ಬುದ್ದಿವಂತ ಚಿತ್ರದಲ್ಲಿ ಉಪ್ಪಿಯೊಂದಿಗೆ ಐವರು ನಾಯಕಿಯರಲ್ಲಿ ಒಬ್ಬರಾಗಿ ನಟಿಸಿದ್ದ ಮುಂಬೈಯ ಮಸ್ತ್ ಹುಡುಗಿ ಸಲೋನಿ ಮಿಸ್ಟರ್ ತೀರ್ಥ ಚಿತ್ರದಲ್ಲಿ ನಾಯಕಿಯಾಗಿ ಮತ್ತೊಮ್ಮೆ ಕನ್ನಡದಲ್ಲಿ ನಟಿಸುತ್ತಿದ್ದಾರೆ.
ಈ ಹಿಂದೆ ಉಪೇಂದ್ರ ಅವರ ಜೊತೆ ದುಬೈ ಬಾಬು ಚಿತ್ರದಲ್ಲಿ ಅವರು ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಪ್ರಪ್ರಥಮ ಬಾರಿಗೆ ಸುದೀಪ್ ಜೊತೆ ಮಿಸ್ಟರ್ ತೀರ್ಥ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದ್ದಾರೆ.
ಪ್ರಸ್ತುತ ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಆದರೆ ನನಗೆ ನಾಯಕಿ ಪಟ್ಟ ಕೊಟ್ಟದ್ದು ಕನ್ನಡ ಚಿತ್ರರಂಗ. ಇನ್ನು ಮುಂದೆ ಕನ್ನಡದಿಂದ ಆಫರ್ ಬಂದರೆ ತಿರಸ್ಕರಿಸುವುದಿಲ್ಲ ಎಂದು ಸಲೋನಿ ಕನ್ನಡ ಚಿತ್ರರಂಗವನ್ನು ಕೊಂಡಾಡಿದರು.
ಮೂರು ಭಾಷೆಗಳಲ್ಲಿ ನಟಿಸುತ್ತಿರುವ ಸಲೋನಿ ಸಮಯವನ್ನು ಮ್ಯಾನೇಜ್ ಮಾಡಲು ಸಿಕ್ಕಾಪಟ್ಟೆ ಸರ್ಕಸ್ ಮಾಡುತ್ತಾರಂತೆ. ಕೆಲವೊಮ್ಮೆ ನಿರ್ದೇಶಕರನ್ನು ಗೋಗೆರೆಯುವ ಸಂದರ್ಭಗಳು ಸಹ ಬರುತ್ತವಂತೆ. ಸಲೋನಿಗೆ ಬೆಂಗಳೂರು ಮತ್ತು ಮೈಸೂರಿನ ಹವಾಮಾನ ಹೆಚ್ಚು ಒಗ್ಗುತ್ತದೆಯಂತೆ.