ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತುಳು ಚಿತ್ರದಲ್ಲಿ ರಾಜನರ್ತಕಿಯಾಗಿ ಪೂಜಾ ಗಾಂಧಿ! (Kannada cinema | Sandalwood | Pooja gandhi | Tulu cinema)
ಸುದ್ದಿ/ಗಾಸಿಪ್
Bookmark and Share Feedback Print
 
NRB
ಜಾನಪದ ಸಂಸ್ಕ್ರತಿಯನ್ನೊಳಗೊಂಡ ಐತಿಹಾಸಿಕ ಚಿತ್ರ 'ಬೀರೆ ದೆವುಪೂಂಜೆ' ತುಳು ಚಿತ್ರದ ಶೂಟಿಂಗ್‌‌ಗಾಗಿ ಹಳೆಯ ಮನೆಗಳಿಗಾಗಿ ಹುಟುಕಾಟ ನಡೆಸಿದ್ದು, ಬೆಳ್ತಂಗಡಿ, ಸುಳ್ಯ, ಬ್ರಹ್ಮಾವರ ಮುಂತಾದ ಕಡೆ ಚಿತ್ರೀಕರಣ ನಡೆಸಲಾಗುವುದು ಎಂದು ಚಿತ್ರದ ರಾಜ್ಯ ಪ್ರಶಸ್ತಿ ವಿಜೇತ ತುಳು ಚಿತ್ರ, ಕೋಟಿ ಚೆನ್ನಯ್ಯ ನಿರ್ದೇಶಿಸಿದ ಆರ್. ಧನರಾಜ್ ಹೇಳಿದ್ದಾರೆ.

`ಮುಂಗಾರು ಮಳೆ' ಖ್ಯಾತಿಯ ಆಮದು ನಟಿ ಪಂಜಾಬಿ ಹುಡುಗಿ ಪೂಜಾ ಗಾಂಧಿ ಚಿತ್ರದಲ್ಲಿ ರಾಜನರ್ತಕಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಪೂಜಾಗೆ ಇದೊಂದು ಛಾಲೆಂಜ್ ಅಂತೆ. ದೂರದ ಪಂಜಾಬಿನಿಂದ ಬಂದು ಕನ್ನಡ ಕಲಿತೆ. ಈಗ ಏನೂ ಅರಿಯದ ಕನ್ನಡ ಅಂಗ ಭಾಷೆ ತುಳು ಚಿತ್ರದಲ್ಲಿ ನಟಿಸಲು ಸಹಿ ಹಾಕಿದ್ದೇನೆ. ರಿಯಲಿ ಇಟ್ ಇಸ್ ಎ ಛಾಲೆಂಜ್? ಎಂದಿದ್ದಾರೆ.
NRB


ಚಿತ್ರಕ್ಕೆ ಬೇಕಾದ ಸುಮಾರು 400 ವರ್ಷಗಳ ಹಿಂದಿನ ಹಳೆಯ ಮನೆಗಳಿಗಾಗಿ ಹುಡುಕಾಟ ನಡೆದಿದ್ದು, ಬೆಳ್ತಂಗಡಿ, ಸುಳ್ಯ, ಬ್ರಹ್ಮಾವರ ಮುಂತಾದ ಕಡೆ ಚಿತ್ರೀಕರಣ ನಡೆಸಲಾಗುವುದು ಎಂದಿದ್ದಾರೆ ನಟ ನವನೀತ್ ಶೆಟ್ಟಿ.

ಇತ್ತೀಚೆಗೆ ಮಂಗಳೂರು ಬಳಿಯ ಪಣಂಬೂರಿನಲ್ಲಿ ಚಿತ್ರದ ಮುಹೂರ್ತ ಮುಗಿದಿದೆ ಎಂದು ತಂಡದ ಮೂಲಗಳು ತಿಳಿಸಿವೆ.

ನಿರ್ಮಾಪಕ ಧನರಾಜ್ ಅವರು 400 ವರ್ಷಗಳ ಹಿಂದೆ ಬಂಟ್ ಸಮುದಾಯದ ಜನಪದ ನಾಯಕನ ಕಥಾವಸ್ತುವನ್ನು ಹೊಂದಿರುವ ಚಿತ್ರವನ್ನು ತೆರೆಯ ಮೇಲೆ ತರಲು ನಿರ್ಧರಿಸಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಹಾಗೂ ಲೀಲಾವತಿ ನಟಿಸುತ್ತಿರುವುದು ಮತ್ತೊಂದು ವಿಶೇಷ. ಗೀತರಚನೆ ಅಮೃತ್ ಸೋಮಶೇಖರ್, ಮಣಿಕಾಂತ್ ಸಂಗೀತ ಹಾಗೂ ಛಾಯಾಗ್ರಹಣ ಸುರೇಶ್ ಬಾಬು ಅವರದು.

ತಾರಾಗಣದಲ್ಲಿ ಆರ್, ಸಿದ್ದಾರ್ಥ್, ಮನೋಹರ್ ಪ್ರಸಾದ್ (ಉದಯವಾಣಿ), ಕದ್ರಿ ನವನೀತ್ ಶೆಟ್ಟಿ, ಡಾ. ಮೋಹನ್ ಆಳ್ವ, ಅರ್ಚನಾ, ಮಾಸ್ಟರ್ ಸಜನ್ ಮುಂತಾದವರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ಸಿನೆಮಾ, ಸ್ಯಾಂಡಲ್ವುಡ್, ಪೂಜಾ ಗಾಂಧಿ, ತುಳು ಚಿತ್ರ