ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಂಬೈದಾಳಿ: ಪೊಲೀಸರು ಎಸಗಿದ ತಪ್ಪುಗಳೇನು?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈದಾಳಿ: ಪೊಲೀಸರು ಎಸಗಿದ ತಪ್ಪುಗಳೇನು?
WD
ಕಳೆದ ನವೆಂಬರ್‌ನಲ್ಲಿ ಮುಂಬೈಯಲ್ಲಿ ಉಗ್ರರ ದಾಳಿ ನಡೆದ ವೇಳೆ ಪೊಲೀಸರ ಕಾರ್ಯಾಚರಣೆ ಕುರಿತು ತನಿಖೆ ನಡೆಸಲು ಮಹಾರಾಷ್ಟ್ರ ಸರಕಾರ ನೇಮಿಸಿದ್ದ ದ್ವಿಸದಸ್ಯ ರಾಮ್‌ಪ್ರಧಾನ್ ಸಮಿತಿಯು ಸಲ್ಲಿಸಿರುವ ವರದಿಯನ್ನು ಸರ್ಕಾರ ತಿರಸ್ಕರಿಸಿದೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಈ ವರದಿಗನುಗುಣವಾಗಿ ಸರ್ಕಾರವು ಕೈಗೊಂಡಿರುವ ಕ್ರಮದ(ಆಕ್ಷನ್ ಟೇಕನ್ ರಿಪೋರ್ಟ್) ಕುರಿತ ವರದಿಯನ್ನು ಮಹಾರಾಷ್ಟ್ರ ಸರ್ಕಾರವು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿತ್ತು. ಸಮಿತಿಯ ವರದಿಯನ್ನೂ ಮಂಡಿಸಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದವು. ವರದಿಯಲ್ಲಿ ಕೆಲವು ಗುಪ್ತಮಾಹಿತಿಗಳು ಇರುವ ಕಾರಣ ಅದನ್ನು ಬಹಿರಂಗ ಪಡಿಸಲಿಲ್ಲ ಎಂಬುದಾಗಿ ಸರ್ಕಾರ ಸಮಜಾಯಿಷಿ ನೀಡಿತ್ತು.

ರಾಮ್ ಪ್ರಧಾನ್ ಸಮಿತಿ ವರದಿಯು ಮುಂಬೈ ಪೊಲೀಸರನ್ನು ದೂರುತ್ತಿಲ್ಲ. ಬದಲಿಗೆ ಮುಂಬೈ ಪೊಲೀಸರು ಭಾರೀ ಧೈರ್ಯಮತ್ತು ಸಾಹಸ ತೋರಿಸಿದ್ದಾರಾದರೂ, ದಾಳಿಯ ಅಗಾಧತೆಯಿಂದಾಗಿ ಕೆಲವು ಮಾರಕ ತಪ್ಪುಗಳನ್ನು ಎಸಗುವಂತೆ ಮಾಡಿದೆ ಎಂದು ಹೇಳಿದೆ.

ದಾಳಿಯ ವೇಳೆ ಹೇಮಂತ್ ಕರ್ಕರೆ, ಕಾಮ್ಟೆ ಹಾಗೂ ಸಾಲಸ್ಕರ್ ಅವರಿಗೆ ಕಾಮಾ ಆಸ್ಪತ್ರೆಯಲ್ಲಿ ದಾಳಿಯ ವಿಚಾರ ತಿಳಿದು ಬಂದಿದ್ದು, ಆಸ್ಪತ್ರೆಯ ಸುತ್ತ ಆಯಕಟ್ಟಿನ ಸ್ಥಳಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸುವ ಬದಲಿಗೆ ಉಗ್ರರನ್ನು ಎದುರಿಸಲು ತಾವೇ ಮುಂದಾದರು. ಇದರಿಂದಾಗಿ ಅವರೇ ಜೀವ ತೆರಬೇಕಾಯಿತು ಎಂದು ವರದಿಗಳು ಹೇಳಿವೆ. ಅವರು ತಾವು ಉಗ್ರರನ್ನು ಎದುರಿಸುತ್ತಿರುವ ಕುರಿತು ಕಂಟ್ರೋಲ್ ರೂಂಗೆ ಮಾಹಿತಿ ನೀಡಿರಲಿಲ್ಲ. ಇದರಿಂದಾಗಿ ಅವರು ಇತರ ಪಡೆಗಳಿಗಿಂದ ಪ್ರತ್ಯೇಕವಾಗಿದ್ದರು. ಪೊಲೀಸ್ ಶಿಷ್ಟಾಚಾರದ ಪ್ರಕಾರ ಒಬ್ಬ ಅಧಿಕಾರಿ ತನ್ನ ಚಲನವಲಗಳ ಕುರಿತು ಮಾಹಿತಿ ನೀಡುವುದು ಅತ್ಯಗತ್ಯ.

