ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಪ್ಪನ ಪಾತ್ರದಲ್ಲಿ ಜಗ್ಗೇಶ್ ಮಗ! (Jaggesh | Life Story | Gururaj | Navarasa Nayaka | Kannada Film)
ಸುದ್ದಿ/ಗಾಸಿಪ್
Bookmark and Share Feedback Print
 
ಅಪ್ಪನಂತೆ ಮಗ ಅನ್ನುವ ಮಾತಿದೆ. ಅದು ಈಗ ಸಾಬೀತಾಗುತ್ತಿದೆ. ನವರಸ ನಾಯಕ ಜಗ್ಗೇಶ್ ಜೀವನ ಆಧರಿತ ಚಿತ್ರವೊಂದು ಸಿದ್ಧವಾಗುತ್ತಿದ್ದು, ಅದಕ್ಕೆ ನಾಯಕನಾಗಿ ಜಗ್ಗೇಶ್ ಪುತ್ರ ಗುರುರಾಜ್ ನಟಿಸುತ್ತಿದ್ದಾರೆ.

ಅಪ್ಪನ ಜೀವನ ಮಾರ್ಗವನ್ನು ವಿವರಿಸುವ ಚಿತ್ರಕ್ಕೆ ಅಪ್ಪನ ರಿಯಲ್ ಜೀವನಕ್ಕೆ ರೀಲ್‌ನಲ್ಲಿ ನಾಯಕರಾಗಿ ಗುರುರಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ನಿಜಕ್ಕೂ ವಿಸ್ಮಯ ಅಂದರೆ ಇದೇ ಅನ್ನುತ್ತಿದೆ ಗಾಂಧಿನಗರ. ಈ ಚಿತ್ರದ ಮೂಲಕ ಜಗ್ಗೇಶ್ ಇನ್ನೊಂದು ಆಸೆ ಈಡೇರಿಸಿಕೊಳ್ಳುತ್ತಿದ್ದಾರೆ. ಇವರೀಗ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.

ಸದ್ಯ ಗುರುರಾಜ್ ಚಿತ್ರವೊಂದರಲ್ಲಿ ಬ್ಯುಸಿ ಆಗಿದ್ದಾರೆ. ಒಂದು ಚಿತ್ರ ಮಾಡಿ ವಿಫಲರಾಗಿರುವ ಇವರು ಎರಡನೇ ಚಿತ್ರದ ಮೂಲಕ ಮಿಂಚಲು ಮುಂದಾಗಿದ್ದಾರೆ. ಇದೀಗ ಮಗನ ಕೆರಿಯರ್ ಬೆಳಗಿಸಲು ಜಗ್ಗೇಶ್ ಖುದ್ದು ಮುಂದಾಗಿರುವುದು ವಿಶೇಷ. ಸದ್ಯ ಸಂಕ್ರಾಂತಿ ಚಿತ್ರವನ್ನು ಮುಸ್ಸಂಜೆ ಮಹೇಶ್ ಮಾಡುತ್ತಿದ್ದು, ಇದರಲ್ಲಿ ಗುರು ಬ್ಯುಸಿ ಆಗಿದ್ದಾರೆ. ಇದರ ಕೆಲಸ ಮುಗಿಯುತ್ತಿದ್ದಂತೆ ಜಗ್ಗೇಶ್ ಚಿತ್ರ ಸೆಟ್ಟೇರಲಿದೆ.

ಚಿತ್ರವನ್ನು ಜಗ್ಗೇಶ್ ನಿರ್ದೇಶಿಸುವ ಬಗ್ಗೆ ಇದುವರೆಗೂ ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ. ಆದರೆ ಸದ್ಯಕ್ಕೆ ಸಿಕ್ಕಿರುವ ಊಹೆ ಬಲ್ಲ ಮೂಲಗಳಿಂದ ಬಂದಿದ್ದು. ತಮ್ಮ ಜೀವನದ ಕತೆಯನ್ನು ಇದುವರೆಗೂ ತಾವೇ ನಿರ್ಧರಿಸಿ ಮುಂದುವರಿಸಿಕೊಂಡು ಬಂದಿರುವಾಗ, ರಿಯಲ್‌ನಲ್ಲಿಯೇ ಯಶಸ್ವಿಯಾಗಿದ್ದೇನೆ. ಇನ್ನು ರೀಲ್‌ನಲ್ಲಿ ಏಕೆ ನಾನೇ ಕೈ ನೋಡಬಾರದು ಅಂತ ಜಗ್ಗೇಶ್ ಅಂದುಕೊಂಡಿದ್ದರೆ ಅದರಲ್ಲಿ ಅತಿಶಯೋಕ್ತಿ ಇಲ್ಲ. ಹೇಗಿದೆ ನೋಡಿ ಅಪ್ಪ ಮಕ್ಕಳ ಕಸರತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಗ್ಗೇಶ್, ಜೀವನ ಕಥೆ, ಗುರುರಾಜ್, ನವರಸ ನಾಯಕ, ಕನ್ನಡ ಸಿನಿಮಾ