ಇಷ್ಟು ವರ್ಷ ನಿಮಗೆ ಗೊತ್ತಿಲ್ಲದ ಸತ್ಯವೊಂದು ಇದೆ. ಹೌದು, ಕೇವಲ ಇಬ್ಬರು ಅಣ್ಣಂದಿರನ್ನು ಮಾತ್ರ ಪುನೀತ್ ರಾಜ್‌ಕುಮಾರ್ ಹೊಂದಿದ್ದಾರೆ ಅಂತ ಅಂದುಕೊಂಡಿದ್ದಿರಿ. ಇದೀಗ ಅವರಿಗೊಬ್ಬ ತಂಗಿಯೂ ಇದ್ದಾಳಂತೆ?!
ಗಾಂಧಿನಗರದಲ್ಲಿ ರೂಮರ್‌ಗಳನ್ನು ಹೆಚ್ಚು ದೊಡ್ಡದಾಗಿ ಹೇಳುವುದೂ ಕಷ್ಟವೆ. ಹೆಚ್ಚು ಕುತೂಹಲ ಬೇಡ. ಇದು ನಿಜ ಜೀವನದಲ್ಲಿ ಅಲ್ಲ. ರೀಲ್ ಲೈಫ್‌ನಲ್ಲಿ ಕೇಳಿ ಬರುತ್ತಿರುವ ಮಾತು.
ಹೌದು ತಮಿಳಿನ ನಾಡೋಡಿಗಳ್ ಚಿತ್ರ ಇದೀಗ ಕನ್ನಡದಲ್ಲಿ ರಿಮೇಕ್ ಆಗುತ್ತಿದೆ. ಇಲ್ಲಿ ಇವರಿಗೆ ತಂಗಿಯಾಗಿ ನಟಿಸುತ್ತಿರುವ ಅಭಿನಯಗೆ ಮಾತು ಬರಲ್ಲ. ಕಿವಿ ಕೂಡಾ ಕೇಳಲ್ಲಾ. ಹೇಗಿದೆ ನೋಡಿ ವಿಪರ್ಯಾಸ. ಈಕೆ ಈಗಾಗಲೇ ಮೂಲ ತಮಿಳಿನ ನಾಡೋಡಿಗಳ್‌ನಲ್ಲಿ ನಟಿಸಿ ಅಪಾರ ಮೆಚ್ಚುಗೆ ಗಳಿಸಿದ್ದಾರೆ ಅನ್ನುವುದು ಇನ್ನೊಂದು ವಿಶೇಷ.
ತಮಿಳು ಚಿತ್ರರಂಗದ ಜನಪ್ರಿಯ ಪೋಷಕ ನಟ ಆನಂದ ವರ್ಮರ ಮಗಳು ಈಕೆ. ತಮಿಳಿನ ನಾಡೋಡಿಗಳ್‌ನಲ್ಲಿ ನಾಯಕ ಶಶಿಕುಮಾರ್‌ಗೆ ತಂಗಿಯಾಗಿ ನಟಿಸಿದ್ದರು. ಇದೀಗ ಕನ್ನಡಕ್ಕೆ ಡಬ್ ಆಗುತ್ತಿರುವ ಚಿತ್ರದಲ್ಲಿ ಉಳಿದ ಪಾತ್ರ ಬದಲಾದರೂ, ಈ ಪಾತ್ರ ಮಾತ್ರ ಹಾಗೆಯೇ ಉಳಿದಿದೆ.
ಈಗಾಗಲೇ ಈಕೆ ರೆಡ್ಡಿ ಲ್ಯಾಬ್ಸ್, ಜಿಎಂಆರ್, ಓಹ್ರಿ ಉತ್ಪನ್ನಗಳ ರೂಪದರ್ಶಿಯಾಗಿ ಎಲ್ಲರ ಗಮನ ಸೆಳೆದಿದ್ದಾಳೆ. ಮೂರನೇ ವಯಸ್ಸಿನಲ್ಲೇ ಜಾಹೀರಾತು ಪ್ರಪಂಚಕ್ಕೆ ಕಾಲಿರಿಸಿದ ಈಕೆ, ಇಂದು ಉತ್ತಮ ಹೆಸರು ಸಂಪಾದಿಸಿದ್ದಾಳೆ. ಮಾತು ಬಾರದಿದ್ದರೂ, ಉತ್ತಮ ನೃತ್ಯಪಟುವಾಗಿ ತಮ್ಮ ನ್ಯೂನತೆಯನ್ನು ಮರೆತಿದ್ದಾರೆ. ಪೋಷಕರ ಬೆಂಬಲದಿಂದ ಈ ಎತ್ತರಕ್ಕೆ ಬೆಳೆದು ನಿಂತಿದ್ದಾಳೆ. ಇದೀಗ ಕನ್ನಡದ ರಸಿಕರ ಮನದಣಿಸಲು ಬರುತ್ತಿರುವುದು ನಿಜಕ್ಕೂ ಮೆಚ್ಚುಗೆಯ ವಿಷಯ.