ ಫಿಯೆಸ್ಟಾ ಕಾರು ಪಡೆದಿದ್ದಾರೆ. ಕಳೆದ ಅವಧಿಯಲ್ಲಿ ಮಾರುತಿ ಎಸ್ಟೀಮ್ ಕಾರು ಹೊಂದಿದ್ದರು.

ಸರ್ಕಾರವು ಸುಮಾರು 15 ವಾಹನಗಳಿಗೆ ಆದೇಶ ನೀಡಿದ್ದು, ಚಿದಂಬರಂ ಅವರ ಫಿಯೆಸ್ಟಾ ಸೇರಿದಂತೆ 12 ಕಾರುಗಳ ಸರಾಬರಾಜು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಹಣಕಾಸು ಇಲಾಖೆಯ ಆಧೀನದಲ್ಲಿರುವ ಕಂದಾಯ ಇಲಾಖಾ ಅಧಿಕಾರಿಗಳಿಗಾಗಿ ಆದೇಶಿಸಲಾಗಿರುವ 14 ಫೋರ್ಡ್ ಐಕಾನ್ ಕಾರುಗಳಲ್ಲಿ, 11 ಕಾರುಗಳ ಸರಬರಾಜಾಗಿದೆ.

ವಾಣಿಜ್ಯ ಮತ್ತು ಉದ್ಯಮಗಳ ಸಚಿವಾಲಯದ ಆಧೀನದಲ್ಲಿರುವ ಕೇಂದ್ರ ಸರ್ಕಾರದ ಕೇಂದ್ರೀಯ ಖರೀದಿ ಸಂಸ್ಥೆಯಾಗಿರುವ ಪೂರೈಕೆ ಮತ್ತು ವಿಲೇವಾರಿಯ ಪ್ರಧಾನ ನಿರ್ದೇಶನಾಲಯವು ಫೋರ್ಡ್ ಫಿಯೆಸ್ಟಾ ಹಾಗೂ ಫೋರ್ಡ್ ಐಕಾನ್ ಕಾರುಗಳಿಗೆ ಅಂಗೀಕಾರ ನೀಡಿದ್ದು ಆದೇಶ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಮಿಕ್ಕಕಾರುಗಳು ಈ ತಿಂಗಳ ಅಂತ್ಯ ಹಾಗೂ ಮುಂದಿನ ತಿಂಗಳ ಆದಿಯಲ್ಲಿ ಸರಬರಾಜಲಾಗಲಿದೆ. ಫೋರ್ಡ್ ಫಿಯೆಸ್ಟಾ ಕಾರುಗಳು ಸರ್ಕಾರಕ್ಕೆ 6.29 ಲಕ್ಷ ರೂಪಾಯಿಗಳಿಗೆ ಲಭಿಸಲಿದೆ. ಈ ಕಾರಿನ ಮಾರುಕಟ್ಟೆ ದರ 6.92 ಲಕ್ಷ ರೂಪಾಯಿಗಳೆಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗುಂಡಿನ ಕಾಳಗಕ್ಕೆ ಇಬ್ಬರು ಉಗ್ರರ ಬಲಿ
ಅಂಬಾಸಿಡರ್ ಕಾರುಗಳಿಗೆ ಗುಡ್‌ಬೈ
ಅವಳಿಕೊಲೆ ಆರೋಪಿ ಪದಂಸಿನ್ನಾ ಪಾಟೀಲ್ ಎನ್‌ಸಿಪಿಯಿಂದ ಅಮಾನತ್ತು
ಯುಎಸ್ ವಿದೇಶಾಂಗ ನೀತಿಯಲ್ಲಿ ಭಾರತಕ್ಕೆ ಪ್ರಧಾನ ಆದ್ಯತೆ
ಕ್ಯಾಪಿಟೇಶನ್ ವಿವಾದ: ಚೆನ್ನೈಗೆ ತನಿಖಾ ತಂಡ
26/11: ಕಸಬ್‌ನನ್ನು ಗುರುತಿಸಿದ 10ರ ಬಾಲೆ