ಗೋಲ್ಡನ್ ಸ್ಟಾರ್ ಗಣೇಶ್ ಸ್ವತಃ ತಾವೇ ನಿರ್ದೇಶಿಸುತ್ತಿರುವ ನೂತನ ಚಿತ್ರ `ಕೂ
NRB
ಲ್'ಗೆ ಈಗಾಗಲೇ ಸಕಲೇಶಪುರ ಸುತ್ತಮುತ್ತಲ ಚಿತ್ರೀಕರಣ ಮುಗಿಸಿ ಬಂದಿದ್ದಾರೆ. ಈ ಚಿತ್ರದಲ್ಲಿ ಪ್ರೇಕ್ಷಕರ ಮುಂದೆ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ಗಣೇಶ್. ಉದ್ದನೆ ಕೂದಲು ಬೆಳೆಸಿ ಗಡ್ಡ ಬಿಟ್ಟು ಚಿತ್ರದ ಮೊದಲಿನಿಂದ ಕೊನೆವರೆಗೂ ತಲೆಗೆ ಬಟ್ಟೆ ಕಟ್ಟಿಕೊಂಡಿದ್ದಾರೆ.
ಕಳೆದ 13 ಚಿತ್ರಗಳಲ್ಲಿ ಒಂದೇ ರೀತಿ ಗಣೇಶನನ್ನು ನೋಡಿದ್ದೀರಿ ಇದರಲ್ಲಿ ವಿಭಿನ್ನವಾಗಿ ಕಾಣಬೇಕೆಂದು ನನ್ನ ಪತ್ನಿ, ನಿರ್ಮಾಪಕಿ ಶಿಲ್ಪಾ ಗಣೇಶ್ ಹಾಗೂ ಕಥೆಯಲ್ಲಿ ಇಂಥಹ ಪಾತ್ರವೇ ಇರುವುದರಿಂದ ಈ ರೀತಿ ಕಾಣಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ ಗೋಲ್ಡನ್ ಸ್ಟಾರ್.
ಈ ಚಿತ್ರಕ್ಕೆ ಹೆಸರಾಂತ ಮೇಕಪ್ ಮ್ಯಾನ್ ಭಾನು ಅವರನ್ನು ನೇಮಿಸಿಕೊಳ್ಳಲಾಗಿದೆ. ಇವರು ಸ್ಟೈಲ್ಕಿಂಗ್ ರಜನಿಕಾಂತ್ ಅವರ ಫೇವರಿಟ್ ಮೇಕಪ್ ಕಲಾವಿದ. ತಮಿಳಿನ ಅನ್ನಿಯನ್ ಹಾಗೂ ಇತ್ತೀಚಿನ `ಎಂದಿರನ್' ಚಿತ್ರಕ್ಕೆ ಇವರದ್ದೇ ಮೇಕಪ್ ಇದೆ.
ಪ್ರಥಮ ಬಾರಿಗೆ ನಿರ್ದೇಶನದ ಹೊಣೆಯನ್ನು ಹೊತ್ತಿರುವ ಗಣೇಶ್ ನಿರ್ದೇಶಕನಾಗಿ ಕೆಲಸ ಮಾಡುವುದು ತುಂಬಾ ಮಜಾ ಕೊಡುತ್ತಿದೆ. ಅಲ್ಲದೆ ಒಳ್ಳೆಯ ಕಾರ್ಯ, ಇದರಿಂದ ಬಹಳಷ್ಟು ಕಲಿತೆ ಎಂದಿದ್ದಾರೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ.