ಬಾಲಿವುಡ್‌ನ ವಿವೇಕ್ ಒಬೇರಾಯ್ ಕನ್ನಡಕ್ಕೆ ಬರುತ್ತಿದ್ದಾರೆ. ಕನ್ನಡದಲ್ಲಿ ಕಶ್ಯಪ್ ನಿರ್ದೇಶನದ ಸಿಹಿಮುತ್ತು ಚಿತ್ರದಲ್ಲಿ ನಟಿಸಲಿದ್ದಾರೆ ಐಶ್ವರ್ಯ ರೈ ಮಾಜಿ ಪ್ರಿಯಕರ ವಿವೇಕ್ ಒಬೆರಾಯ್.
ಒಂದು ವರ್ಷದ ಹಿಂದೆ ಪ್ರಾರಂಭವಾದ ಸಿಹಿಮುತ್ತು ಚಿತ್ರದಲ್ಲಿ ಒಬ್ಬಳು ನಾಯಕಿಗೆ ಐವರು ನಾಯಕರಿರುತ್ತಾರೆ. ಈ ಮೊದಲೇ ಧ್ಯಾನ್, ಪ್ರೇಮ್ ಹಾಗೂ ಕೋಮಲ್ ಆಯ್ಕೆಯಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಆ ಬಳಿಕ ಇಬ್ಬರು ನಾಯಕರಲ್ಲಿ ಒಬ್ಬರು ಕನ್ನಡದ ಸೂಪರ್ ಸ್ಟಾರ್ ಆದರೆ ಇನ್ನೊಬ್ಬರು ಬಾಲಿವುಡ್ ಸ್ಟಾರ್ ಬರಲಿದ್ದಾರೆ ಎಂಬ ಸೂಚನೆ ನೀಡಿದ್ದರು ನಿರ್ದೇಶಕರು. ಇದೀಗ ಸ್ಟಾರ್‌ಗಳ ಹೆಸರು ಹೊರಬಿದ್ದಿದೆ.
MOKSHA
ಅಮೀರ್‌ಖಾನ್, ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್ ಮೊದಲಾದವರನ್ನೆಲ್ಲಾ ಕೇಳಿ ಸುಸ್ತಾಗಿದ್ದೇನೆ ಎಂದು ಹೇಳಿಕೊಳ್ಳುವ ನಿರ್ದೇಶಕರು ಕೊನೆಗೆ ವಿವೇಕ್ ಮನೆ ಬಾಗಿಲಿಗೆ ಬಂದಿದ್ದಾರೆ. ವಿವೇಕ್ ಕನ್ನಡದಲ್ಲಿ ನಟಿಸುವುದಕ್ಕೆ ಆಸಕ್ತಿ ತೋರಿಸಿದ್ದಾರೆ. ಇನ್ನು ಕನ್ನಡದ ಸೂಪರ್‌ಸ್ಟಾರ್ ಆಗಿ ದರ್ಶನ್ ಹೊರಹೊಮ್ಮಿದ್ದಾರೆ. ಆರೇಳು ದಿನಗಳ ಶೂಟಿಂಗ್‌ನಲ್ಲಿ ಭಾಗವಹಿಸುವುದಕ್ಕೆ ಒಪ್ಪಿಗೆ ಸೂಚಿಸಿದ್ದಲ್ಲದೆ, ಅದಕ್ಕಾಗಿ ಭಾರಿ ಮೊತ್ತದ ಸಂಭಾವನೆಯನ್ನು ಪಡೆಯಲಿದ್ದಾರಂತೆ. ಚಿತ್ರದ ಈ ಐದು ನಾಯಕರಿಗೆ ಡಿಂಪಲ್ ಚೋಪ್ಡಾ ನಾಯಕಿ. ಚಿತ್ರದ ಒಂದು ಹಾಡಿಗಾಗಿ 40 ಲಕ್ಷ ವೆಚ್ಚವಾಗಲಿದೆಯಂತೆ. ಇದರಲ್ಲಿ ಐನೂರು ಜನ ಭಾಗವಹಿಸಲಿದ್ದಾರಂತೆ. ಅಂತೂ ಸಿಹಿಮುತ್ತು ತುಂಬಾ ದುಬಾರಿಯಾಗುವ ಲಕ್ಷಣಗಳು ಕಂಡು ಬರುತ್ತಿದೆ.