ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » `ಹುಡುಗ ಹುಡುಗಿ' ಚಿತ್ರದ ಪ್ರಚಾರಕ್ಕಾಗಿ ಬ್ಯಾಡ್ಮಿಂಟನ್ ಸ್ಪರ್ಧೆ! (Kannada cinema | indrajit lankesh | Sandalwood)
ಸುದ್ದಿ/ಗಾಸಿಪ್
Bookmark and Share Feedback Print
 
NRB
ಕನ್ನಡ ಚಿತ್ರರಂಗದಲ್ಲಿ ತನ್ನದೆ ಆಧ ಛಾಪು ಮೂಡಿಸಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ಸದಾ ಏನಾದರೊಂದು ವಿಶೇಷ ಇರಲೇಬೇಕೆಂದು ಬಯಸುವವರು. ಅಂತೆಯೇ ಅವರ ಮುಂಬರುವ ಚಿತ್ರ `ಹುಡುಗ ಹುಡುಗಿ' ಚಿತ್ರದ ಪ್ರಚಾರ ಹೆಚ್ಚಿಸಲು ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ಬುಧವಾರ ಏರ್ಪಡಿಸಿದ್ದಾರೆ.

ಇದು ಮಿಕ್ಸಡ್ ಡಬಲ್ಸ್ ಸ್ಪರ್ಧೆಯಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ನಟ ಧ್ಯಾನ್ ಮತ್ತು ನಟಿ ಲೇಖಾ ಜೊತೆ ವಾಷಿಂಗ್ಟನ್‌ಗೆ ಹೋಗುವ ಅವಕಾಶ ಕಲ್ಪಿಸಿದ್ದಾರೆ. ಅಲ್ಲದೆ, ಇಲ್ಲೊಂದು ಟ್ವಿಸ್ಟ್ ಸಹ ಇದೆ. ಧ್ಯಾನ್ ಹಾಗೂ ಲೇಖಾ ಅವರೊಂದಿಗೆ ಬ್ಯಾಡ್ಮಿಂಟನ್ ಆಡುವ ಅವಕಾಶವನ್ನೂ ನೀಡಿದ್ದಾರೆ.

ಈ ಕಾರ್ಯಕ್ರಮಕ್ಕೆ ಹೆಸರಾಂತ ಬಾಲಿವುಡ್ ನಟಿ ಕನ್ನಡತಿ ದೀಪಿಕಾ ಪಡುಕೋಣೆಯನ್ನು ಕರೆಸಲು ಪ್ರಯತ್ನಿಸುತ್ತಿದ್ದಾರೆ. ಆಕೆಯ ಪ್ರಪ್ರಥಮ ಸಿನಿಮಾ ಎಂಟ್ರಿ `ಐಶ್ವರ್ಯ' ಚಿತ್ರದಿಂದ ಮಾಡಿಸಿದ್ದೇ ಈ ಇಂದ್ರಜಿತ್ ಎಂಬುದನ್ನು ನೆನಪಿಸಿಕೊಳ್ಳಬೇಕು. ಆದರೆ, ಆಕೆಯನ್ನು ಕರೆಸಿದರೆ ಮತ್ತಷ್ಟು ಖರ್ಚು ಎಂಬುದನ್ನು ಯೋಚಿಸುತ್ತಿದ್ದಾರೆ. ಆದ್ದರಿಂದ ಮುಖ್ಯ ಅತಿಥಿಯ ಆಯ್ಕೆಗೆ ಇನ್ನೂ ಸರಿಯಾಗಿ ತೆರೆಬಿದ್ದಿಲ್ಲ ಎನ್ನಬಹುದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ಸಿನೆಮಾ, ಇಂದ್ರಜಿತ್ ಲಂಕೇಶ್, ಸ್ಯಾಂಡಲ್ವುಡ್