ಬಾಲಿವುಡ್‌ನಲ್ಲಿ ಕರಾವಳಿ ಕನ್ನಡದವರು ಸ್ಥಳವೂರಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ವಿಶ್ವವಿಖ್ಯಾತ ಬೆಡಗಿ ಬಾಲಿವುಡ್ ನಂ.1 ತಾರೆ ಐಶ್ವರ್ಯ ರೈ ದಕ್ಷಿಣ ಕನ್ನಡದವರು. ಅದೇ ಸಾಲಿನಲ್ಲಿ ಮತ್ತೊಬ್ಬ ನಟಿ ಶಿಲ್ಪಾ ಶೆಟ್ಟಿ ಹಾಗೂ ನಟ ಸುನೀಲ್ ಶೆಟ್ಟಿ ಸಹ ಇಲ್ಲಿಯವರೆ. ಅದೇ ರೀತಿ ತಾಂತ್ರಿಕ ವರ್ಗದಲ್ಲೂ ಹಲವರಿದ್ದಾರೆ.
ಇತ್ತೀಚಿ ಬೆಳವಣಿಗೆ ಪ್ರಕಾರ ತಾಂತ್ರಿಕ ವರ್ಗದ ಸಾಲಿನಲ್ಲಿ ಮಂಗಳೂರು ಬಳಿಯ ಕಾಪುವಿನ ಶೆಟ್ಟಿ ಬ್ರದರ್ಸ್ ಅವರದ್ದೇ ಪಾರುಪತ್ಯ.
ಕಲ್ಯಾಮೂಡು ಮನೆಯ ಪ್ರದೀಪ್ ಜೆ. ಶೆಟ್ಟಿ, ಪ್ರಕಾಶ್ ಜೆ. ಶೆಟ್ಟಿ ಹಾಗೂ ಪ್ರಶಾಂತ್ ಜೆ. ಶೆಟ್ಟಿ, ಮುಂಬೈನಲ್ಲಿ ಶ್ರೀ ಗಣೇಶ್ ಮೂವಿ ಲೈಟ್ಸ್ ಎಂಬ ಸಂಸ್ಥೆಯ ಮಾಲಿಕರು. ಬಾಲಿವುಡ್‌ನ ಖ್ಯಾತ ಸಂಜಯ್ ಲೀಲಾ ಬನ್ಸಾಲಿ ಅವರ ಅಚ್ಚುಮೆಚ್ಚಿನ ಸಹೋದರರು ಎಂದರೆ ತಪ್ಪಾಗಲಾರದು. ಸಂಜಯ್ ಅವರ ಚಿತ್ರಗಳಿಗೆ ಇವರದ್ದೇ ಲೈಟ್ಸ್. ಈ ಸಹೋದರರು ನೀಡಿದ ಸೂಚನೆಗಳನ್ನು ಲೀಲಾ ಬನ್ಸಾಲಿ ಚಿತ್ರಗಳಲ್ಲಿ ಚಾಚೂತಪ್ಪದೆ ಪಾಲಿಸಿದ್ದಾರೆ. ಒಂದು ರೀತಿಯಲ್ಲಿ ಬಾಲಿವುಡ್‌ಗೆ ಬೆಳಕು ನೀಡುತ್ತಿರುವವರೇ ಈ ಶೆಟ್ಟಿ ಬ್ರದರ್ಸ್.
IFM
ಇಷ್ಟೇ ಅಲ್ಲ ಹಾಲಿವುಡ್ ಖ್ಯಾತ ಸಿನಿಮಾಟೋಗ್ರಾಫರ್ ಸ್ಟೀವನ್ ಬ್ಯಾಸ್ಟಿನ್ ಹೊಸ ಚಿತ್ರವನ್ನು ಒಪ್ಪಿಕೊಂಡ ತಕ್ಷಣ ಮುಂಬಯಿಗೆ ಹಾರಿಬಂದು ಈ ಶೆಟ್ಟಿ ಬ್ರದರ್ಸ್ ರಿಂದ ಬೆಳಕಿನ ತಂತ್ರಜ್ಞಾನದ ಬಗ್ಗೆ ಸಲಹೆ ಕೇಳುತ್ತಾರಂತೆ.
ಶಾರೂಕ್ ರೆಡ್ ಚಿಲ್ಲೀಸ್ ಬ್ಯಾನರ್, ಕರಣ್ ಜೋಹರ್ ಧರ್ಮ ಪ್ರೋಡಕ್ಷನ್ಸ್, ಯಶ್‌ರಾಜ್ ಸೇರಿದಂತೆ ಬಹುತೇಕ ಬಾಲಿವುಡ್ ಮಂದಿ ಲೈಟ್ಸ್ ವಿಚಾರದಲ್ಲಿ ಸಂಪರ್ಕಿಸುವುದೇ ಇವರನ್ನು. ಮಂಗಳೂರಿನಲ್ಲಿ ಪದವಿ ಮುಗಿಸಿಕೊಂಡು ಕೆಲಸ ಹುಡುಕಿಕೊಂಡು ಹೋದ ಪ್ರದೀಪ್‌ಗೆ ಆಸರೆಯಾಗಿದ್ದ ಅವರ ಮಾವ ಮೋಹನ್ ಶೆಟ್ಟಿ. ಅವರು ಪ್ರದೀಪ್‌ನನ್ನು ಲೈಟ್‌ಮ್ಯಾನ್ ಕೆಲಸಕ್ಕೆ ಇಟ್ಟುಕೊಂಡರು. ಅಲ್ಲಿಂದ ಪ್ರಾರಂಭವಾದ ಸಿನಿಮಾ ಕ್ಷೇತ್ರದ ಪಯಣ ಅವರ ಸಹೋದರರು ಅವರನ್ನು ಕೂಡಿಕೊಂಡು ಈ ಮಟ್ಟಕ್ಕೇರಿರುವುದು ಕನ್ನಡಿಗರಿಗೆ ಹೆಮ್ಮೆ ತರುವಂತ ಸಂಗತಿ ಎನ್ನಬಹುದು.