ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಮ್‌ಕಹಾನಿ ನಿರೀಕ್ಷೆ ಠುಸ್ಸಾ? (Chandru | Premkahani | Tajmahal | Ajay)
ಸುದ್ದಿ/ಗಾಸಿಪ್
Feedback Print Bookmark and Share
 
PR
ತಾಜಮಹಲ್ ಚಿತ್ರದ ಮೂಲಕ ಯಶಸ್ವಿ ನಿರ್ದೇಶಕರೆನಿಸಿದ ಆರ್.ಚಂದ್ರು ಎರಡನೇ ಚಿತ್ರ ಪ್ರೇಮ್‌ಕಹಾನಿ ಚಿತ್ರದ ಬಗ್ಗೆ ಇಟ್ಟುಕೊಂಡಿರುವ ಭಾರೀ ನಿರೀಕ್ಷೆ ಉಲ್ಟಾ ಹೊಡೆಯಲಿದೆಯೇ ಎಂಬ ಸಂದೇಹ ಈಗ ಗಾಂಧಿನಗರಕ್ಕೆ ಕಾಣುತ್ತಿದೆ.

ಅಷ್ಟೇ, ಅಲ್ಲ. ಹಾಗೆ ಕೆಲವರು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ ಕೂಡಾ. ಯಾಕೆಂದರೆ, ಈಗಾಗಲೇ ಕೆಲವು ವಿಶ್ಲೇಷಕರಿಗೆ ಚಿತ್ರ ತೋರಿಸಿರುವ ಚಂದ್ರು ಅವರ ಅಭಿಪ್ರಾಯದಿಂದ ಚಿಂತಾಕ್ರಾಂತರಾಗಿದ್ದಾರಂತೆ. ಮೊದಲರ್ಧ ತಲೆ ಚಚ್ಚಿಕೊಳ್ಳವಷ್ಟು ಪೇಲವವಾಗಿರುವುದರಿಂದ ಪ್ರೇಕ್ಷಕ, ನಂತರದ ಅದ್ಬುತವಾಗಿರುವ ದ್ವಿತೀಯಾರ್ಧಕ್ಕೆ ಕಾಯೋ ತಾಳ್ಮೆ ಹೊಂದಿದ್ದಾನಾ ಎನ್ನುವ ಪ್ರಶ್ನೆ ಮೂಡಿದೆ.

ಹಾಡುಗಳು ಹೇಳಿಕೊಳ್ಳುವಷ್ಟು ಮಾಧುರ್ಯಭರಿತವಾಗೇನೂ ಇಲ್ಲ. ಅಲ್ಲದೆ, ಯಾವ ಹಾಡುಗಳಲ್ಲೂ ಪ್ರೇಕ್ಷಕನನ್ನು ಕಟ್ಟಿಡುವ ಸಾಮರ್ಥ್ಯವಿಲ್ಲ ಎನ್ನಲಾಗುತ್ತಿದೆ. ಇಳಯರಾಜರಂಥ ಅಪ್ರತಿಮ ಸಂಗೀತ ನಿರ್ದೇಶಕರಿದ್ದರೂ ಪರಿಸ್ಥಿತಿ ಹೀಗೇಕೆ ಆಯ್ತು ಎನ್ನುತ್ತಿದ್ದಾರಂತೆ ವಿಶ್ಲೇಷಕರು.

ಆದರೆ, ಚಂದ್ರು ಮಾತ್ರ ಇನ್ನೊಂದೆಡೆ ರಾಜ್‌ಗೆ ಯಾವುದಾದ್ರೂ ಚಿತ್ರ ಪೈಪೋಟಿ ಕೊಡಲಿದೆ ಎನ್ನುವುದಾದ್ರೆ ಅದು ಪ್ರೇಮ್‌ಕಹಾನಿ ಎನ್ನುತ್ತಿದ್ದಾರಂತೆ. ಎಲ್ಲ ಪುಕಾರುಗಳಿಗೂ ಬಿಡುಗಡೆಯ ನಂತರವಷ್ಟೇ ಪ್ರೇಕ್ಷಕರು ಉತ್ತರ ನೀಡಲಿದ್ದಾರೆ. ಅಲ್ಲಿವರೆಗೂ ಕಾಯಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಂದ್ರು, ತಾಜ್ಮಹಲ್, ಪ್ರೇಮ್ಕಹಾನಿ, ಅಜಯ್