ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರದ ಜಿ.ಎಂ. ರಿಜಾಯ್ಸ್‌ನಲ್ಲಿ ಮುಹೂರ್ತವನ್ನು ಆಚರಿಸಿಕೊಂಡ ಈ ಚಿತ್ರಕ್ಕೆ ಸಂದೇಶ್ ನಾಯಕ ನಟನಾಗಿ ಅಭಿನಯಿಸಲಿದ್ದಾರೆ. `ಮುಂಗಾರು ಮಳೆ ಖ್ಯಾತಿಯ ಪೂಜಾ ಗಾಂಧಿ ಈಗ `ಜೈಹಿಂದ್ ಎನ್ನುತ್ತಿದ್ದಾರೆ.
ಕಳೆದ ಬಾರಿ `ಈ ಸಂಭಾಷಣೆ ಚಿತ್ರ ಮಾಡಿದ್ದ ಮೇಜರ್ ಶ್ರೀನಿವಾಸ್ ಅವರ ಪುತ್ರ ಈ ಚಿತ್ರ ನಾಯಕ. ಶ್ರೀನಿವಾಸ್ ಅವರೇ ಚಿತ್ರ ಕಥೆಯನ್ನು ಬರೆದು ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ. ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಎ. ವೇಣುಗೋಪಾಲ್ ನಿಭಾಯಿಸುತ್ತಿದ್ದು, ಇದು ನನ್ನ ನಿರ್ದೇಶನದ ಮೂರನೆ ಚಿತ್ರ ಎಂದಿದ್ದಾರೆ. ಭಯೋತ್ಪಾದನೆಯನ್ನು ನಿಗ್ರಹ ಮಾಡಲು ಹೊರಟ ನಾಯಕನ ಕಥಾವಸ್ತುವುಳ್ಳ ಚಿತ್ರಕಥೆಯಾಗಿದೆ.
ಕಥೆ ಉತ್ತರ ಭಾರತದ ಕಾಶಿ (ಬನಾರಸ್)ನಿಂದ ಆರಂಭವಾಗಿ ಬೆಂಗಳೂರಿನಲ್ಲಿ ಮುಂದುವರಿಯುತ್ತದೆ. ಚಿತ್ರದಲ್ಲಿ ನಾಯಕ ಮೂರು ಪಾತ್ರಗಳಲ್ಲಿ ಕಾಣಿಕೊಳ್ಳಲಿದ್ದು, ಚಿತ್ರದಲ್ಲಿ ನಿಜವಾದ ಸೈನಿಕರನ್ನೇ ಬಳಸಿಕೊಳ್ಳುತ್ತಿರುವುದಾಗಿ ನಿರ್ಮಾಪಕರು ಹೇಳಿದ್ದಾರೆ. ಎರಡು ಹಾಡುಗಳನ್ನು ರಾಜಾಸ್ತಾನದಲ್ಲಿ ಚಿತ್ರೀಕರಿಸಲು ಹೊರಟಿದ್ದಾರಂತೆ.
ಈ ಸಂದರ್ಭದಲ್ಲಿ ನಾಯಕ ಸಂದೇಶ್ ತಮ್ಮ ಮನದಾಳದ ಸಂದೇಶವನ್ನು ಹೊರಗೆಡಹಿದ್ದು ಹೀಗೆ; ಬಾಲ್ಯದಿಂದಲೇ ನಾನು ಮಿಲಿಟರಿ ಸೇರಬೇಕೆಂದು ಬಯಸಿದ್ದೆ. ಮಿಲಿಟರಿ ಅಧಿಕಾರಿಯಾಗಿ ದೇಶವನ್ನು ಕಾಪಾಡಬೇಕೆಂಬ ಬಯಕೆ ಇತ್ತು. ಆದರೆ, ಚಿತ್ರರಂಗದಲ್ಲಿ ಪಾದಾರ್ಪಣ ಮಾಡಬೇಕಾಗಿ ಬಂತು. ಆದರೂ ನನಗೆ ಈ ಚಿತ್ರದಿಂದ ನನ್ನ ಆಸೆಯನ್ನು ಪೂರ್ಣಗೊಳಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ಸಂದೇಶ್.