ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಕಿರುತೆರೆ » ಕನ್ನಡ ಚಾನಲ್ಲಿಗೂ ಬಂತು ಸ್ವಯಂವರ, ರಕ್ಷಿತಾ ಪೌರೋಹಿತ್ಯ! (Suvarna TV | Swayamvara | Rakshitha)
ಕಿರುತೆರೆ
Bookmark and Share Feedback Print
 
Rakshitha
MOKSHA
ಹಿಂದಿ ಟಿವಿ ಚಾನಲ್‌ಗಳಲ್ಲಿ ಕ್ರಾಂತಿಯನ್ನೇ ಮೂಡಿಸಿರುವ ಕಾರ್ಯಕ್ರಮ ಸ್ವಯಂವರ. ಇದೀಗ ಅಲ್ಲಿನ ಜನಪ್ರಿಯತೆ ಆದರಿಸಿ ತಾವೂ ಏಕೆ ಈ ಸಾಹಸಕ್ಕೆ ಮುಂದಾಗಬಾರದು ಎಂದು ನಿರ್ಧರಿಸಿ ಕನ್ನಡ ಟಿವಿ ವಾಹಿನಿಯೊಂದು ಸ್ವಯಂವರ ಸಾಹಸಕ್ಕೆ ಮುಂದಾಗಿದೆ. ಆದರೆ ಹಿಂದಿ ಚಾನಲ್‌ಗಳಲ್ಲಿ ಬಂದ ಸ್ವಯಂವರಕ್ಕೂ ಈ ಸ್ವಯಂವರಕ್ಕೂ ಕೊಂಚ ವ್ಯತ್ಯಾಸವಿದೆ.

ಏ.12ರಿಂದ ಸುವರ್ಣ ವಾಹಿನಿಯಲ್ಲಿ ಆರಂಭವಾಗುವ ಸ್ವಯಂವರಕ್ಕೆ ನಟಿ ರಕ್ಷಿತಾ ಅವರ ಪೌರೋಹಿತ್ಯ ಲಭಿಸಲಿದೆ. ಮದುವೆ ಎನ್ನುವುದು ಬದುಕಿನ ಮಹತ್ವದ ಘಟ್ಟ, ಪುಣ್ಯದ ಕೆಲಸ. ಸ್ವಯಂವರದಲ್ಲಿ ರಾಜಕುಮಾರಿಗಾಗಿ ಸವಾಲು ಎದುರಿಸಿ, ವರಿಸಲಾಗುತ್ತದೆ. ಅದೇ ರೀತಿ ಕಾರ್ಯಕ್ರಮದಲ್ಲಿ ಇಷ್ಟವಾದ ಹುಡುಗನನ್ನು ಹುಡುಗಿ ಆಯ್ಕೆ ಮಾಡಲಿದ್ದಾಳೆ. ವಾರದ ಐದು ದಿನ, ರಾತ್ರಿ 8ರಿಂದ 9ರವರೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಪ್ರತಿ ಸಂಚಿಕೆಯಲ್ಲಿ ಐದು ಹುಡುಗರಲ್ಲಿ ಒಬ್ಬನ 'ಸತ್ವಪರೀಕ್ಷೆ' ನಡೆಯುತ್ತದೆ. ಹುಡುಗಿ ಐವರಲ್ಲಿ ಒಬ್ಬನನ್ನು ಆರಿಸಬಹುದು. ಹುಡುಗಿ ಇಷ್ಟವಿಲ್ಲ ಎಂದರೆ ಹುಡುಗ ಮುಕ್ತವಾಗಿ ಹೇಳಬಹುದು! ಇದು ಕಾರ್ಯಕ್ರಮದ ಕುರಿತಾದ ಬ್ರೀಫ್ ಇಂಟ್ರೊಡಕ್ಷನ್.

ಕಾರ್ಯಕ್ರಮದ ಬಗ್ಗೆ ನಟಿ ರಕ್ಷಿತಾ ಹೇಳೋದಿಷ್ಟು, ಮದುವೆ ಎನ್ನುವುದು ಭಾವನಾತ್ಮಕ ಸಂಬಂಧ. ಅದು ಜನ್ಮಜನ್ಮದ ಅನುಬಂಧ. ಇಂಥ ಜೋಡಿಗಳನ್ನು ಒಂದು ಮಾಡುವುದು ಸೌಭಾಗ್ಯವೇ ಸರಿ. ಹಾಗಾಗಿ ಇದನ್ನು ಒಪ್ಪಿದ್ದೇನೆ ಎನ್ನುತ್ತಾರೆ. ಒಟ್ಟಾರೆ, ಕನ್ನಡದ ವಾತಾವರಣಕ್ಕೆ ಈ ಸ್ವಯಂವರ ಹೇಗೆ ಹೊಂದಿಕೊಳ್ಳುತ್ತೆ, ಯಶಸ್ವಿಯಾಗುತ್ತೆ ಅನ್ನೋದನ್ನು ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಏಷ್ಯಾನೆಟ್ ಸುವರ್ಣ ಟಿವಿ, ಸ್ವಯಂವರ, ರಕ್ಷಿತಾ