ದುಡ್ಡಿರುವವರು ವಿದೇಶಕ್ಕೆ ಹಾರಿ ಹಾಡಿನ ಚಿತ್ರೀಕರಣ ಮಾಡುತ್ತಾರೆ. ದುಡ್ಡೇ ದೊಡ್ಡಪ್ಪ ಎಂದು ಅರಿತವರು ಅಕ್ಕ ಪಕ್ಕದ ರಾಜ್ಯಗಳಿಗೆ ತೆರಳಿ ಚಿತ್ರೀಕರಣ ಮಾಡುತ್ತಾರೆ. ಇದೇ ನಿಯಮವನ್ನು ಸಂಚಾರಿ ಚಿತ್ರತಂಡವೂ ಪಾಲಿಸಿದೆ. ನೆರೆಯ ಹೈದ್ರಾಬಾದಿನ ಗೋಲ್ಕಂಡ ಪೋರ್ಟನಲ್ಲಿ ಹಾಡೊಂದರ ಚಿತ್ರೀಕರಣ ಮುಗಿಸಿದ್ದಾರೆ.
ಈಗಿನ ನಾಯಕರು ಒಂದೆರಡು ಚಿತ್ರಗಳು ಅರ್ಧಶತಕ ಬಾರಿಸುವ ಮೊದಲೇ ಮನಸ್ಸಿಗೆ ಬಂದಷ್ಟು ಸಂಭಾವನೆ ಕೇಳುತ್ತಾರೆ. ಅವರ ಬದಲಿಗೆ ಹೊಸಬರಿಗೆ ಕಡಿಮೆ ದುಡ್ಡು ಕೊಟ್ಟು ಚಿತ್ರ ಪ್ರಾರಂಭಿಸಬಹುದು ಎನ್ನುತ್ತಾರೆ ಸಂಚಾರಿ ನಿರ್ದೇಶಕ ಕಿರಣ್ ಗೋವಿ.
ಕೆಲವು ಹೀರೊಗಳ ಬೆನ್ನು ಹತ್ತಿ ಅವರ ಸಂಭಾವನೆ ಸರಿಬರದೆ ಅಚಾನಕ್ ಆಗಿ ನಾಯಕನನ್ನಾಗಿ ಆರಿಸಿದ್ದು ರಾಜ್ ಅವರನ್ನು. ಸಂಚಾರಿಗೆ ಜೊತೆಗಾತಿಯಾಗಿ ಬಿಯಾಂಕ ದೇಸಾಯಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಬಿಯಾಂಕ ನೀರಿನ ಭಯ ಬಿಟ್ಟು ಈಜು ಕಲಿತುಕೊಂಡಿದ್ದಾರಂತೆ. ಕಿರಣ್ ಅವರ ಪಯಣ ಚಿತ್ರದಂತೆ ಸಂಚಾರಿಯೂ ಸಹ ಯಶಸ್ವಿಯಾಗಲೆಂದು ಆಶಿಸೋಣವೇ.