ಪೂಜಾ ಗಾಂಧಿ ಕನ್ನಡದಲ್ಲಿ ಮುಂಗಾರು ಮಳೆ ಸುರಿಸಿದ ಮೇಲೆ ಕನ್ನಡದ ಹುಡುಗಿಯೇ ಆದಳು. ಎಷ್ಟೋ ಕನ್ನಡಿಗ ನಟಿಯರೇ ಕನ್ನಡ ಮಾತಾಡಲು ತೊದಲುತ್ತಿರುವಾಗ, ಬಂಗಾಳಿ ಚೆಲುವೆಯಾದರೂ ಪೂಜಾ ಕನ್ನಡ ಮಾತನಾಡಲು ಕಲಿತು, ಮಾತನಾಡಿ ಕನ್ನಡಿಗರ ಮೆಚ್ಚುಗೆ ಪಡೆದಳು. ಇಂತಿಪ್ಪ ಪೂಜಾ ಮೊನ್ನೆ ಖಾಸಗಿ ಎಫ್‌ಎಂ ಚಾನಲ್ ಒಂದರಲ್ಲಿ ಕನ್ನಡದ ಬಗ್ಗೆ ತನಗೆ ಗೊತ್ತಿದ್ದದ್ದನ್ನು ಮನಬಿಚ್ಚಿ ಮಾತಾಡಿದಳು. ಕನ್ನಡದಲ್ಲಿ ತನ್ನ ಇಷ್ಟದ ಹಾಡುಗಳ ಬಗ್ಗೆ, ಸಿನಿಮಾ ಬಗ್ಗೆ ಅನಿಸಿಕೆ ಹಂಚಿಕೊಂಡಳು. ಅಲ್ಲಿ ಹಂಚಿಕೊಂಡ ಕೆಲವು ವಿಷಯಗಳು ಇಲ್ಲಿ...
ಕನ್ನಡ ಚಿತ್ರರಂಗದಲ್ಲಿ ಪೂಜಾಳ ಮರೆಯದ ಘಳಿಗೆ..? ಮುಂಗಾರು ಮಳೆ ಚಿತ್ರದ ನಂತರ ನನಗೆ ಸಿಕ್ಕಿದ ಅಭೂತಪೂರ್ವ ಪ್ರತಿಕ್ರಿಯೆ ನ್ನ ಜೀವನದಲ್ಲಿ ಮರೆಯಲಾರೆ. ಅದೇ ವರ್ಷ ಕೃಷ್ಣ ಚಿತ್ರಕ್ಕಾಗಿ ಎರಡು ಪ್ರಶಸ್ತಿಗಳು ಸಿಕ್ಕಿದ್ದ ಇನ್ನೂ ಖುಷಿಯ ಸಂಗತಿ.
ಕನ್ನಡದಲ್ಲಿ ನಿಮ್ಮದೇ ಅಭಿನಯದ ಅತ್ಯಂತ ಇಷ್ಟವಾದ ಸಿನಿಮಾ..? ಅನು. ಅನು ಚಿತ್ರದಲ್ಲಿ ನನ್ನ ಅಭಿನಯದ ಬಗ್ಗೆ ನನಗೆ ತೃಪ್ತಿ ಸಿಕ್ಕಿತ್ತು. ವಿಮರ್ಶೆಯಲ್ಲೂ ನನ್ನ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿತ್ತು.
WD
ನಿಮ್ಮ ಮೆಚ್ಚುಗೆಯ ಕನ್ನಡದ ಜೋಡಿ..? ಪುನೀತ್ ರಾಜ್ ಕುಮಾರ್. ನಾನು ಮಿಲನದಲ್ಲಿ ಪುನೀತ್ ಜೊತೆಗೆ ಅತಿಥಿ ಪಾತ್ರದಲ್ಲಿ ನಟಿಸಿದ್ದಾದರೂ, ನಾವಿಬ್ಬರೂ ತೆರೆಯಲ್ಲಿ ಸೊಗಸಾಗಿ ಕಾಣುತ್ತೇವೆ. ನಮ್ಮ ನಡುವೆ ಉತ್ತಮ ಅಂಡರ್‌ಸ್ಟಾಂಡಿಂಗ್ ಇದೆ.
90ರ ದಶಕದಲ್ಲಿ ಕನ್ನಡ ಚಿತ್ರರಂಗದ ನಿಮ್ಮ ಫೇವರಿಟ್ ನಟ..? ಉಪೇಂದ್ರ. ಉಪೇಂದ್ರ ಅವರ ಚಿತ್ರಗಳು ಕಮರ್ಶಿಯಲ್, ಅವರ ಡೈಲಾಗ್ ಡೆಲಿವರಿ ಸ್ಟೈಲ್ ಅದ್ಭುತ ಹಾಗೂ ನನಗೆ ತುಂಬಾ ಇಷ್ಟ. ಕೆಲವೊಮ್ಮೆ ತುಂಬಾ ತಮಾಷೆಯಾಗೂ ಇರುತ್ತೆ.
ನಿಮ್ಮ ಫೇವರಿಟ್ ಕನ್ನಡ ಹಾಡು..? ಗೋಕುಲ ಚಿತ್ರದ ಆರಾಮಾಗಿದೆ ನಾನು... ಹಾಡು.
ಯಾವುದಾದರೂ ಹಳೆ ಕನ್ನಡ ಹಾಡುಗಳನ್ನು ಕೇಳಿದ್ದೀರಾ? ಅದರಲ್ಲಿ ಯಾವುದಾದರೂ ಇಷ್ಟಪಟ್ಟ ಗೀತೆ ಇದೆಯಾ? ತುಂಬಾ ಕೇಳಿದ್ದೇನೆ. ಗೀತಾ ಚಿತ್ರದ ಜೊತೆಯಲಿ ಜೊತೆಜೊತೆಯಲಿ... ಹಾಡು ನನಗೆ ತುಂಬಾ ಇಷ್ಟ. ಎಫ್ ಎಂ ಚಾನಲ್‌ಗಳಲ್ಲಿ ಹಾಕುವ ಹಳೆಯ ಕನ್ನಡ ಹಾಡುಗಳನ್ನು ಕೇಳುತ್ತೇನೆ.