ನನ್ನುಸಿರೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಚುರುಕು ಕಂಗಳ ಚೆಲುವೆ ಕೀರ್ತಿ. ಆ ಬಳಿಕ ಮತ್ತೆ ಹಿಂದಿರುಗಿ ನೊಡಿಲ್ಲ. ಒಂದರ ಬಳಿಕ ಮತ್ತೊಂದರಲ್ಲಿ ನಟಿಸಿದ ಕೀರ್ತಿಗೆ ಸಿನಿಮಾರಂಗದಲ್ಲಿ ಬ್ರೇಕ್ ಸಿಕ್ಕುವ ದಿನ ಹತ್ತಿರದಲ್ಲೇ ಇದೆ ಎನ್ನುವ ವಿಶ್ವಾಸವಿದೆ.
ಇತ್ತೀಚೆಗೆ ಜಸ್ಟ್ ಮಾತ್ ಮಾತಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕೀರ್ತಿ ಜಸ್ಟ್ ಸಿಕ್ಕಾಗ ಮಾತಿಗಿಳಿದರು. ನಾನು ಹತ್ತನೇ ತರಗತಿಯಲ್ಲಿದ್ದಾಗ ಸುದೀಪ್ ಅಭಿನಯದ ರಂಗ ಎಸ್ಸೆಸ್ಸಲ್ಸಿ ನೋಡಿದ್ದೆ. ಇದೀಗ ಅವರೊಂದಿಗೆ ನಟಿಸುವುದನ್ನು ನೆನೆದಾಗ ಖುಷಿಯಾಗುತ್ತದೆ ಎನ್ನುತ್ತಾರೆ ಕೀರ್ತಿ.
ಈಕೆ ಮೂಲತಃ ಮಾಡೆಲಿಂಗ್ ಕ್ಷೇತ್ರದಿಂದ ಬಂದವರು. ಸಾಕಷ್ಟು ರ‌್ಯಾಂಪ್ ಷೋಗಳಲ್ಲಿ ತನ್ನ ಒನಪು ತೋರುವ ಮೂಲಕ ಕನ್ನಡ ಚಿತ್ರಗಳಲ್ಲಿ ಅವಕಾಶ ಪಡೆದುಕೊಂಡ ಕೀರ್ತಿಗೆ ಅಭಿನಯ ಕಷ್ಟವೆನಿಸಿಲ್ಲವಂತೆ. ಆದರೆ ಜಸ್ಟ್ ಮಾತ್ ಮಾತಲ್ಲಿ ಚಿತ್ರದಲ್ಲಿ ನಟಿಸಿದ ಬಳಿಕ ಕಲಿಯುವುದು ತುಂಬಾ ಇದೆಯೆಂದು ಅನಿಸಿತಂತೆ. ನಟನೆಗಾಗಿ ನಾಗಾಭರಣ ಬಳಿ ಕಲಿಯಲು ನಿರ್ಧರಿಸಿದ್ದಾರೆ. ಜಾಲಿಡೇಸ್‌ನಲ್ಲಿ ನಟಿಸಿದರೂ ಬಹುತಾರಾಗಣದ ಮಧ್ಯೆ ಕೀರ್ತಿಯನ್ನು ಯಾರೂ ಗುರುತಿಸಿಕೊಳ್ಳಲಿಲ್ಲ. ಬಳಿಕ ಪ್ರೀತಿ ನೀ ಶಾಶ್ವತಾನಾ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿತು. ಸದ್ಯಕ್ಕೆ ಕೀರ್ತಿ ಜಸ್ಟ್ ಮಾತಾಡ್ತಾ ಇದ್ದಾರೆ!