ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 10ನೇ ತರಗತಿ ಪರೀಕ್ಷೆ ಐಚ್ಛಿಕ, ದೇಶಕ್ಕೊಂದೇ ಬೋರ್ಡ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
10ನೇ ತರಗತಿ ಪರೀಕ್ಷೆ ಐಚ್ಛಿಕ, ದೇಶಕ್ಕೊಂದೇ ಬೋರ್ಡ್
ವಿದ್ಯಾರ್ಥಿಗಳು ಮತ್ತು ಪೋಷಕರ 'ಒತ್ತಡ' ತಗ್ಗಿಸುವ ಮತ್ತು ಶೈಕ್ಷಣಿಕ ದಾಖಲಾತಿ ಪ್ರಕ್ರಿಯೆ ಸರಳಗೊಳಿಸುವ ನಿಟ್ಟಿನಲ್ಲಿ, ಅಖಿಲ ಭಾರತ ಮಟ್ಟದಲ್ಲಿ ಒಂದೇ ಶೈಕ್ಷಣಿಕ ಮಂಡಳಿ ರಚಿಸುವ ಮತ್ತು 10ನೇ ತರಗತಿ ಬೋರ್ಡ್ ಪರೀಕ್ಷೆಯನ್ನು 'ಐಚ್ಛಿಕ'ವಾಗಿಸುವ ಕುರಿತು ಕೇಂದ್ರ ಸರಕಾರ ಚಿಂತಿಸುತ್ತಿದೆ.

100-ದಿನಗಳ ಯೋಜನೆಯನ್ನು ಬಿಡುಗಡೆ ಮಾಡುತ್ತಾ ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಕಪಿಲ್ ಸಿಬಲ್, ದೇಶದಲ್ಲಿರುವ ವಿಭಿನ್ನ ಶಿಕ್ಷಣ ಮಂಡಳಿಗಳ ಸ್ಥಾನದಲ್ಲಿ ಒಂದೇ ಶಿಕ್ಷಣ ಮಂಡಳಿ ಇರಲಿದ್ದು, ಕಾನೂನು ಶಿಕ್ಷಣ ಸಂಸ್ಥೆಗಳಲ್ಲಿರುವ ಸಂಯುಕ್ತ ಕಾನೂನು ಪ್ರವೇಶ ಪರೀಕ್ಷೆಗಳ ಮಾದರಿಯಲ್ಲಿ ಏಕರೂಪದ ಪರೀಕ್ಷಾ ಕ್ರಮ ಅನುಸರಿಸಲಾಗುತ್ತದೆ ಎಂದು ಹೇಳಿದರು.

'ಏಕೈಕ ಬೋರ್ಡ್ ಮೂಲಕ, ವಿದ್ಯಾರ್ಥಿಯೊಬ್ಬ ತಾನು ಯಾವ ವಿಶ್ವವಿದ್ಯಾಲಯಕ್ಕೆ ಹೋಗಬೇಕೆಂಬುದನ್ನು ನಿರ್ಧರಿಸಬಹುದು. ಇಂಥದ್ದು ಕಾನೂನು ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿದೆ. ಪೋಷಕರು, ವಿದ್ಯಾರ್ಥಿಗಳ ಒತ್ತಡ ತಗ್ಗಿಸುವುದೇ ಪ್ರಮುಖ ಗುರಿ' ಎಂದು ಸಿಬಲ್ ನುಡಿದರು.

ಬೋರ್ಡ್ ಪರೀಕ್ಷೆಗಳ ವೇಳೆ ವಿದ್ಯಾರ್ಥಿಗಳು ಮತ್ತು ಪೋಷಕರು ಒತ್ತಡದಿಂದಾಗಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಾರೆ. ಅದೇ ಶಾಲೆಯಲ್ಲಿ ಮುಂದುವರಿಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ 10ನೇ ತರಗತಿ ಪರೀಕ್ಷೆಯನ್ನು ಐಚ್ಛಿಕವಾಗಿ ಮಾಡಲು ಸರಕಾರ ಬಯಸಿದೆ ಎಂದು ಹೇಳಿದರು.

ವಿದ್ಯಾರ್ಥಿಯೊಬ್ಬ ಪದವಿಪೂರ್ವ ತರಗತಿಗೆ ಸೇರಬಯಸಿದರೆ, ಆತ 10ನೇ ತರಗತಿ ಪರೀಕ್ಷೆಗೆ ಹಾಜರಾಗಬಹುದು. ಆದರೆ ಆ ವಿದ್ಯಾರ್ಥಿ ಅದೇ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಲು ಬಯಸಿದರೆ, 11ನೇ ತರಗತಿಗೆ ಹೋಗಲು ಆತ 10ನೇ ತರಗತಿ ಪರೀಕ್ಷೆಗೆ ಹಾಜರಾಗಬೇಕಿಲ್ಲ ಎಂದು ಹೇಳಿದ ಅವರು, ಆಂತರಿಕವಾಗಿ ಸಾಮರ್ಥ್ಯ ಮೌಲ್ಯಮಾಪನ ಮಾಡಬಹುದಾಗಿದೆ ಎಂದರು.