ದೋಷಪೂರಿತ ಶಸ್ತ್ರಸ್ತ್ರಗಳು
ರೈಲ್ವೇ ಪೊಲೀಸ್ ಪೇದೆಯೊಬ್ಬರು ತಮ್ಮ ಕಾರ್ಬೈನ್‌ನಿಂದ ಗುಂಡು ಹಾರಿಸಲು ಹೆಣಗಾಡುತ್ತಿರುವ ದೃಶ್ಯಗಳು ಚಿತ್ರಗಳಲ್ಲಿ ದಾಖಲಾಗಿವೆ. ತಮ್ಮ .303 ರೈಫಲ್‌ಗಳು ಹೇಗೆ ಜಾಮ್ ಆದವು ಮತ್ತು ಗುಂಡು ಹೇಗೆ ಗುರಿತಪ್ಪುತ್ತಿತ್ತು ಎಂಬ ಕುರಿತು ಹಲವಾರು ಪೊಲೀಸರು ದೂರಿದ್ದಾರೆ. ಕಸಬ್ ಮತ್ತು ಆತನ ಸಹಚರನ ಮೇಲೆ ಪೊಲೀಸರು ಗುಂಡು ಹಾರಿಸಲು ಯತ್ನಿಸಿದರಾದರೂ ಅವರು ವಿಫಲವಾಗಿದ್ದಾರೆ. ಗುಂಡುಗಳು ಅತ್ಯಂತ ಹಳೆಯ ಹಾಗೂ ದೋಷಪೂರಿತವಾಗಿದ್ದ ಕಾರಣ ಅವುಗಳು ಮೊದಲ ಸುತ್ತಿನ ಗುಂಡು ಹಾರಾಟದ ವೇಳೆಗೆಯೇ ಜಾಮ್ ಆಗುತ್ತಿದ್ದವು.

ಸಂಯೋಜನೆ ಕೊರತೆ
ನಗರ, ರಾಜ್ಯ ಹಾಗೂ ರಾಷ್ಟ್ರೀಯ ಭದ್ರತಾ ಏಜೆನ್ಸಿಗಳ ನಡುವೆ ಸಂಯೋಜನೆ ಸಂಪೂರ್ಣವಾಗಿ ಕುಸಿದಿತ್ತು. ಉನ್ನತ ಅಧಿಕಾಗಳು ವೈಯಕ್ತಿಕಾಗಿ ಪ್ರತಿಕ್ರಿಯಿಸಿರುವ ಕಾರಣ ಅಲ್ಲಿ ಸೂಕ್ತವಾದ ನಿಯಂತ್ರಣ ಕೇಂದ್ರ ಇರಲಿಲ್ಲ ಮತ್ತು ಗೃಹ ಇಲಾಖೆಯೂ ಪರಿಣಾಮಕಾರಿಯಾಗಿರಲಿಲ್ಲ. ಮುಂಬೈ ಪೊಲೀಸ್‌ನ ಕ್ಷಿಪ್ರ ಸ್ಪಂದನ ತಂಡವೂ ಸಹ ಇಂತಹ ಉಗ್ರದಾಳಿಗಳನ್ನು ಹೇಗೆ ನಿಭಾಯಿಸಬೇಕು ಎಂಬ ತರಬೇತಿ ಇಲ್ಲದ ಕಾರಣ ವಿಫಲವಾಗಿತ್ತು ಎಂದು ವರದಿ ಹೇಳಿದೆ.

ಶಸ್ತ್ರಾಸ್ತ್ರಗಳ ಬಳಕೆಯ ಸೂಕ್ತ ತರಬೇತು ಹೊಂದಿದವರಿಗೆ ಆಯುಧಗಳೇ ಇರಲಿಲ್ಲ. ಇದಲ್ಲದೆ ಸಿಬಂದಿಗಳಿಗೆ ಎಕೆ-47ಗಳನ್ನು ಹೇಗೆ ಬಳಸಬೇಕೆಂಬ ತರಬೇತು ನೀಡಿರಲಿಲ್ಲ, ಕಾರಣ ಮದ್ದುಗುಂಡುಗಳ ಕೊರತೆ.

ಕರಾವಳಿ ಭದ್ರತೆ ಹಾಗೂ ಗುಪ್ತಚರ ಇಲಾಖೆಯ ನ್ಯೂನತೆಯನ್ನು ವರದಿಯು ಟೀಕಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶರಣಾಗಲು ರಾಜ್‌ಠಾಕ್ರೆಗೆ ಹೈ.ಕೋ ಆದೇಶ
ಜನಾಂಗೀಯ ಕಲಹಕ್ಕೆ 12 ಬಲಿ
ಪುರಿ ಜಗನ್ನಾಥ ರಥಯಾತ್ರೆಗೆ ವಿಶೇಷ ರೈಲು
ನಾನ್ಯಾರಿಗೂ ಬಾಯ್ಮುಚ್ಚಲು ಆದೇಶಿಸಿರಲಿಲ್ಲ: ಜೋಷಿ
ಮೊದಲ ಬಾರಿಗೆ ವರುಣ್ ವಿರುದ್ಧ ಅಸಮಾಧಾನ ತೋರಿದ ಆರೆಸ್ಸೆಸ್
ಮಹಾ: ಕೋಲಾಹಲದ ನಡುವೆ ಎಟಿಆರ್ ಮಂಡನೆ