ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪರ್ಯಾಯ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಥಾಪನೆ? (Kannada cinema | Film chamber | Sandalwood)
ಸುದ್ದಿ/ಗಾಸಿಪ್
Bookmark and Share Feedback Print
 
ದೀಪಾವಳಿಯ ಮೂರು ದಿನಗಳಲ್ಲಿ ತಣ್ಣಗಾಗಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ಹೊರರಾಜ್ಯದ ಚಿತ್ರಗಳು ಸೃಷ್ಟಿಸಿರುವ ಸಮಸ್ಯೆ ಬಗ್ಗೆ ಸಂಘದ ಅಧ್ಯಕ್ಷ ಬಸಂತ್‌ಕುಮಾರ್ ಪಾಟೀಲ್ ಅವರು ಡಿ.1 ರಂದು ರಾಜ್ಯಾದ್ಯಂತ ಚಿತ್ರೋದ್ಯಮ ಬಂದ್ ಎಂದು ಘೋಷಿಸಿದ್ದರಿಂದ ಅವರ ಅಧ್ಯಕ್ಷಗಾದಿಗೆ ಕುತ್ತು ಬಂದಿತ್ತು. ರಾಜೀನಾಮೆ ನೀಡುವಂತೆ ಸಂಘ ಸದಸ್ಯರು ಹಾಗೂ ಪದಾಧಿಕಾರಿಗಳು ಒತ್ತಾಯ ಮಾಡಿದ್ದರು.

ಈ ಸಮಸ್ಯೆ ಸೊನೆ ಮಳೆಯಲ್ಲಿ ನೆಂದು ಪಟಾಕಿಯಂತೆ ಟುಸ್ ಎಂದುಕೊಂಡಿರುವಾಗಲೇ, ದೀಪಾವಳಿ ಮುಗಿದ ನಂತರ ಮತ್ತೊಂದು ಸಮಸ್ಯೆಯನ್ನು ಬಸಂತ್ ಎತ್ತಿದ್ದಾರೆ. ನಗರದ ಮಲ್ಟಿಪ್ಲೆಕ್ಸ್ ಹಾಗೂ ಸಿನಿಮಾ ಮಂದಿರಗಳ ಎಂಟ್ರಿ ಟಿಕೆಟ್ ದರ ನೆರೆ ರಾಜ್ಯ ಹಾಗೂ ಇತರ ರಾಜ್ಯಗಳಿಗೆ ಹೋಲಿಸದರೆ ಅತಿ ಹೆಚ್ಚು ಎಂದಿದ್ದಾರೆ.

ನೆರೆಯ ತಮಿಳುನಾಡಿನಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಟಿಕೆಟ್ ದರ ಕೇವಲ 120 ರೂ., ಆದರೆ, ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರ 500 ರೂ. ಇತ್ತೀಚೆಗೆ ಬಿಡುಗಡೆಯಾದ ರಜನಿಕಾಂತ್ ಅವರ `ಎಂದಿರನ್' ಚಿತ್ರದ ಟಿಕೆಟ್ ಬೆಲೆ 2,500 ರೂ.ಗಳಿಗೆ ಏರಿಕೆ ಕಂಡಿದ್ದನ್ನು ಬಸಂತ್‌ಕುಮಾರ್ ಪಾಟೀಲ್ ಖಂಡಿಸಿದ್ದಾರೆ. ಈ ಬಗ್ಗೆ ತೆರಿಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದನ್ನೂ ಸಹ ಹೇಳಿದ್ದಾರೆ.

ನಗರದ ಬಹಳ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ನಮ್ಮ ನಿರ್ಮಾಪಕರ ಒಡೆತನದಲ್ಲಿವೆ ಎಂದು ಹೇಳಿದ್ದಾರೆ. ಇದರಿಂದ ಮತ್ತೊಂದು ಸಮಸ್ಯೆಗೆ ಕಾರಣವಾಗಿದೆ.

ಪರ್ಯಾಯ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಥಾಪನೆ:

ಅಧ್ಯಕ್ಷ ಬಸಂತ್‌ಕುಮಾರ್ ಪಾಟೀಲ್ ಅವರ ವಿರುದ್ಧ ತಿರುಗಿಬಿದ್ದ ನಿರ್ಮಾಪಕರು, ವಿತರಕರು ಹಾಗೂ ಪದಾಧಿಕಾರಿಗಳು ಸೇರಿಕೊಂಡು ಪ್ರತ್ಯೇಕ ಪರ್ಯಾಯ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಥಾಪನೆಯೊಂದನ್ನು ಮಾಡಲು ಹೊರಟಿದ್ದಾರೆ ಎಂಬ ಸುದ್ದಿಯೂ ಇದೆ.ಇದನ್ನು ಪರೀಶೀಲಿಸಿದರೆ, ಚಲನಚಿತ್ರ ವಾಣಿಜ್ಯ ಮಂಡಳಿ ಸಮಸ್ಯೆ ಇನ್ನೂ ಜಟಿಲವಾಗುತ್ತ ಸಾಗಿದೆ ಎನಿಸುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ಸಿನೆಮಾ, ಚಲನಚಿತ್ರ ವಾಣಿಜ್ಯ ಮಂಡಳಿ, ಬಿಕ್ಕಟ್ಟು