ನನಗೆ ಮಸಾಲೆ ಟೀ ಅಂದ್ರೆ ತುಂಬಾ ಇಷ್ಟ-ವಿದ್ಯಾಬಾಲನ್
ಮುಂಬೈ, ಗುರುವಾರ, 16 ಆಗಸ್ಟ್ 2007( 16:36 IST )
ಬಾಲಿವುಡ್ ಚಿತ್ರರಂಗದಲ್ಲಿ ತನ್ನ ಅದ್ಭುತ ಅಭಿನಯದಿಂದ ಪ್ರೇಕ್ಷಕರ ಮನಸೂರೆಗೊಂಡ ವಿದ್ಯಾ ಬಾಲನ್‌ಗೆ ಮಸಾಲೆ ಟೀ ಅಂದ್ರೆ ತುಂಬಾ ಇಷ್ಟವಂತೆ.
ನನಗೆ ಶೂಟಿಂಗ್ ಬಗ್ಗೆ ಹೆಚ್ಚಿನ ಒತ್ತಡವಿದ್ದರು, ನಾನು ಮಸಾಲೆ ಟೀ ಕುಡಿಯುವುದನ್ನು ಮಾತ್ರ ಮರೆಯುವದಿಲ್ಲ ಎಂದು ಹೇಳಿದ್ದಾರೆ.
ನಾನು ಉಟಕ್ಕೆ ಆಲೂ ಪರಾಠೆ, ಗೋಬಿ ಪರಾಠೆ ಅನ್ನ ಮತ್ತು ಬೇಳೆ ಸಾರು ಇಷ್ಟವಾಗುತ್ತದೆ.ಹಾಗೇ ನನಗೆ ಥಾಯಿ ಫುಡ್ ತುಂಬಾ ಇಷ್ಟ. ಅನ್ನ ಮತ್ತು ಗ್ರೀನ್ ಕರ್ರಿ ಕೇಕ್‌ಗಳು ನನ್ನ ಮನಸ್ಸನ್ನು ಉಲ್ಲಸಿತಗೊಳಿಸುತ್ತವೆ.
ನನಗೆ ನನ್ನ ತಾಯಿ ಮಾಡಿದ ಅಡುಗೆ ತುಂಬಾ ಇಷ್ಟವಾಗುತ್ತದೆ. ನಿಮಗೆ...? ಪ್ರವಾಸದಲ್ಲಿದ್ದಾಗ ನನ್ನ ಜತೆ ಮಸಾಲೆ ಟೀ ಸಾಚೆಟ್‌ಗಳನ್ನು ಇಟ್ಟುಕೊಂಡಿರುತ್ತೆನೆ. ನನಗೆ ಮಸಾಲೆ ಟೀ ಕುಡಿದರೆ ತುಂಬಾ ಸಂತೋಷವಾಗುತ್ತದೆ.