ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಗನ ಮಮತೆಗಾಗಿ ಚಿತ್ರ ನಿರ್ಮಾಣ (Rohith | Supreetha | Ellellu Neene Nannallu Neene)
ಸುದ್ದಿ/ಗಾಸಿಪ್
Feedback Print Bookmark and Share
 
Ellellu Neene Nannallu Neene
MOKSHA
ಇತ್ತೀಚೆಗಷ್ಟೇ ತಮ್ಮ ಅಳಿಯನಿಗಾಗಿ ಚಿತ್ರ ನಿರ್ಮಿಸಿದ ಅರ್ಜುನ್ ಸರ್ಜಾ ವಿಷಯ ಕೇಳಿದ್ದೀರಿ. ಇದೀಗ ಅದೇ ಸಾಲಿಗೆ ಸೇರುತ್ತಿದ್ದಾರೆ ಫ್ರಾಂಕ್ ಫರ್ನಾಂಡಿಸ್.

ತಮ್ಮ ಮಗನಿಗಾಗಿ ಒಂದು ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ. ಅದನ್ನು ತಮ್ಮ ಹುಟ್ಟುಹಬ್ಬದ ದಿನದಂದು ಮಗನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಚಿತ್ರದ ಹೆಸರು ಎಲ್ಲೆಲ್ಲೂ ನೀನೆ, ನನ್ನಲ್ಲೂ ನೀನೆ. ಈಗಾಗಲೇ ಮೂರು ಪ್ರಾದೇಶಿಕ ಭಾಷೆಗಳಲ್ಲಿ ಚಿತ್ರ ಮಾಡಿರುವ ರಿಚರ್ಡ್ ಕ್ಯಾಸ್ಟಲಿನೋ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಅವರ ಮೊದಲ ಕನ್ನಡ ಚಿತ್ರ.

ಈ ಪ್ರೀತಿ ಅಮರ. ಇದರಲ್ಲಿ ಯಾವುದೇ ಆಶ್ಲೀಲತೆಗಳಿಲ್ಲದೆ, ಕೊಂಚ ಡಿಫರೆಂಟ್ ಆಗಿರುತ್ತದೆ ಎನ್ನುತ್ತಾರೆ ನಿರ್ದೇಶಕರು. ತಮ್ಮ ಮಗ ರೋಹಿತ್‌ ಮೇಲಿನ ಮಮತೆಯಿಂದ ಈ ಚಿತ್ರ ನಿರ್ಮಿಸುತ್ತಿದ್ದಾರೆ ಫರ್ನಾಂಡಿಸ್. ನಾಯಕಿಯಾಗಿ ಸುಪ್ರಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನು ಸಿಂಗಾಪುರ, ಮಡಿಕೇರಿ, ಉಡುಪಿ ಮುಂತಾದ ಕಡೆಗಳಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದಾರೆ ನಿರ್ದೇಶಕರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೋಹಿತ್, ಸುಪ್ರೀತಾ, ರಿಚರ್ಡ್ ಕ್ಯಾಸ್ಟಲಿನೋ, ಫ್ರಾಂಕ್ ಫೆರ್ನಾಂಡಿಸ್