ಯಶಪಾಲ್ ಸಮಿತಿ ಮತ್ತು ರಾಷ್ಟ್ರೀಯ ಜ್ಞಾನ ಆಯೋಗದ ಶಿಫಾರಸುಗಳ ಆಧಾರದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಧ್ಯಯನಕ್ಕೆ ಸರಕಾರವು ಸ್ವಾಯತ್ತ ಮೇಲ್ವಿಚಾರಣಾ ಪ್ರಾಧಿಕಾರವನ್ನು ನೇಮಿಸಲು ಕೂಡ ಸರಕಾರ ಯೋಜಿಸಿದೆ ಎಂದೂ ಸಿಬಲ್ ನುಡಿದರು.

ಕೆಲವು ಬಾರಿ ಆತ್ಮಹತ್ಯೆ ದಾರಿ ಹಿಡಿಯುವ ವಿದ್ಯಾರ್ಥಿಗಳ ಒತ್ತಡವನ್ನು ತಗ್ಗಿಸಲು ಮಾರ್ಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವ ಅಗತ್ಯವನ್ನು ಅವರು ಸೂಚಿಸಿದರು. ಅಂಕಗಳನ್ನು ನೀಡುವ ಪ್ರಸಕ್ತ ಅಸೆಸ್‌ಮೆಂಟ್ ವ್ಯವಸ್ಥೆಯನ್ನು ಬದಲಿಸಿ ಗ್ರೇಡಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಅವರು ಹೇಳಿದರು.

ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಮಕ್ಕಳ ಹಕ್ಕನ್ನು ಜಾರಿಗೆ ತರುವ ಮಸೂದೆ ಮಂಡಿಸುವುದಾಗಿಯ‌ೂ, 6ರಿಂದ 14ರ ವಯೋಮಿತಿಯ ಪ್ರತಿ ಮಕ್ಕಳಿಗೆ ಶಿಕ್ಷಣದ ಮ‌ೂಲಭೂತ ಹಕ್ಕನ್ನು ಮಸೂದೆಯಲ್ಲಿ ಕೋರಿದೆಯೆಂದು ಸಚಿವರು ಹೇಳಿದ್ದಾರೆ.

ಅಖಿಲ ಭಾರತ ಮದ್ರಸಾ ಮಂಡಳಿ ಸ್ಥಾಪನೆಗೆ ಕೂಡ ಸರ್ಕಾರ ಬಯಸಿದ್ದು, ಅವು ಸಿಬಿಎಸ್‌ಸಿ ಮತ್ತಿತರ ಮಂಡಳಿಗೆ ಸಮಾನವಾದ ಡಿಗ್ರಿಗಳನ್ನು ನೀಡುತ್ತದೆಂದು ಅವರು ಹೇಳಿದರು. ಧಾರ್ಮಿಕ ಬೋಧನೆಗಳಿಗೆ ಅಡ್ಡಿಯಾಗದಂತೆ ಜಾತ್ಯತೀತ ಮತ್ತು ತಾಂತ್ರಿಕ ಶಿಕ್ಷಣ ನೀಡಲು ಮಂಡಳಿ ನೀತಿ ರೂಪಿಸುತ್ತದೆಂದು ಅವರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅತ್ಯಾಚಾರ ಪ್ರಕರಣ-ಇಲಾಖೆ ಮೇಲೆ ಗೂಬೆ ಕೂರಿಸಬೇಡಿ: ದೀಕ್ಷಿತ್
ಬಸ್ ಪ್ರಪಾತಕ್ಕೆ: 25 ಸಾವು
ಜಮ್ಮು: ಅಮರನಾಥ ಯಾತ್ರೆ ಅಮಾನತು
ಹರ್ಯಾಣದಲ್ಲಿ ವಿಶ್ವದ 2ನೇ ತದ್ರೂಪಿ ಎಮ್ಮೆ 'ಗರಿಮಾ'
ಮಾನವ ಹಕ್ಕು ಆಯೋಗದಿಂದ ಮಾನವ ಹಕ್ಕು ಉಲ್ಲಂಘನೆ!
ಅಕ್ರಮ ಭೂಮಿ ಖರೀದಿ: 'ಐಶ್' ವಿರುದ್ಧ ದೂರು