ನಂದೀಶನಾಗಲಿರುವ ಕೋಮಲ್
![](/img/cm/searchGlass_small.png)
ಚಮ್ಕಾಯ್ಸಿ ಚಿಂದಿ ಉಡಾಯಿಸುವುದಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದ ನಟ ಕೋಮಲ್ ಬಾವ ಶ್ರೀನಿವಾಸ್, ಈಗ ನಂದೀಶನನ್ನು ತೆರೆಗೆ ತರಲು ಯೋಜಿಸುತ್ತಿದ್ದಾರೆ.ಹಳೆಯ ತಮಿಳು ಚಿತ್ರವೊಂದರಿಂದ ಕೋಮಲ್ ಈ ಕಥೆಗೆ ಸ್ಪೂರ್ತಿ ಪಡೆದಿದ್ದಾರಂತೆ. ಚಿತ್ರದ ಮೊದಲರ್ಧ ಕಾಮಿಡಿಯದರೆ ದ್ವಿತೀಯಾರ್ಧಕ್ಕೆ ಸ್ವಲ್ಪ ಸೆಂಟಿಮೆಂಟ್ ಟಚ್ ಕೊಡಬೇಕೆಂಬುದು ಕೋಮಲ್ ಆಸೆ. ಇದಕ್ಕಾಗಿಯೇ ಈಗಾಗಲೇ ಕೆಲ ಬರಹಗಾರರನ್ನು ಕೂರಿಸಿಕೊಂಡು ಚಿತ್ರಕಥೆಯ ಕೆಲಸ ಪ್ರಾರಂಭಿಸಿದ್ದಾರೆ. ಚಿತ್ರದ ನಿರ್ದೇಶಕರ್ಯಾರು ಎಂಬುದು ಇನ್ನು ನಿಗದಿಯಾಗಿಲ್ಲ. ಆದರೆ ಚಿತ್ರವನ್ನು ಶ್ರೀನಿವಾಸ್ ನಿರ್ಮಿಸಲಿದ್ದಾರೆ. ಸಧ್ಯಕ್ಕೆ ಕೋಮಲ್ ಅಭಿನಯದ ಮತ್ತೆ ಮಸ್ತ್ ಮಜಾ ಮಾಡಿ ಹಾಗೂ ಅಪ್ಪು ಪಪ್ಪು ಚಿತ್ರಗಳು ಮುಂದಕ್ಕೆ ಹೋಗಿದ್ದರಿಂದ ಈ ಬಿಡುವಿನಲ್ಲಿ ನಂದೀಶನನ್ನು ಕೈಗೆತ್ತಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ 18ರಂದು ಮುಹೂರ್ತ ನಡೆಯಲಿದೆ. ಇನ್ನೊಂದು ವಿಷಯ ಏನಂದ್ರೆ, ನಂದೀಶನೆಂಬ ಈ ಹೆಸರು ಕೊನೇ ಕ್ಷಣದಲ್ಲಿ ಬದಲಾದರೂ ಆಗಬಹುದಂತೆ.