ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದ ಸಂಜನಾ (Ganda Hendathi | Sanjana | E Sanje | Shloka)
ಸುದ್ದಿ/ಗಾಸಿಪ್
Feedback Print Bookmark and Share
 
Sanjana
MOKSHA
ಗಂಡಹೆಂಡತಿಯಲ್ಲಿ ಬಿಂದಾಸ್ ಆಗಿ ನಟಿಸಿದ ಸಂಜನಾ ಈಗ ಮತ್ತೆ ಮಾಡೆಲಿಂಗ್ ಕಡೆ ಹೊರಳಿದ್ದಾರೆ. ಮೊನ್ನೆ ಮೊನ್ನೆ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದ ಸಂಜನಾ ಈಗ ಸರ್ಜಾಪುರದಲ್ಲಿ ನಡೆದ ಫ್ಯಾಶನ್ ಶೋವೊಂದರಲ್ಲಿ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಫ್ಯಾಶನ್ ಶೋ ಸಖತ್ ಖುಷಿ ಕೊಟ್ಟಿದೆ ಎನ್ನುತ್ತಾರೆ ಸಂಜನಾ.

ಸಿನಿಮಾದಲ್ಲಿ ನಟಿಸುವ ಅನುಭವವೆ ಬೇರೆ. ಫ್ಯಾಶನ್ ಶೋ ಅನುಭವವೇ ಬೇರೆ ಎಂದು ವಾದಿಸುತ್ತಾರೆ ಈ ಮಾದಕ ಕಂಗಳ ಬೆಡಗಿ. ರ‌್ಯಾಂಪ್ ಮೇಲೆ ನಡೆಯುವಾಗ 10-20 ಮಾಡೆಲ್‌ಗಳು ಇರುತ್ತಾರೆ. ಎಲ್ಲರಿಗಿಂತ ಚೆನ್ನಾಗಿ ನಡೆಯಬೇಕು. ಅಷ್ಟೇ ಅಲ್ಲ ಅಂದವಾಗಿ ಕಾಣಿಸಬೇಕು. ಸಿನಿಮಾದಲ್ಲಾದರೆ ಯಾವುದೇ ಸ್ಪರ್ಧಿಗಳು ಇರುವುದಿಲ್ಲ ಎನ್ನುತ್ತಾರೆ ಸಂಜನಾ.

ಅಂದಹಾಗೆ, ಸಂಜನಾರ ಎರಡು ಚಿತ್ರಗಳು ಈಗ ಬಿಡುಗಡೆಗೆ ರೆಡಿಯಾಗಿವೆ. ಈ ಸಂಜೆ ಹಾಗೂ ಶ್ಲೋಕ ಚಿತ್ರಗಳು ಸದ್ಯದಲ್ಲೇ ತೆರೆ ಮೇಲೆ ಮೂಡಿ ಬರಲಿವೆ. ಸದ್ಯಕ್ಕೆ ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ. ಹೀಗಾಗಿ ಈಗ ಬಿಡುವಾಗಿದ್ದೇನೆ ಎನುತ್ತಿರುವ ಸಂಜನಾ ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳು ಯಶಸ್ವಿಯಾಗುವ ನಿರೀಕ್ಷೆ ಹೊತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಂಡಹೆಂಡತಿ, ಸಂಜನಾ, ಈ ಸಂಜೆ, ಶ್ಲೋಕ, ಫ್ಯಾಷನ್ ಶೋ