| ಹೊಗೇನಕಲ್: ಪ್ರಧಾನಿ ಬಳಿಗೆ ನಿಯೋಗ | | | ಹಾಸನ, ಗುರುವಾರ, 9 ಜುಲೈ 2009( 12:51 IST ) | | | |
| | |
| ಎರಡೂ ರಾಜ್ಯಗಳು ಸೇರಿ ಜಂಟಿ ಸರ್ವೆ ನಡೆಸುವವರೆಗೂ ಹೊಗೇನಕಲ್ ಯೋಜನೆ ಕೈಗೆತ್ತಿಕೊಳ್ಳದಂತೆ ಆಗ್ರಹಿಸಲು ಪ್ರಧಾನಿ ಬಳಿಗೆ ನಿಯೋಗವೊಂದನ್ನು ಕರೆದೊಯ್ಯಲಾಗುವುದು ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಗೇನಕಲ್ ಯೋಜನೆಯನ್ನು ತಮಿಳುನಾಡು ಕೈಗೆತ್ತಿಕೊಳ್ಳದಂತೆ ಆಗ್ರಹಿಸಲು ಮುಖ್ಯಮಂತ್ರಿ ನೇತೃತ್ವದ ನಿಯೋಗ ಶೀಘ್ರವೇ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಲಿದೆ ಎಂದು ತಿಳಿಸಿದ್ದಾರೆ.ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಬೇಕು. ಈ ಮೂಲಕ ರಾಜ್ಯದ ಜನರಲ್ಲಿ ಉಂಟಾಗಿರುವ ಆತಂಕ ನಿವಾರಿಸಬೇಕು ಎಂದು ಅವರು ತಿಳಿಸಿದ್ದಾರೆ.ತಮಿಳುನಾಡಿನ ಕೆಲ ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಹೊಗೇನಕಲ್ ಯೋಜನೆಗೆ ಜಪಾನ್‌ನಿಂದ ಸಾಲ ಪಡೆದು ಅನುಮೋದನೆ ನೀಡಿದೆ. ಯೋಜನೆ ಕಾರ್ಯಗತಗೊಳಿಸುವ ಕುರಿತು ಕರ್ನಾಟಕ ಸರ್ಕಾರ ಹತ್ತಾರು ಆಕ್ಷೆಪ ವ್ಯಕ್ತಪಡಿಸಿದ್ದು, ಎರಡೂ ರಾಜ್ಯಗಳು ಸೇರಿ ಜಂಟಿ ಸರ್ವೆ ನಡೆಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ. |
| |
| | |
| | | |
|
| | |
|
|
| | |
|
|
| |
|  | |