ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನೂತನ ಜಿಲ್ಲೆಯಾಗಿ ಯಾದಗಿರಿ: ಸಿಎಂ ಘೋಷಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೂತನ ಜಿಲ್ಲೆಯಾಗಿ ಯಾದಗಿರಿ: ಸಿಎಂ ಘೋಷಣೆ
ಇಲ್ಲಿ ಶುಕ್ರವಾರ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಯಾದಗಿರಿಯನ್ನು 30ನೆಯ ನೂತನ ಜಿಲ್ಲೆಯನ್ನಾಗಿ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.

ನಗರದಲ್ಲಿ ಶುಕ್ರವಾರ ನಡೆದ ಐತಿಹಾಸಿಕ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾದಗಿರಿ ಜಿಲ್ಲಾ ರಚನೆಗೆ ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕಾಗಿ 50 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಹೊಸ ಜಿಲ್ಲೆಯ ರಚನೆಗೆ ಸಂಬಂಧಿಸಿದಂತೆ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗುವುದು. ಅಂತೆಯೇ ಈ ಕ್ರಮಕ್ಕೆ ಶೀಘ್ರವೇ 10ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಡಾ. ನಂಜುಂಡಪ್ಪ ವರದಿ ಜಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ನಿಯೋಗವೊಂದು ತೆರಳಿದ್ದು, ಈ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದರು.

ಅಲ್ಲದೆ, ಬಿಜಾಪುರ ಅಭಿವೃದ್ಧಿಗೆ 78 ಕೋಟಿ ರೂ. ಬಿಡುಗಡೆ ಹಾಗೂ ಬಿಜಾಪುರದಲ್ಲಿ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಉಳಿದಂತೆ ಬಳ್ಳಾರಿ ಹಾಗೂ ಬಿಜಾಪುರದಲ್ಲಿ ಔಷಧಿ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ, ಗುಲ್ಬರ್ಗಾದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ, ಗುಲ್ಬರ್ಗಾ ಜಿಲ್ಲಾಸ್ಪತ್ರೆಗೆ 39 ಕೋಟಿ ರೂ. ಬಿಡುಗಡೆ, ತಾಯಿ ಭಾಗ್ಯ ಯೋಜನೆಗೆ 30 ಕೋಟಿ ರೂ. ಬಿಡುಗಡೆಗೊಳಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಮತ್ತಷ್ಟು
ಧಾರವಾಡದಲ್ಲಿ ಸಜೀವ ಬಾಂಬ್ ಪತ್ತೆ
ಗುಲ್ಬರ್ಗಾದಲ್ಲಿ ಸಚಿವ ಸಂಪುಟ ಸಭೆ ಆರಂಭ
ಪಕ್ಷವನ್ನು ಬಲಪಡಿಸಿ ತೋರಿಸುವೆ:ದೇಶಪಾಂಡೆ
ಕೆಪಿಸಿಸಿ ಅಧ್ಯಕ್ಷಗಾದಿ ಆಕಾಂಕ್ಷಿಯಲ್ಲ:ಸಿದ್ದರಾಮಯ್ಯ
ಕೆಪಿಸಿಸಿಗೆ ಆರ್.ವಿ.ದೇಶಪಾಂಡೆ ಸಾರಥ್ಯ
ದಸರಾ ಪ್ರಚಾರ ಉಪಸಮಿತಿಗೆ ಸಿಎಂ ಚಾಲನೆ